Facebook Fraud | ಸಚಿವ ಸುರೇಶ್​ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ; ನಕಲಿ ಖಾತೆದಾರರಿಂದ ಹಣಕ್ಕೆ ಬೇಡಿಕೆ

S Suresh kumar: ನಕಲಿ ಖಾತೆಗಳನ್ನು ತೆರೆದು ಸಾಮಾನ್ಯವಾಗಿ ವಂಚಕರು ದುಡ್ಡನ್ನು ಬೇಡಿಕೆ ಇಡುತ್ತಾರೆ. ಅದರಂತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ ತೆರೆದ ಖಾತೆದಾರರು ಇದೇ ರೀತಿಯ ಬೇಡಿಕೆಯನ್ನು ಇಟ್ಟಿರುವುದು ತಿಳಿದುಬಂದಿದೆ.

Facebook Fraud | ಸಚಿವ ಸುರೇಶ್​ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ; ನಕಲಿ ಖಾತೆದಾರರಿಂದ ಹಣಕ್ಕೆ ಬೇಡಿಕೆ
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್
Follow us
sandhya thejappa
| Updated By: ಸಾಧು ಶ್ರೀನಾಥ್​

Updated on:Feb 20, 2021 | 11:54 AM

ಬೆಂಗಳೂರು: ಸಾರ್ವಜನಿಕರ ಹೆಸರಲ್ಲಿ ಫೇಸ್​ಬುಕ್​​ ನಕಲಿ ಖಾತೆಗಳನ್ನು ತೆರೆದಿರುವುದು ಕೇಳಿದ್ದೇವೆ. ಅದಾದಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸುವಂತೆ ಕೆಲ ಅಧಿಕಾರಿಗಳ ಹೆಸರಿನಲ್ಲಿಯೂ ಫೇಸ್​ಬುಕ್​​ ನಕಲಿ ಖಾತೆಗಳನ್ನು ತೆರೆದು ಒಂದಷ್ಟು ದುಡ್ಡು ಮಾಡಿಕೊಂಡಿದ್ದಾರೆ ಖದೀಮರು! ಇದೀಗ ಇನ್ನೂ ಒಂದು ಹೆಜ್ಜೆ ಮುಂದುವರೊದು ಸಚಿವರ ಹೆಸರಲ್ಲೂ ಫೇಸ್​ಬುಕ್​​ ನಕಲಿ ಖಾತೆಗಳು ತೆರೆಯುವ ಆಟ ಶುರುವಾಗಿದೆ. ಯಾವುದೇ ಆತಂಕ, ಭಯವಿಲ್ಲದೇ ಈ ರೀತಿಯ ಕೆಲಸಗಳು ನಡೆಯುತ್ತಿದ್ದು,  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆಯನ್ನು ತೆರೆದಿದ್ದಾರೆ. ನಕಲಿ ಖಾತೆಗಳನ್ನು ತೆರೆದು ಸಾಮಾನ್ಯವಾಗಿ ವಂಚಕರು ದುಡ್ಡನ್ನು ಬೇಡಿಕೆ ಇಡುತ್ತಾರೆ. ಅದರಂತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ ತೆರೆದ ಖಾತೆದಾರರು ಇದೇ ರೀತಿಯ ಬೇಡಿಕೆಯನ್ನು ಇಟ್ಟಿರುವುದು ತಿಳಿದುಬಂದಿದೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚಕರು ಹಣ ಕೇಳಿರುವ ಮಾಹಿತಿ ತಿಳಿದುಬಂದಿದ್ದು, ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 5 ಸಾವಿರ ರೂ. ಹಣ ನೀಡುವಂತೆ ಕೇಳಿದ ನಕಲಿ ಖಾತೆದಾರರು ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಲು ಮನವಿ ಮಾಡಿದರು. ಅಲ್ಲದೇ ನೀಡಿದ ಹಣವನ್ನು ಸಂಜೆಯೊಳಗೆ ವಾಪಸ್​ ಮಾಡುತ್ತೀನಿ ಎಂದು ಹೇಳಿದರು. ಸದ್ಯ ವಿಚಾರ ತಿಳಿದ ಸಚಿವರ ಆಪ್ತ ಕಾರ್ಯದರ್ಶಿ ಪಿ.ಎಂ. ಚಿದಂಬರ ಸಿಐಡಿ ಡಿಜಿಗೆ ದೂರು ನೀಡಿದ್ದಾರೆ.

ಸುರೇಶ್ ಕುಮಾರ್ S ಎಂಬ ಹೆಸರಲ್ಲಿ ನಕಲಿ ಖಾತೆ ತೆರೆದಿದ್ದು, ಖಾತೆದಾರರು ಹಲವು ಜನರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ರಿಕ್ವೆಸ್ಟ್ ಅಕ್ಸೆಪ್ಟ್​ ಮಾಡಿದವರೊಂದಿಗೆ ಮೊದಲು ಹೇಗಿದ್ದೀರಾ? ಎಂದು ಕುಶಲೋಪರಿ ವಿಚಾರಿಸಿ ತಾನು ತೀರಾ ಕಷ್ಟದಲ್ಲಿದ್ದೇನೆ. ತಕ್ಷಣ ಹಣ ನೀಡಿ ಎಂದು ಕೇಳಿಕೊಂಡಿದ್ದಾರೆ. ಅಲ್ಲದೇ ಹಣವನ್ನು ವರ್ಗಾಯಿಸಲು ಗೂಗಲ್ ಪೇ ಲಿಂಕ್ ಇರುವ ಮೊಬೈಲ್ ನಂಬರ್​ನ ಕಳುಹಿಸಿದ್ದಾರೆ. ಇದರ ಜೊತೆಗೆ ನೀಡಿದ ಹಣವನ್ನು ಸಂಜೆಯೊಳಗೆ ಹಿಂದಿರುಗಿಸುತ್ತೇನೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ.

ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೆಸ್​ಬುಕ್ ಖಾತೆ ಹಾಗೂ ಚಾಟ್​ನಲ್ಲಿ ಹಣ ಬೇಡಿಕೆಯಿಟ್ಟ ಖಾತೆದಾರರು.

ವೈಯಕ್ತಿಕ ಫೇಸ್​ಬುಕ್ ಖಾತೆಯ ಮಾದರಿಯಲ್ಲೇ ಕಿಡಿಗೇಡಿಗಳು ನಕಲಿ ಖಾತೆ ಸೃಷ್ಟಿಸಿರುವ ವಿಚಾರ ಸಚಿವ ಸುರೇಶ್ ಕುಮಾರ್​ಗೆ ಫೆಬ್ರವರಿ 11 ಕ್ಕೆ ತಿಳಿದುಬಂದಿದೆ. ಈ ರೀತಿಯ ನಕಲಿ ಖಾತೆಯನ್ನು ತೆರೆದಿರುವವರನ್ನು ಪತ್ತೆಹಚ್ಚಿ, ನಕಲಿ ಖಾತೆಯನ್ನು ರದ್ಧುಪಡಿಸಬೇಕು. ಮಾತ್ರವಲ್ಲದೇ ನಕಲಿ ಖಾತೆಯನ್ನು ಸೃಷ್ಟಿಸಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಚಿವ ಎಸ್.ಸುರೇಶ್ ಕುಮಾರ್​ರವರ ಆಪ್ತ ಕಾರ್ಯದರ್ಶಿ ಪಿ.ಎಂ.ಚಿದಂಬರ ಸೈಬರ್ ಕ್ರೈಂಗೆ ದೂರನ್ನು ಸಲ್ಲಿಸಿದ್ದಾರೆ.

ಸೈಬರ್ ಕ್ರೈಂಗೆ ದೂರನ್ನು ಸಲ್ಲಿಸಿದ ಎಸ್.ಸುರೇಶ್ ಕುಮಾರ್​ರವರ ಆಪ್ತ ಕಾರ್ಯದರ್ಶಿ ಪಿ.ಎಂ.ಚಿದಂಬರ

ಇದನ್ನೂ ಓದಿ: ಹುಡುಗಿ ಹೆಸರಿನ ಫೇಸ್‌ಬುಕ್ ಮಾಯೆ: 3 ವರ್ಷದಲ್ಲಿ ₹15 ಲಕ್ಷ ಮೋಸ ಹೋದ ಗ್ರಾಮಸ್ಥ!

ಇದನ್ನೂ ಓದಿ:  ಪೊಲೀಸ್​ ಅಧಿಕಾರಿ ಆಯ್ತು, ಈಗ ಕ್ಷೇತ್ರ ಶಿಕ್ಷಣಾಧಿಕಾರಿ ಹೆಸರಲ್ಲಿ ಪಂಗನಾಮಕ್ಕೆ ಸ್ಕೆಚ್​, ಯಾವೂರಲ್ಲಿ?

ಇದನ್ನೂ ಓದಿ: ಡಾಲಿ ಧನಂಜಯ್​ ಹೆಸರಲ್ಲಿ ವಂಚನೆ; ಅಪರಿಚಿತರ ಪೋಸ್ಟ್​ ನಂಬಿ ಮೋಸ ಹೋಗ್ಬೇಡಿ ಎಂದ ನಟ

Published On - 11:53 am, Sat, 20 February 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್