ಒಡಿಶಾದ ಕಾಡಿನಲ್ಲಿ ಕಪ್ಪು ಚಿರತೆ ಪತ್ತೆ, ಇಲ್ಲಿದೆ ನೋಡಿ ವೈರಲ್​​ ಫೋಟೋ

ಒಡಿಶಾದ ಕಾಡಿನಲ್ಲಿ ಕಪ್ಪು ಚಿರತೆ ಪತ್ತೆಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹುಲಿ ಗಣತಿ ಸಂದರ್ಭದಲ್ಲಿ, ಇದೀಗ ಕಪ್ಪು ಚಿರತೆ ಪತ್ತೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಎಕ್ಸ್​​ನಲ್ಲಿ ಹಂಚಿಕೊಂಡಿದೆ. ಈ ಕಪ್ಪು ಚಿರತೆ ಅರಣ್ಯಾಧಿಕಾರಿಗಳು ಹುಲಿಗಳ ಗಣತಿಗಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಒಡಿಶಾದ ಕಾಡಿನಲ್ಲಿ ಕಪ್ಪು ಚಿರತೆ ಪತ್ತೆ, ಇಲ್ಲಿದೆ ನೋಡಿ ವೈರಲ್​​ ಫೋಟೋ
ವೈರಲ್ ಫೋಟೋ

Updated on: Nov 30, 2023 | 7:35 PM

ಒಡಿಶಾದ ಕಾಡಿನಲ್ಲಿ ಕಪ್ಪು ಚಿರತೆ ಪತ್ತೆಯಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಹುಲಿ ಗಣತಿ ಸಂದರ್ಭದಲ್ಲಿ, ಇದೀಗ ಕಪ್ಪು ಚಿರತೆ ಪತ್ತೆಯಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಎಕ್ಸ್​​ನಲ್ಲಿ ಹಂಚಿಕೊಂಡಿದೆ. ಈ ಕಪ್ಪು ಚಿರತೆ ಅರಣ್ಯಾಧಿಕಾರಿಗಳು ಹುಲಿಗಳ ಗಣತಿಗಾಗಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಕಪ್ಪು ಚಿರತೆ ಫೋಟೋಗಳು ಈ ಕ್ಯಾಮರದಲ್ಲಿ ಸೆರೆಯಾಗಿದೆ. ಈ ಫೋಟೋಗಳನ್ನು ಎಕ್ಸ್​​ನಲ್ಲಿ ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸುಸಂತ ನಂದಾ ಹಂಚಿಕೊಂಡಿದ್ದಾರೆ.

ಎಕ್ಸ್​​​ ಫೋಟೋ ಇಲ್ಲಿದೆ:

ಸುಸಂತ ನಂದಾ ಅವರು ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವುಗಳ ಸುರಕ್ಷತೆ ದೃಷ್ಟಿಯಿಂದ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಹೇಳಲಾಗಿದೆ. ಒಡಿಶಾದಲ್ಲಿ ಕ್ಯಾಮೆರಾ ಟ್ರ್ಯಾಪ್ ಹುಲಿ ಗಣತಿಯನ್ನು ಮಾಡಲಾಗುತ್ತಿದೆ. ಕಾಡು ಪ್ರಾಣಿಗಳ ಪ್ರತಿ ಚಲನವಲನಗಳು ಈ ಕ್ಯಾಮರದಲ್ಲಿ ಸೆರೆಯಾಗುತ್ತಿದೆ. ಅಲ್ಲಿ ನಡೆಯುವ ಪ್ರತಿಯೊಂದು ಸಂಗತಿಗಳು ಅರಣ್ಯಾ ಇಲಾಖೆಗೆ ತಿಳಿಯುತ್ತಿದೆ ಎಂದು ಎಕ್ಸ್​​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:ಈ ಕಪ್ಪು ಹುಲಿ ಇರುವುದು ಒಡಿಶಾದ ಸಿಮಿಲಿಪಲ್ ರಾಷ್ಟ್ರೀಯ ಉದ್ಯಾನದಲ್ಲಿ

ಈ ಹಿಂದೆ, ಮಯೂರ್‌ಭಂಜ್ ಜಿಲ್ಲೆಯ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನದಲ್ಲಿ ಕಪ್ಪು ಹುಲಿ ಕಾಣಿಸಿಕೊಂಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:46 pm, Thu, 30 November 23

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us