Facebook Special Avatar Holi Stickers: ಹೋಳಿ ಹಬ್ಬಕ್ಕಾಗಿ ವಿಶೇಷ ಅವತಾರ್ ಸ್ಟಿಕ್ಕರ್ಸ್ ಆರಂಭಿಸಿದ ಫೇಸ್ಬುಕ್
ಹೋಳಿ ಹಬ್ಬ ಆಚರಣೆಗಾಗಿ ಫೇಸ್ಬುಕ್ನಿಂದ ವಿಶೇಷ ಅವತಾರ್ ಸ್ಟಿಕ್ಕರ್ಗಳನ್ನು ಆರಂಭಿಸಲಾಗಿದೆ. ಇದೇ ಮಾರ್ಚ್ 28ರಂದು ಹೋಳಿ ದಹನ ಹಾಗೂ 29ಕ್ಕೆ ಹೋಳಿ ಆಚರಣೆ ಭಾರತಾದ್ಯಂತ ಇದೆ.
ಇನ್ನೇನು ಹೋಳಿ ಆಚರಣೆಗೆ ದಿನಗಳಷ್ಟೇ ಬಾಕಿ ಇರುವಾಗ ಫೇಸ್ಬುಕ್ನಿಂದ ಹಬ್ಬಕ್ಕೆ ವಿಶೇಷ ಸ್ಟಿಕ್ಕರ್ಗಳನ್ನು ಆರಂಭಿಸಲಾಗಿದೆ. ಈ ಸ್ಟಿಕ್ಕರ್ಗಳು ಈಗ ಫೇಸ್ಬುಕ್ ಆ್ಯಪ್ ಮತ್ತು ಮೆಸೆಂಜರ್ ಆ್ಯಪ್ನಲ್ಲೂ ದೊರೆಯುತ್ತವೆ. ಫೇಸ್ಬುಕ್ ಹೇಳುವ ಪ್ರಕಾರ, 40 ಲಕ್ಷ ಜನರು ಹೋಳಿ ಬಗ್ಗೆ 66 ಲಕ್ಷ ಪೋಸ್ಟ್ಗಳು ಮತ್ತು ಕಾಮೆಂಟ್ಗಳನ್ನು ಮಾಡಿದ್ದಾರೆ. ಫೇಸ್ಬುಕ್ನಿಂದ ವಿಶೇಷ ಸ್ಟಿಕ್ಕರ್ಗಳನ್ನು ಆರಂಭಿಸಿದ್ದು, ಬಳಕೆದಾರರು ತಮ್ಮ ಸ್ನೇಹಿತರು ಹಾಗೂ ಬಂಧುಗಳಿಗೆ ಪರ್ಸನಲೈಸ್ಡ್ ಮತ್ತು ಕಲರ್ಫುಲ್ ಆದ ಶುಭಾಶಯಗಳನ್ನು ಕಳುಹಿಸಬಹುದು. ಭಾರತದಾದ್ಯಂತ ಮಾರ್ಚ್ 29ನೇ ತಾರೀಕಿನ ಸೋಮವಾರದಂದು ಬಣ್ಣಗಳ ಹಬ್ಬ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಹೋಳಿ ದಹನವನ್ನು ಮಾರ್ಚ್ 28ರಂದು ಸಂಭ್ರಮಿಸಲಾಗುತ್ತದೆ.
ಫೇಸ್ಬುಕ್ನಿಂದ ವಿಶೇಷ ಅವತಾರ್ ಸ್ಟಿಕ್ಕರ್ಗಳನ್ನು ಆ್ಯಪ್ ಮತ್ತು ಮೆಸೆಂಜರ್ ಆ್ಯಪ್ನಲ್ಲಿ ಲೈವ್ ಮಾಡಲಾಗಿದೆ. ಬಳಕೆದಾರರು ಕಾಮೆಂಟ್ ಕಂಪೋಸರ್ ಬಾಕ್ಸ್ನಲ್ಲಿ ಕಾಣಬಹುದು. ಸ್ಟಿಕ್ಕರ್ಸ್ಗಳನ್ನು ಕಳುಹಿಸುವುದಕ್ಕೆ ಸ್ಮೈಲಿ ಬಟನ್ ಒತ್ತಬೇಕು. ಒಂದು ವೇಳೆ ಸ್ಟಿಕ್ಕರ್ಸ್ ಕಂಡುಬಾರದಿದ್ದಲ್ಲಿ ಆ್ಯಪ್ ಅನ್ನು ಮತ್ತೊಮ್ಮೆ ಇನ್ಸ್ಟಾಲ್ ಮಾಡಿಕೊಳ್ಳಬೇಕು.
ಹೋಳಿ ಹಬ್ಬಕ್ಕೆ ಕಸ್ಟಮೈಸ್ಡ್ ಸ್ಟಿಕ್ಕರ್ ರಚಿಸುವುದು ಹೇಗೆ ಎಂಬುದನ್ನು ತಿಳಿಯಿರಿ: – ಫೇಸ್ಬುಕ್ ಆ್ಯಪ್ ತೆರೆದು, ಕಮೆಂಟ್ ಕಂಪೋಸರ್ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು. – ಸ್ಮೈಲಿ ಐಕಾನ್ ಸ್ಪರ್ಶಿಸಿ ಸ್ಟಿಕ್ಕರ್ ಟ್ಯಾಬ್ ಆರಂಭಿಸಿ. ಕ್ಲಿಕ್ ಮಾಡಿ ನಿಮಗೆ ಬೇಕಾದ ಅವತಾರ್ ಸೃಷ್ಟಿಸಿ. – ನಿಮ್ಮ ಚರ್ಮದ ಬಣ್ಣ, ಹೇರ್ ಸ್ಟೈಲ್ ಮುಂತಾದವಕ್ಕೆ ತಕ್ಕಂತೆ ಅವತಾರ್ ಸೃಷ್ಟಿಸಬಹುದು. ಅದನ್ನು ರಚಿಸಿಯಾದ ಮೇಲೆ ಹೊಸ ಸ್ಟಿಕ್ಕರ್ಸ್ ಹೋಳಿ ಸಂದೇಶ ಮತ್ತು ಬಣ್ಣದೊಂದಿಗೆ ಕಾಣಿಸಿಕೊಳ್ಳುತ್ತದೆ. – ಅದನ್ನು ಬಳಸಿಕೊಂಡು ನಿಮ್ಮ ಸ್ನೇಹಿತರಿಗೆ ಸಂದೇಶ ಕಳುಹಿಸಬಹುದು ಅಥವಾ ಅವರ ಚಿತ್ರದ ಕೆಳಗೆ ಕಾಮೆಂಟ್ ಹಾಕಬಹುದು.
ಫೇಸ್ಬುಕ್ ಮಾತ್ರವಲ್ಲ, ಗೂಗಲ್ನಿಂದಲೂ ಭಾರತ ಎಲ್ಲ ಬಳಕೆದಾರರಿಗೆ ಈ ಖುಷಿಯಾದ ಫೀಚರ್ ಅನ್ನು ತರಲಾಗಿದೆ. ಡೆಸ್ಕ್ಟಾಪ್ ಮತ್ತು ಸ್ಮಾರ್ಟ್ಫೋನ್ನ ತುಂಬ ಬಣ್ಣಗಳು ಕಾಣಿಸಿಕೊಳ್ಳುವಂತೆ ಗೂಗಲ್ ಮಾಡುತ್ತದೆ. ಈ ಫೀಚರ್ ಬಳಸುವುದಕ್ಕೆ Holi (ಹೋಳಿ) ಅಥವಾ Holi festival (ಹೋಳಿ ಫೆಸ್ಟಿವಲ್) ಎಂಬ ಪದಗಳನ್ನು ಹುಡುಕಿ. ಶೋಧನೆಯ ಫಲಿತಾಂಶದೊಂದಿಗೆ ಇನ್ಫೋ ಕಾರ್ಡ್ನಲ್ಲಿ ಮೂರು ಬಟ್ಟಲು ಕಾಣಿಸಿಕೊಳ್ಳುತ್ತದೆ. ಎಲ್ಲಿ ಬಣ್ಣ ಕಾಣಿಸಿಕೊಳ್ಳಬೇಕು ಎಂದು ಬಯಸುತ್ತೀರೋ ಅಲ್ಲಿ ಕ್ಲಿಕ್ ಮಾಡಿದರೆ ಸಾಕು. ಒಂದು ವೇಳೆ ಸ್ಥಳಾವಕಾಶದ ಕೊರತೆ ಅಂತ ಭಾವಿಸಿದಲ್ಲಿ ಸ್ಕ್ರಾಲ್ ಡೌನ್ ಮಾಡುತ್ತಾ ಸಾಗಿ.
ಇದನ್ನೂ ಓದಿ: Facebook Reels | ರೀಲ್ಸ್ ಆಯ್ಕೆ ಪರಿಚಯಿಸಿದ ಫೇಸ್ಬುಕ್; ಮಾಡೋದು ಹೇಗೆ? ಇಲ್ಲಿದೆ ಉತ್ತರ