ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಜನರಿಗೆ ಗುಡ್​ನ್ಯೂಸ್​ ನೀಡಿದ ಸೆರಮ್​ ಇನ್ಸ್ಟಿಟ್ಯೂಟ್

ಅಮೆರಿಕದ ಲಸಿಕೆ ಅಭಿವೃದ್ಧಿ ಸಂಸ್ಥೆ ನೊವಾವಾಕ್ಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೊವಾವ್ಯಾಕ್ಸ್​ ಪ್ರಯೋಗ ಭಾರತದಲ್ಲಿ ಆರಂಭವಾಗಿದೆ. ಇದು ಯಶಸ್ವಿಯಾದರೆ ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ.

ಕೊರೊನಾ ಹೆಚ್ಚುತ್ತಿರುವ ಮಧ್ಯೆಯೇ ಜನರಿಗೆ ಗುಡ್​ನ್ಯೂಸ್​ ನೀಡಿದ ಸೆರಮ್​ ಇನ್ಸ್ಟಿಟ್ಯೂಟ್
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
|

Updated on:Mar 27, 2021 | 8:34 PM

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಕಾಣಿಸಿಕೊಂಡಿದೆ. ನಿತ್ಯ ಕೊರೊನಾ ವೈರಸ್​ ಪ್ರಕರಣ ಹೆಚ್ಚುತ್ತಿರುವುದು ಸಾರ್ವಜನರಿಕೆ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಕೊರೊನಾ ನಿಯಂತ್ರಣಕ್ಕೆ ಬೇಕಿರುವ ಅಗತ್ಯಕ್ರಮವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ಈ ಮಧ್ಯೆ ವಿಶ್ವದ ಅತಿ ದೊಡ್ಡ ಔಷಧ ತಯಾರಿಕಾ ಸಂಸ್ಥೆ ಸೆರಮ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ ಜನಸಾಮಾನ್ಯರಿಗೆ ಗುಡ್​ ನ್ಯೂಸ್​ ಒಂದನ್ನು ನೀಡಿದೆ. ಅಮೆರಿಕದ ಲಸಿಕೆ ಅಭಿವೃದ್ಧಿ ಸಂಸ್ಥೆ ನೊವಾವಾಕ್ಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕೊವಾವ್ಯಾಕ್ಸ್​ ಪ್ರಯೋಗ ಭಾರತದಲ್ಲಿ ಆರಂಭವಾಗಿದೆ. ಇದು ಯಶಸ್ವಿಯಾದರೆ ಕೊರೊನಾ ವಿರುದ್ಧ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ.

ಈ ಬಗ್ಗೆ ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ಕಂಪನಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನವಾಲ್ಲಾ ಮಾಹಿತಿ ನೀಡಿದ್ದಾರೆ. 2021ರ ಸೆಪ್ಟೆಂಬರ್ ವೇಳೆಗೆ ಕೊವಾವ್ಯಾಕ್ಸ್​ ಲಭ್ಯಾವಾಗುವ ಸಾಧ್ಯತೆಯಿದೆ. ಇದು ಇಂಗ್ಲೆಂಡ್​ನಲ್ಲಿ ಶೇಕಡಾ 89.3 ರಷ್ಟು ಪರಿಣಾಮಕಾರಿಯಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಕೊವೊವಾಕ್ಸ್ ಲಸಿಕೆಯನ್ನು ಜೂನ್​ ವೇಳೆಗೆ ಭಾರತದಲ್ಲಿ ಪ್ರಾರಂಭಿಸುವ ಆಶಯವನ್ನು ಅವರು ಹೊಂದಿದ್ದರು.

ಭಾರತದಲ್ಲಿ ಕೊರೊನಾ ವೈರಸ್ ಕ್ಷಿಪ್ರಗತಿಯಲ್ಲಿ ಹಬ್ಬುತ್ತಿದೆ. 24 ಗಂಟೆಗಳಲ್ಲಿ 62,258 ಹೊಸ ಪ್ರಕರಣಗಳು ವರದಿಯಾಗಿದೆ. ಕಳೆದ ಅಕ್ಟೋಬರ್ 16ರಿಂದ ದಾಖಲಾಗಿರುವ ಪ್ರಕರಣಗಲ್ಲಿ ಇದೇ ಅತಿಹೆಚ್ಚಿನ ಸಂಖ್ಯೆಯಾಗಿದೆ. ಶುಕ್ರವಾರ ವರದಿಯಾಗಿರುವ ಪ್ರಕರಣಗಳಿಗೆ ಹೋಲಿಸಿದರೆ ಶನಿವಾರದ ಪ್ರಕರಣಗಳಲ್ಲಿ ಶೇಕಡಾ 5.3 ಹೆಚ್ಚಳವಾಗಿದೆ. ಕಳೆದ 24 ಗಂಟೆಗಳಲ್ಲಿ 291 ಜನ ಸೋಂಕಿಗೆ ಬಲಿಯಾಗಿದ್ದು ಇದುವರೆಗೆ ಮರಣ ಹೊಂದಿದವರ ಸಂಖ್ಯೆ 1,61,240ತಲುಪಿದೆ.

ಮಹಾರಾಷ್ಟ್ರದಲ್ಲಿ ಸೋಂಕಿತರ ಪ್ರಕರಣಗಳು ಸತತವಾಗಿ ಹೆಚ್ಚುತ್ತಿದ್ದು, ರಾಷ್ಟ್ರದಲ್ಲೇ ಅತಿಹೆಚ್ಚು ಪ್ರಕರಣಗಳು ಈ ರಾಜ್ಯದಲ್ಲಿ ವರದಿಯಾಗಿವೆ. ಅಲ್ಲಿನ ಸರ್ಕಾರ ನಾಳೆಯಿಂದ (ರವಿವಾರ) ರಾತ್ರಿ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಿದೆ. ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕಚೇರಿಯಿಂದ ಈಗಾಗಲೇ ಆದೇಶ ಹೊರಬಿದ್ದಿದೆ. ರಾಜ್ಯದೆಲ್ಲೆಡೆ ಶಾಪಿಂಗ್ ಮಾಲ್​ಗಳು ರಾತ್ರಿ 8ರಿಂದ ಬೆಳಗ್ಗೆ 7 ಗಂಟೆಯವರೆಗೆ ಮುಚ್ಚಿರುತ್ತವೆ. ಶನಿವಾರದಂದು ಮಹಾರಾಷ್ಟ್ರದಲ್ಲಿ ಸುಮಾರು 37,000 ತಾಜಾ ಪ್ರಕರಣಗಳು ವರದಿಯಾಗಿವೆ. ಮುಂಬೈ ಮಹಾನಗರದಲ್ಲಿ ಕಳೆದ 24 ಗಂಟೆಗಳಲ್ಲಿ 5.500 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿವೆ. ಒಂದು ದಿನದ ಅವಧಿಯ ಪ್ರಕರಣಗಳ ಸಂಖ್ಯೆಯಲ್ಲಿ ಅತಿಹೆಚ್ಚಿನ ಏರಿಕೆ ಇದಾಗಿದೆ.

ಇದನ್ನೂ ಓದಿ: ಬರಲಿದೆ ಮತ್ತೊಂದು ಕೊರೊನಾ ಲಸಿಕೆ.. ಭಾರತದ ಸೆರಮ್​ ಸಂಸ್ಥೆಯಿಂದಲೇ ಉತ್ಪಾದನೆ: 200 ಕೋಟಿ ಡೋಸ್​ ಲಸಿಕೆ ಬಿಡುಗಡೆಗೆ ಸಿದ್ಧತೆ

Published On - 8:15 pm, Sat, 27 March 21