14 ತಿಂಗಳಲ್ಲಿ 8 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ 65 ವರ್ಷದ ವೃದ್ಧೆಯ ‘ದಾಖಲೆ’ಯ ಕಥೆ ಇದು!

|

Updated on: Aug 22, 2020 | 1:02 PM

ಪಾಟ್ನಾ: 65 ವರ್ಷದ ಮಹಿಳೆಯೊಬ್ಬರು 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಆಕೆಯ ಹೆಸರಲ್ಲಿ ಹಣ ಲಪಟಾಯಿಸಿರುವ ಘಟನೆ ಬಿಹಾರದ ಮುಜಫರ್‌ಪುರದಲ್ಲಿ ಬೆಳಕಿಗೆ ಬಂದಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಹೆಣ್ಣು ಮಗುವಿಗೆ ಜನ್ಮ ನೀಡುವ ತಾಯಂದಿರಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದೇ ಯೋಜನೆಯನ್ನು ಬಳಸಿಕೊಂಡು ಕೆಲವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಈ 65 ವರ್ಷದ ಮಹಿಳೆ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ […]

14 ತಿಂಗಳಲ್ಲಿ 8 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ 65 ವರ್ಷದ ವೃದ್ಧೆಯ ‘ದಾಖಲೆ’ಯ ಕಥೆ ಇದು!
Follow us on

ಪಾಟ್ನಾ: 65 ವರ್ಷದ ಮಹಿಳೆಯೊಬ್ಬರು 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಆಕೆಯ ಹೆಸರಲ್ಲಿ ಹಣ ಲಪಟಾಯಿಸಿರುವ ಘಟನೆ ಬಿಹಾರದ ಮುಜಫರ್‌ಪುರದಲ್ಲಿ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಹೆಣ್ಣು ಮಗುವಿಗೆ ಜನ್ಮ ನೀಡುವ ತಾಯಂದಿರಿಗೆ ಸರ್ಕಾರದ ವತಿಯಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದೇ ಯೋಜನೆಯನ್ನು ಬಳಸಿಕೊಂಡು ಕೆಲವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಈ 65 ವರ್ಷದ ಮಹಿಳೆ 14 ತಿಂಗಳಲ್ಲಿ 8 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಿದ್ದಾರೆ. ನಂತರ ಆಕೆಯ ಬ್ಯಾಂಕ್​ ಖಾತೆಗೆ ಬಂದ ಹಣವನ್ನು ಮಹಿಳೆಯ ಅರಿವಿಲ್ಲದೆ ತಾವೇ ಲಪಟಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಮಹಿಳೆ ಬ್ಯಾಂಕ್​ಗೆ ಭೇಟಿ ನೀಡಿದ ವೇಳೆ ಈ ಹಗರಣ ಬೆಳಕಿಗೆ ಬಂದಿದೆ.

 

 

 

Published On - 12:45 pm, Sat, 22 August 20