Viral Video: ತವರುಮನೆಯಿಂದ ವಿಶೇಷ ರೀತಿಯಲ್ಲಿ ಪತಿಯ ಮನೆಗೆ ಹೋದ ವಧು; ಡ್ರೈವಿಂಗ್ ಸೀಟ್ನಲ್ಲಿ ಕುಳಿತವಳನ್ನು ನೋಡಿ ನೆಟ್ಟಿಗರು ಫುಲ್ ಖುಷ್
ವಧುವಿನ ಹೆಸರು ಸ್ನೇಹಾ ಸಿಂಘಿ ಎಂದಾಗಿದ್ದು, ವಿಡಿಯೋವನ್ನೂ ಆಕೆಯೇ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೊಂದು ಫನ್ ಎಂದೂ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನೆಟ್ಟಿಗರು ಸಿಕ್ಕಾಪಟೆ ಹೊಗಳಿದ್ದಾರೆ.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಮದುವೆಯಾಗಿ, ಪತಿಯ ಮನೆಗೆ ಹೋಗುವಾಗ ಅಲ್ಲೊಂದು ಭಾವನಾತ್ಮಕ ಸನ್ನಿವೇಶ ಇರುತ್ತದೆ. ವಧು, ಆಕೆಯ ಕುಟುಂಬದವರು ಕಣ್ಣೀರು ಹಾಕುತ್ತಾರೆ. ವರ, ಆತನ ಕಡೆಯವರೆಲ್ಲ ಕಾರಿನ ಮೇಲೆ ಹೋಗಿ ಕುಳಿತರೂ, ನವವಧು ಮಾತ್ರ ಆ ವಾಹನ ಹತ್ತಲು ನಿಧಾನ ಮಾಡುತ್ತಾಳೆ. ಆಕೆಯ ಕುಟುಂಬದವರು ಅವಳನ್ನು ಕರೆದುಕೊಂಡು ಹೋಗಿ, ಕಾರಿನಲ್ಲಿ ಕೂರಿಸುತ್ತಾರೆ. ಇದು ಸಾಮಾನ್ಯವಾಗಿ ಕಂಡುಬರುವ ದೃಶ್ಯ. ಆದರೆ ಇಲ್ಲೊಬ್ಬಳು ವಧು ಸ್ವಲ್ಪ ಡಿಫರೆಂಟ್.. ತಾನೇ ಕಾರಿನ ಡ್ರೈವ್ ಮಾಡಿಕೊಂಡು ಪತಿಯನ್ನು ಕರೆದುಕೊಂಡು ಹೋಗಿದ್ದಾಳೆ. ಈ ವಿಡಿಯೋ ಈಗ ಸಿಕ್ಕಾಪಟೆ ವೈರಲ್ ಆಗುತ್ತಿದೆ.
ಇದು ಕೊಲ್ಕತ್ತದಲ್ಲಿ ನಡೆದದ್ದು. ಆಗಷ್ಟೇ ಮದುವೆಯಾದ ನವದಂಪತಿಗಳವರು. ವಧುವನ್ನು ವರನ ಮನೆಗೆ ಕಳಿಸುವ ಕಾರ್ಯಕ್ರಮ ಮುಗಿದಿತ್ತು. ಆದರೆ ಇಲ್ಲಿ ಚೆಂದವಾಗಿ ಅಲಂಕಾರ ಮಾಡಿಕೊಂಡಿದ್ದ ವಧು ಅಳುತ್ತಿರಲಿಲ್ಲ. ಬದಲಿಗೆ ಎಲ್ಲರಿಗೂ ಖುಷಿಯಿಂದಲೇ ಬೈ ಮಾಡಿದರು. ನಗುನಗುತ್ತಲೇ ಕಾರಿನ ಡ್ರೈವಿಂಗ್ ಸೀಟ್ನಲ್ಲಿ ಕುಳಿತರು. ಆಕೆಯ ಪಕ್ಕದಲ್ಲಿ ಬಂದು ಕುಳಿತ ಪತಿ ಕೂಡ ಎಲ್ಲರಿಗೂ ಕೈ ಬೀಸುತ್ತಾರೆ. ವಧು ಕಾರನ್ನು ಸ್ಟಾರ್ಟ್ ಮಾಡಿ, ಮುಂದೆ ಹೋಗುತ್ತಿದ್ದಂತೆ ಅಲ್ಲಿ ನಿಂತಿದ್ದವರೆಲ್ಲ ದೊಡ್ಡದಾಗಿ ಕೂಗಿ, ಹುರಿದುಂಬಿಸುತ್ತಾರೆ.
ವಧುವಿನ ಹೆಸರು ಸ್ನೇಹಾ ಸಿಂಘಿ ಎಂದಾಗಿದ್ದು, ವಿಡಿಯೋವನ್ನೂ ಆಕೆಯೇ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೊಂದು ಫನ್ ಎಂದೂ ಬರೆದುಕೊಂಡಿದ್ದಾರೆ. ಈ ವಿಡಿಯೋವನ್ನು ನೆಟ್ಟಿಗರು ಸಿಕ್ಕಾಪಟೆ ಹೊಗಳಿದ್ದಾರೆ. ನಿಜಕ್ಕೂ ವಿಭಿನ್ನವಾದ ಸಂದರ್ಭ ಎಂದೂ ಬರೆದುಕೊಂಡಿದ್ದಾರೆ. ವಿಡಿಯೋಕ್ಕೆ 2 ಲಕ್ಷಕ್ಕೂ ಅಧಿಕ ವೀವ್ಸ್ ಬಂದಿದೆ. ಇದು ನಿಜಕ್ಕೂ ಮಹಿಳೆಯರಿಗೆ ಸ್ಫೂರ್ತಿ, ಆತ್ಮವಿಶ್ವಾಸ ತುಂಬುವ ವಿಡಿಯೋ ಎಂದು ಜನರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತದೆ ಎಂದೂ ಹೇಳಿದ್ದಾರೆ. ಸ್ನೇಹಾ ಅವರು ಶೆಫ್ ಎಂಬುದು ಅವರ ಇನ್ಸ್ಟಾಗ್ರಾಂ ಪೋಸ್ಟ್ನಿಂದ ಗೊತ್ತಾಗುತ್ತಿದೆ.
View this post on Instagram