Coimbatore: ಅಲ್ಕೋಹಾಲ್​ ಐಸ್​​ಕ್ರೀಂ ಮಾರುತ್ತಿದ್ದ ಕೆಫೆ ಜಪ್ತಿ; ಪರವಾನಗಿ ರದ್ದು

| Updated By: Lakshmi Hegde

Updated on: Oct 22, 2021 | 8:52 AM

ಇಲ್ಲಿ ಕೆಲಸ  ಮಾಡುವ ಯಾವುದೇ ಕೆಲಸಗಾರರ ಬಳಿಯೂ ವೈದ್ಯಕೀಯ ಫಿಟ್​​ನೆಸ್​ ಪ್ರಮಾಣಪತ್ರವಿಲ್ಲ. ಇಲ್ಲಿನವರು ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ತಲೆಗೆ ಟೊಪ್ಪಿ ಧರಿಸುವುದಿಲ್ಲ.  ಕೈಗೆ ಕೈಗವಸು, ಮಾಸ್ಕ್​​ಗಳನ್ನು ಹಾಕಿಕೊಳ್ಳುವುದಿಲ್ಲ.

Coimbatore: ಅಲ್ಕೋಹಾಲ್​ ಐಸ್​​ಕ್ರೀಂ ಮಾರುತ್ತಿದ್ದ ಕೆಫೆ ಜಪ್ತಿ; ಪರವಾನಗಿ ರದ್ದು
ಕೆಫೆಯನ್ನು ಸೀಲ್​ ಮಾಡಿದ ಆಹಾರ ಸುರಕ್ಷತಾ ಅಧಿಕಾರಿಗಳು
Follow us on

ಆಹಾರ ಸ್ವಚ್ಛತೆ ಮತ್ತು ಗುಣಮಟ್ಟ ನಿಯಮಗಳನ್ನು ಪಾಲಿಸದ ಮತ್ತು ಅಕ್ರಮವಾಗಿ ಲಿಕ್ಕರ್​ ಬಾಟಲಿಗಳನ್ನು ಇಟ್ಟುಕೊಂಡಿದ್ದ ಕೆಫೆಯೊಂದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಮುಚ್ಚಿಸಿದ್ದಾರೆ. ಕೊಯಂಬತ್ತೂರಿನ ಅವಿನಾಶಿ ರಸ್ತೆಯಲ್ಲಿರುವ ಲಕ್ಷ್ಮೀ ಮಿಲ್ಸ್​​ ಪ್ರದೇಶದಲ್ಲಿರುವ ಒಂದು ಕೆಫೆ ಹೀಗೊಂದು ಆರೋಪಕ್ಕೆ ಗುರಿಯಾಗಿದೆ. ಕೆಫೆಯ ಹೆಸರು ರೋಲಿಂಗ್​ ಡಫ್​.

ಈ ಕೆಫೆಯಲ್ಲಿ ಐಸ್​ಕ್ರೀಂಗೆ ಮಧ್ಯ ಮಿಶ್ರಣ ಮಾಡಿ ನೀಡುತ್ತಾರೆ ಎಂದು ಹಲವು ಗ್ರಾಹಕರು ನೀಡಿದ ದೂರಿನ ಮೇರೆಗೆ ಆಹಾರ ಸುರಕ್ಷತಾ ಮತ್ತು ಪರಿಶೀಲನಾ ಅಧಿಕಾರಿಗಳು ಕೆಫೆಗೆ ತೆರಳಿದ್ದರು. ಅಂದಹಾಗೆ ಈ ಕೆಫೆಯಲ್ಲಿ ಸಿಗುವ ಲಿಕ್ಕರ್​ ಐಸ್​ಕ್ರೀಂ ಸ್ಥಳೀಯ ಯುವಜನರ ಪಾಲಿಗೆ ಅಚ್ಚುಮೆಚ್ಚಿನ ಆಹಾರವಾಗಿಬಿಟ್ಟಿತ್ತು. ಹೀಗೆ ಅಧಿಕಾರಿಗಳು ಭೇಟಿ ಕೊಟ್ಟ ಸಂದರ್ಭದಲ್ಲಿ ಎರಡು ಲಿಕ್ಕರ್​ ಬಾಟಲಿಗಳನ್ನು ಅವರು ವಶಪಡಿಸಿಕೊಂಡಿದ್ದಾರೆ.  ಇನ್ನು ಕೆಫೆಯಲ್ಲಿ ಆಹಾರ ತಯಾರಿಸುತ್ತಿದ್ದ ಸ್ಥಳವಂತೂ ಪೂರ್ತಿಯಾಗಿ ಸೊಳ್ಳೆ ಮತ್ತು ನೊಣಗಳಿಂದ ತುಂಬಿಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿ ಕೆಲಸ  ಮಾಡುವ ಯಾವುದೇ ಕೆಲಸಗಾರರ ಬಳಿಯೂ ವೈದ್ಯಕೀಯ ಫಿಟ್​​ನೆಸ್​ ಪ್ರಮಾಣಪತ್ರವಿಲ್ಲ. ಇಲ್ಲಿನವರು ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ತಲೆಗೆ ಟೊಪ್ಪಿ ಧರಿಸುವುದಿಲ್ಲ.  ಕೈಗೆ ಕೈಗವಸು, ಮಾಸ್ಕ್​​ಗಳನ್ನು ಹಾಕಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಈ ಕೆಫೆಯನ್ನು ಜಪ್ತಿ ಮಾಡಲು ಒಟ್ಟು ಎಂಟು ಕಾರಣಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಕೊಟ್ಟಿದ್ದಾರೆ.  ಘಟನೆ ನಡೆದ ಬೆನ್ನಲ್ಲೇ ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್​, ಈ ಕೆಫೆಯ ಪರವಾನಗಿ ರದ್ದುಗೊಳಿಸಿ, ಬಾಗಿಲು ಮುಚ್ಚಿ ಸೀಲ್​ ಹಾಕಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಮೊಸರು ಮತ್ತು ಹುಣಸೆಹಣ್ಣಿನ ಚಟ್ನಿ ಬೆರೆಸಿ ‘ರಸಗುಲ್ಲಾ ಚಾಟ್’ ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ನೋಡಿ

Temple Tour: ಮಹಾತಪಸ್ವಿ ಮಾರ್ಕಂಡೇಯ ಶಿವನಲ್ಲಿ ಐಕ್ಯವಾದ ಸಂಗಮ ಕ್ಷೇತ್ರವಿದು; ಒಮ್ಮೆ ಭೇಟಿ ಕೊಡಿ