AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರು ದೆಹಲಿಗೆ ಬಂದು ಭೇಟಿಯಾಗೋದು ಬೇಡ -ಲಾಬಿಗೆ BJP ಹೈಕಮಾಂಡ್ ಬ್ರೇಕ್?

ದೆಹಲಿ: ಕರ್ನಾಟಕ ರಾಜ್ಯದ ಸಚಿವರು ನವದೆಹಲಿಗೆ ಬಂದು ಭೇಟಿಯಾಗುವುದು ಬೇಡ. ಒಂದು ವೇಳೆ ಬಂದ್ರೂ ಸೌಹಾರ್ದ ಭೇಟಿಗಷ್ಟೇ ಸೀಮಿತವಾಗಿರಲಿ ಅಂತಾ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ ಎಂದು ತಿಳಿದುಬಂದಿದೆ. ಸಚಿವರು ಇಲಾಖಾ ಸಂಬಂಧಿತ ಕೆಲಸಗಳಿಗೆ ದೆಹಲಿಗೆ ಬರಲಿ. ಜೊತೆಗೆ, ಸೌಹಾರ್ದ ಭೇಟಿಯಷ್ಟೇ ಇರಲಿ ಎಂದು ರಾಜ್ಯದ ಸಚಿವರಿಗೆ ಬಿಜೆಪಿ ವರಿಷ್ಠರಿಂದ ಸಂದೇಶ ರವಾನೆಯಾಗಿದೆಯಂತೆ. ಕಳೆದ ಒಂದು ತಿಂಗಳಲ್ಲಿ BSY ಸಂಪುಟದ ಐವರು ಸಚಿವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ […]

ಸಚಿವರು ದೆಹಲಿಗೆ ಬಂದು ಭೇಟಿಯಾಗೋದು ಬೇಡ -ಲಾಬಿಗೆ BJP ಹೈಕಮಾಂಡ್ ಬ್ರೇಕ್?
Follow us
KUSHAL V
|

Updated on: Aug 22, 2020 | 1:19 PM

ದೆಹಲಿ: ಕರ್ನಾಟಕ ರಾಜ್ಯದ ಸಚಿವರು ನವದೆಹಲಿಗೆ ಬಂದು ಭೇಟಿಯಾಗುವುದು ಬೇಡ. ಒಂದು ವೇಳೆ ಬಂದ್ರೂ ಸೌಹಾರ್ದ ಭೇಟಿಗಷ್ಟೇ ಸೀಮಿತವಾಗಿರಲಿ ಅಂತಾ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ ಎಂದು ತಿಳಿದುಬಂದಿದೆ. ಸಚಿವರು ಇಲಾಖಾ ಸಂಬಂಧಿತ ಕೆಲಸಗಳಿಗೆ ದೆಹಲಿಗೆ ಬರಲಿ. ಜೊತೆಗೆ, ಸೌಹಾರ್ದ ಭೇಟಿಯಷ್ಟೇ ಇರಲಿ ಎಂದು ರಾಜ್ಯದ ಸಚಿವರಿಗೆ ಬಿಜೆಪಿ ವರಿಷ್ಠರಿಂದ ಸಂದೇಶ ರವಾನೆಯಾಗಿದೆಯಂತೆ.

ಕಳೆದ ಒಂದು ತಿಂಗಳಲ್ಲಿ BSY ಸಂಪುಟದ ಐವರು ಸಚಿವರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಗ್ಗೆ ಮಾತುಕತೆ ಮತ್ತು ಚಟುವಟಿಕೆ ನಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ನ ಈ ನಿರ್ದೇಶನ ಮಹತ್ವ ಪಡೆದಿದೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್‌ ನಿರ್ದೇಶನದಿಂದ ಸಂಪುಟದಲ್ಲಿ ಅವಕಾಶ ಪಡೆಯಲು ಯತ್ನಿಸುವವರಿಗೆ ನಿರಾಸೆ ಉಂಟಾಗಿದ್ದು ಪಕ್ಷದ ಸಂಘಟನೆ ಹಾಗೂ ಅಭಿವೃದ್ಧಿ ವಿಚಾರಕ್ಕೆ ಮಾತ್ರ ಭೇಟಿಮಾಡಲು ಹೈಕಮಾಂಡ್‌ ತಿಳಿಸಿದೆ.