Petrol Price hike | ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ: ಒಂದು ಸಿಕ್ಸರ್​​ ಬಾರಿಸಿದರೆ ಶತಕ ಗ್ಯಾರಂಟಿ! ಆದರೆ ಗ್ರಾಹಕರಿಗೆ ನಿರಾಶೆ, ಆಕ್ರೋಶ

Petrol Price hike | ಬೆಂಗಳೂರಿನಲ್ಲಿ ಇಂದು ಲೀ. ಪೆಟ್ರೋಲ್ ಬೆಲೆ ₹93.61 ಇದ್ದರೆ ಲೀಟರ್ ಡೀಸೆಲ್ ಬೆಲೆ 81.84 ರೂಪಾಯಿಗೆ ಏರಿಕೆಯಾಗಿದೆ. ದೇಶದ ಇತರೆ ಭಾಗಗಳಲ್ಲಿಯೂ ದಿನೇದಿನೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಒಂದೆರಡು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್​ ಬೆಲೆ ಲೀಟರ್​ಗೆ ನೂರು ರೂಪಾಯಿಗಿಂತ ಹೆಚ್ಚಾಗಿದೆ.ವಾಹನ ಸವಾರರಿಗೆ ಇದು ಬಿಗ್ ಶಾಕ್ ಆಗಿದೆ.

Petrol Price hike | ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ: ಒಂದು ಸಿಕ್ಸರ್​​ ಬಾರಿಸಿದರೆ ಶತಕ ಗ್ಯಾರಂಟಿ! ಆದರೆ ಗ್ರಾಹಕರಿಗೆ ನಿರಾಶೆ, ಆಕ್ರೋಶ
ಸಾಂದರ್ಭಿಕ ಚಿತ್ರ
Follow us
|

Updated on:Feb 20, 2021 | 2:00 PM

ಬೆಂಗಳೂರು: ಪೆಟ್ರೋಲ್​, ಡೀಸೆಲ್​ ಮತ್ತು ಅಡುಗೆ ಅನಿಲ ಬೆಲೆಗಳು ವಿಪರೀತ ಎಂಬಷ್ಟು ಜಾಸ್ತಿಯಾಗುತ್ತಿರುವುದು ಜನಸಾಮಾನ್ಯರ ಕೆಂಗಣ್ಣಿಗೆ ಕಾರಣವಾಗಿದೆ. ಇದೇ ವೇಳೆ ಜನರನ್ನು ಹೈರಾಣಗೊಳಿಸಿರುವುದು ಮತ್ತು ಮತ್ತಷ್ಟು ಆತಂಕಕ್ಕೆ ದೂಡಿರುವುದು ಏನಪಾ ಅಂದ್ರೆ ಈ ಮೂರೂ ಉತ್ಪನ್ನಗಳ ಬೆಲೆ ಹೆಚ್ಚಿದಂತೆಲ್ಲಾ ಇತರೆ ದೈನಂದಿನ ಸಾಮಾನ್ಯ ಸರಕುಗಳ ಬೆಲೆ ಗಗನಕ್ಕೆ ಚಿಮ್ಮುವುದು ಸಾಮಾನ್ಯ. ಹಾಗಾಗಿ ಸಹಜವಾಗಿಯೇ ತೈಲೋತ್ಪನ್ನ ಬೆಲೆಗಳು ದುಬಾರಿಯಾಗಿರುವುದರಿಂದ ಜನಕ್ಕೆ ಕಷ್ಟಕಷ್ಟವಾಗಿದೆ.

ಪೆಟ್ರೋಲ್​ ಬಂಕ್​ಗಳಲ್ಲಿ ಗ್ರಾಹಕರ ದೃಷ್ಟಿ ಹೆಚ್ಚುತ್ತಿರುವ ದರ ಮೀಟರ್​ ನತ್ತ.. ಬೆಂಗಳೂರಿನಲ್ಲಿ ಇಂದಿನ ಪೆಟ್ರೋಲ್ ಬೆಲೆಯನ್ನು ನೋಡುವುದಾದರೆ ಲೀಟರ್​ಗೆ 93.61 ರೂಪಾಯಿಯಷ್ಟಾಗಿದೆ. ಜಸ್ಟ್​ ಇನ್ನು ಒಂದು ಸಿಕ್ಸರ್​​ ಬಾರಿಸಿದರೆ ಶತಕ ಗ್ಯಾರಂಟಿ ಎಂಬಂತಾಗಿದೆ! ಕ್ರಿಕೆಟ್​​ ಆಟದಲ್ಲಿ ಶತಕವೆಂದರೆ ಸಂಭ್ರಮಿಸಬಹುದು. ಆದರೆ ದೈನಂದಿನ ಬದುಕಿನಲ್ಲಿ ಈ ಪರಿಯ ಶತಕ ಗ್ರಾಹಕರನ್ನು ನಿರಾಶೆ ಮತ್ತು ಆಕ್ರೋಶದ ಮಡುವಿಗೆ ದೂಡಿದೆ. ಗಮನಾರ್ಹ ಸಂಗತಿಯೆಂದರೆ ತೈಲೋತ್ಪನ್ನಗಳಗೆ ಕಡಿವಾಣ ಹಾಕುವುದು ಅಸಂಭವನೀಯ. ಏನಿದ್ದರೂ ಅವುಗಳ ಬಳಕೆಗೆ ಕಡಿವಾಣ ಹಾಕುವುದು ಮತ್ತು ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳುವುದಷ್ಟೇ ಇದಕ್ಕೆ ಪರಿಹಾರ ಎಂಬ ಧಾಟಿಯಲ್ಲಿ ಕೇಂದ್ರ ಸರ್ಕಾರ ಮಾತನಾಡಿರುವುದು ಇನ್ನೂ ಆತಂಕದ ವಿಚಾರವಾಗಿದೆ.

ಬೆಂಗಳೂರಿನಲ್ಲಿ ಇಂದು ಲೀ. ಪೆಟ್ರೋಲ್ ಬೆಲೆ ₹93.61 ಇದ್ದರೆ ಲೀಟರ್ ಡೀಸೆಲ್ ಬೆಲೆ 81.84 ರೂಪಾಯಿಗೆ ಏರಿಕೆಯಾಗಿದೆ. ದೇಶದ ಇತರೆ ಭಾಗಗಳಲ್ಲಿಯೂ ದಿನೇದಿನೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ. ಒಂದೆರಡು ರಾಜ್ಯಗಳಲ್ಲಿ ಈಗಾಗಲೇ ಪೆಟ್ರೋಲ್​ ಬೆಲೆ ಲೀಟರ್​ಗೆ ನೂರು ರೂಪಾಯಿಗಿಂತ ಹೆಚ್ಚಾಗಿದೆ.ವಾಹನ ಸವಾರರಿಗೆ ಇದು ಬಿಗ್ ಶಾಕ್ ಆಗಿದೆ.

ಕೊರೊನಾ, ಲಾಕ್​ಡೌನ್ ನಂತರವೂ ಜೀವನ ದುಸ್ತರವಾಗಿದೆ

ಕೊರೊನಾ, ಲಾಕ್​ಡೌನ್ ಕಾರಣದಿಂದ ಜನಜೀವನ ಅತಂತ್ರವಾಗಿತ್ತು. ಇದೀಗ ಹೊಸ ವರ್ಷದಲ್ಲಿ, ಹೊಸ ಜೀವನ ಸುಸೂತ್ರವಾಗಿ ನಡೆಯುವ ಆಶಾಭಾವನೆ ವ್ಯಕ್ತವಾಗಿತ್ತು. ಆದರೆ, ತೈಲಬೆಲೆ ಏರಿಕೆ ಜನಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ಈಡು ಮಾಡಿದೆ. ನಾವು ಮಾರುಕಟ್ಟೆಯಲ್ಲಿ ನೀಡುವ ತೈಲಬೆಲೆಯ 60 ಪ್ರತಿಷತ ದರವು ತೆರಿಗೆ ಮೊತ್ತವಾಗಿರುತ್ತದೆ.

ಇದೀಗ ಅಧಿಕ ಮಟ್ಟದಲ್ಲಿ ಏರಿಕೆಯಾಗುತ್ತಿರುವ ತೈಲಬೆಲೆಯ ಕಾರಣದಿಂದ, ತೆರಿಗೆ ಮೊತ್ತವನ್ನು ಖಡಿತಗೊಳಿಸಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಬೆಂಗಳೂರು ಮಾತ್ರವಲ್ಲದೆ, ದೇಶದ ಮುಖ್ಯ ನಗರಗಳಾದ ದೆಹಲಿ, ಮುಂಬೈ ಮುಂತಾದೆಡೆ ಪೆಟ್ರೋಲ್ ದರ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ದರ ಈಗಾಗಲೇ 100ರ ಗಡಿಯತ್ತ ದಾಪುಗಾಲು ಹಾಕಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆಯ ವಿಚಾರವಾಗಿ ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಇತ್ತೀಚೆಗೆ ಒಂದು  ಹೇಳಿಕೆ ನೀಡಿದ್ದರು. ತೈಲ ಉತ್ಪಾದಿಸುವ ದೇಶಗಳು, ಕೊವಿಡ್-19 ಕಾರಣದಿಂದ ತೈಲ ತಯಾರಿಕೆಯ ಪ್ರಮಾಣವನ್ನು ಮೊಟಕುಗೊಳಿಸಿವೆ. ಕಡಿಮೆ ಇಂಧನ ಉತ್ಪಾದನೆ, ಇಂಧನ ಬೇಡಿಕೆ ಹಾಗೂ ಪೂರೈಕೆಯ ಅಸಮತೋಲನದ ಕಾರಣದಿಂದ ತೈಲ ಬೆಲೆ ಏರಿಕೆಯಾಗುತ್ತಿದೆ ಎಂದು ಬೆಲೆ ಏರಿಕೆಯ ಬಗ್ಗೆ ಸಮಜಾಯಿಷಿ  ನೀಡಿದ್ದರು.

ಇದನ್ನೂ ಓದಿ: ದರ ದರನೇ ಏರುತ್ತಿದೆ ಇಂಧನ ದರ.. 90ರ ಗಡಿಯತ್ತ ಪೆಟ್ರೋಲ್ ಬೆಲೆ ನಾಗಾಲೋಟ; ಗ್ರಾಹಕ ಹೈರಾಣ

ಇದನ್ನೂ ಓದಿ: Petrol Price: 3 ದಿನ ನಂತರ ಪೆಟ್ರೋಲ್​ ಬೆಲೆ ಏರಿತು.. ಭಾರತದ ವಿವಿಧ ನಗರಗಳಲ್ಲಿ ಇಂದಿನ ದರ ಹೀಗಿದೆ

Published On - 10:46 am, Sat, 20 February 21

ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
‘ಬಿಗ್ ಬಾಸ್​ನ ಮಿಸ್ ಮಾಡಿಕೊಳ್ಳುತ್ತೇನೆ’; ಜಗದೀಶ್​ ಮೊದಲ ರಿಯಾಕ್ಷನ್​
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ಇಡಿ ವಿಚಾರಣೆ ಬೆನ್ನಲ್ಲೇ ದೇವರ ಮೊರೆ ಹೋದ ತಮನ್ನಾ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ರೆಡ್ಡಿ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಸಹೋದರ ಸೋಮಶೇಖರ್ ರೆಡ್ಡಿ ಭಾಗಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ
ಸರ್ಕಾರ ಅಸ್ಥಿರಗೊಳಿಸಲು ಇಡಿ ಬಳಕೆ: ಕೇಂದ್ರದ ವಿರುದ್ಧ ಡಿಕೆಸು ವಾಗ್ದಾಳಿ