Petrol Diesel Price Today: ವೀಕೆಂಡ್​ನಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ.. ಪ್ರಯಾಣಕ್ಕೂ ಮುನ್ನ ಒಮ್ಮೆ ಗಮನಿಸಿ

Petrol Diesel Rate In Bangalore Today: ಎರಡು ದಿನಗಳ ಕಾಲ ಪೆಟ್ರೋಲ್​, ಡೀಸೆಲ್​ ದರ ಇಳಿಕೆಯ ಹಾದಿ ಹಿಡಿದಿತ್ತು. ಆದರೆ ಇಂದು ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

Petrol Diesel Price Today: ವೀಕೆಂಡ್​ನಲ್ಲಿ ಪೆಟ್ರೋಲ್​, ಡೀಸೆಲ್​ ದರ ಹೀಗಿದೆ.. ಪ್ರಯಾಣಕ್ಕೂ ಮುನ್ನ ಒಮ್ಮೆ ಗಮನಿಸಿ
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Mar 28, 2021 | 10:04 AM

ಬೆಂಗಳೂರು: ಮಾರ್ಚ್​ ತಿಂಗಳಲ್ಲಿ ಸತತ ಎರಡು ದಿನಗಳ ಕಾಲ ಪೆಟ್ರೋಲ್, ಡೀಸೆಲ್​ ದರ ಇಳಿಕೆ ಕಂಡಿತ್ತು. ದರ ಇಳಿಕೆಯತ್ತ ಸಾಗುತ್ತದೆ ಎಂದು ಗ್ರಾಹಕರು ಕಾಯುತ್ತಿದ್ದರು. ಆದರೆ ನಂತರದಲ್ಲಿ ದರ ಮತ್ತೆ ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಇಂಧನ ದರ ಇಳಿಕೆಯತ್ತ ಸಾಗುತ್ತಿದ್ದಂತೆ ಜನರು ನಿರಾಳರಾಗಿದ್ದರು. ಆದರೆ ಮೂರು ದಿನಗಳಾದರೂ ದರ ಸ್ಥಿರತೆ ಕಂಡಿದೆ. ದರ ಇನ್ನೂ ಇಳಿಕೆಯತ್ತ ಸಾಗಬೇಕು ಎಂಬುದು ಗ್ರಾಹಕರು ಹೇಳುತ್ತಿರುವ ಮಾತು.

ಕಚ್ಚಾ ತೈಲ ದರ ಕಡಿಮೆಯಾಗುತ್ತಿದ್ದರೂ ಪೆಟ್ರೋಲ್​, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಗಳು ಇರಲಿಲ್ಲ. ಐದು ರಾಜ್ಯಗಳ ಚುನಾವಣೆ ಎದುರಿಗಿರುವುದರಿಂದ ಇಂಧನ ದರ ಮಾರ್ಚ್​ ತಿಂಗಳಲ್ಲಿ 26 ದಿನಗಳ ಕಾಲ ಸ್ಥಿರತೆಯನ್ನು ಕಾಪಾಡಿಕೊಂಡಿತ್ತು. ತದ ನಂತರ ಸತತ ಎರಡು ದಿನಗಳ ಕಾಲ ದರ ಇಳಿಕೆಯತ್ತ ಸಾಗುವುದನ್ನು ಕಂಡ ಗ್ರಾಹಕರು ಸಂತೋಷಗೊಂಡಿದ್ದರು. ಆದರೆ ಇದೀಗ ಸತತ ಮೂರು ದಿನಗಳ ಕಾಲ ಇಂಧನ ದರ ಮತ್ತೆ ಸ್ಥಿರವಾಗಿಯೇ ಉಳಿದುಕೊಂಡಿದೆ. ಇಂದು ಮಾರ್ಚ್​ 28ರಂದು ಇಂಧನ ದರದಲ್ಲಿ ಯಾವುದೇ ಬದಲಾವಣೆಗಳಿಲ್ಲ.

ದೇಶದ ವಿವಿಧ ನಗರಗಳಲ್ಲಿ ಇಂಧನ ದರ ಹೇಗಿದೆ ಎಂಬುದನ್ನು ನೋಡುವುದಾದರೆ, ದೆಹಲಿಯಲ್ಲಿ ಇಂದು ಪ್ರತಿ ಲೀಟರ್​ ಪೆಟ್ರೋಲ್​ 90.78 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ ದರ 81.10 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೆಯೇ ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.19 ರೂಪಾಯಿಗೆ ಮಾರಾಟವಾಗುತ್ತಿದೆ. ಮತ್ತು ಪ್ರತಿ ಲೀಟರ್​ ಡೀಸೆಲ್​ಅನ್ನು ಗ್ರಾಹಕರು 88.20 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.

ಇನ್ನು, ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 93.82 ರೂಪಾಯಿ, ಪ್ರತಿ ಲೀಟರ್​ ಡೀಸೆಲ್​ 85.99 ರೂಪಾಯಿ ಇದೆ. ನಗರದಲ್ಲಿ 94 ರೂಪಾಯಿಯನ್ನು ದಾಟಿದ್ದ ಪೆಟ್ರೋಲ್​ ದರವನ್ನು ನೋಡಿದ್ದ ಗ್ರಾಹಕರು ಇನ್ನೊಂದು ಸಿಕ್ಸರ್​ ಬಾರಿಸಿದರೆ ಶತಕ ಬಾರಿಸುತ್ತದೆ ಪೆಟ್ರೋಲ್​ ಎಂದು ಮಾತನಾಡಿದ್ದರು. ನಂತರ ಇಂಧನ ದರದಲ್ಲಿ ಯಾವುದೇ ಬದಲಾವಣೆಗಳು ಕಂಡಿರಲ್ಲಿಲ್ಲ. ಇದೇ ತಿಂಗಳ ಮಾರ್ಚ್​ 26ರವರೆಗೆ ಪೆಟ್ರೋಲ್​, ಡೀಸೆಲ್​ ದರ ಸ್ಥಿರತೆ ಕಾಪಾಡಿಕೊಂಡಿತು. ಮೂರು ದಿನಗಳ ಹಿಂದೆ ಒಂದೇ ಬಾರಿ ದರದಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ಇಂಧನ ದರ ಇಳಿಕೆಯತ್ತ ಸಾಗುತ್ತಿದೆ ಎಂಬ ವಿಷಯ ತಿಳಿದ ಗ್ರಾಹಕರಲ್ಲಿ ಖುಷಿ ಮುಗಿಲು ಮುಟ್ಟಿತ್ತು. ಸತತ ಎರಡನೇ ದಿನವೂ ಇಂಧನ ದರ ಇಳಿಕೆ ಕಂಡಿತ್ತು. ಆದರೀಗ ಮೂರ ದಿನಗಳವರೆಗೆ ಇಂಧನ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.

ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 90.98 ರೂಪಾಯಿ ಇದ್ದು, ಪ್ರತಿ ಲೀಟರ್​ ಡೀಸೆಲ್​ ದರ 83.98 ರೂಪಾಯಿ ಇದೆ. ಪುಣೆಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 96.83 ರೂಪಾಯಿ ಇದ್ದು, ಪ್ರತಿ ಲೀಟರ್​ ಡೀಸೆಲ್​ಅನ್ನು ಗ್ರಾಹಕರು 86.51 ರೂಪಾಯಿಗೆ ಕೊಳ್ಳುತ್ತಿದ್ದಾರೆ. ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವನ್ನು ಪರಿಶೀಲಿಸಿದಾಗ ಪ್ರತಿ ಬ್ಯಾರೆಲ್​ಗೆ ಅಮೆರಿಕಾ ಡಾಲರ್​ 64.5ರಷ್ಟಿದೆ. ಹಾಗೆಯೇ ಪೆಟ್ರೋಲ್​ ಮೇಲೆ 32.98 ರೂಪಾಯಿ ಹಾಗೂ ಡೀಸೆಲ್​ ಮೇಲೆ 31.80ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ.

ಇದನ್ನೂ ಓದಿ: Petrol Price: ಪೆಟ್ರೋಲ್ ದರ ಮತ್ತೂ ಹೆಚ್ಚಬಹುದು, ಇದು ನನ್ನನ್ನು ಧರ್ಮಸಂಕಟಕ್ಕೆ ನೂಕಿದೆ: ನಿರ್ಮಲಾ ಸೀತಾರಾಮನ್​

Petrol Price hike | ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ: ಒಂದು ಸಿಕ್ಸರ್​​ ಬಾರಿಸಿದರೆ ಶತಕ ಗ್ಯಾರಂಟಿ! ಆದರೆ ಗ್ರಾಹಕರಿಗೆ ನಿರಾಶೆ, ಆಕ್ರೋಶ