100 ಕೋಟಿ ಡೋಸ್ ಲಸಿಕೆ ನೀಡಿಕೆ; ಸಾಧನೆಯನ್ನು ಸಂಭ್ರಮಿಸಲು 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣ ದೀಪಾಲಂಕಾರ
ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಹಾದಿ ಸುಗಮವಾಗಿರಲಿಲ್ಲ. ಜನವರಿಯಲ್ಲಿ ಒಂದು ಬಾರಿ ಪ್ರಾರಂಭವಾಯಿತಾದರೂ ನಂತರದ ದಿನಗಳಲ್ಲಿ ಕೆಲವು ಅಡೆತಡೆ ಉಂಟಾಗಿ ಲಸಿಕಾ ಅಭಿಯಾನಕ್ಕೆ ಸ್ವಲ್ಪ ಹಿನ್ನಡೆಯಾಯಿತು.
ಭಾರತದಲ್ಲಿ ನಿನ್ನೆ ಕೊವಿಡ್ 19 ಲಸಿಕೆ ಅಭಿಯಾನ 100 ಕೋಟಿ ಡೋಸ್ಗಳ ಮೈಲಿಗಲ್ಲು ತಲುಪಿದೆ. ಜನವರಿಯಿಂದ ಶುರುವಾದ ಅಭಿಯಾನ 9 ತಿಂಗಳಲ್ಲಿ 100 ಕೋಟಿ ಡೋಸ್ ಲಸಿಕೆ ನೀಡಿದ್ದು ಸಾಮಾನ್ಯ ಸಾಧನೆಯೇನೂ ಅಲ್ಲ. ಈ ಸಂತೋಷವನ್ನು ಭಾರತೀಯ ಸಂಸ್ಕೃತಿ ಸಚಿವಾಲಯದ ಪುರಾತತ್ವ ಸರ್ವೇಕ್ಷಣಾ ಇಲಾಖೆ ವಿಭಿನ್ನವಾಗಿ ಆಚರಿಸಿದೆ. 100 ಕೋಟಿ ಡೋಸ್ ಲಸಿಕೆ ನೀಡಿಕೆ ಪೂರ್ಣವಾದ ಹಿನ್ನೆಲೆಯಲ್ಲಿ ದೇಶದ 100 ಪ್ರಮುಖ ಸ್ಮಾರಕಗಳಿಗೆ ತ್ರಿವರ್ಣ (ಕೇಸರಿ-ಬಿಳಿ-ಹಸಿರು)ದ ದೀಪಾಲಂಕಾರ ಮಾಡಿದೆ. ಈ ಮೂಲಕ ಕೊವಿಡ್ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕೊರೊನಾ ವಾರಿಯರ್ಸ್ ಆದ ಆರೋಗ್ಯ ಸಿಬ್ಬಂದಿ, ಪ್ಯಾರಾಮೆಡಿಕಲ್ ಸಿಬ್ಬಂದಿ, ಲಸಿಕೆ ಹಾಕುವವರು, ಸ್ವಚ್ಛತಾ ಕಾರ್ಮಿಕರು, ಪೊಲೀಸ್ ಸಿಬ್ಬಂದಿಗೆಗೆ ಗೌರವವನ್ನು ಸಲ್ಲಿಸಿದೆ.
ಹೀಗೆ ತ್ರಿವರ್ಣ ದೀಪಾಲಂಕಾರ ಮಾಡಲಾದ 100 ಸ್ಮಾರಕಗಳಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಾದ ದೆಹಲಿಯ ಕೆಂಪುಕೋಟೆ, ಹುಮಾಯೂನ್ ಸಮಾಧಿ, ಕುತುಬ್ ಮಿನಾರ್, ಉತ್ತರಪ್ರದೇಶದ ಆಗ್ರಾ ಕೋಟೆ, ಫತೇಪುರ್ ಸಿಕ್ರಿ, ಒಡಿಶಾದ ಕೋನಾರ್ಕ್ ದೇವಾಲಯ, ತಮಿಳುನಾಡಿನ ಮಲ್ಲಪುರಂರಥ ದೇವಾಲಯ, ಗೋವಾದ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಚರ್ಚ್, ರಾಜಸ್ಥಾನದ ಚಿತ್ತೋರ್, ಕುಂಭಲ್ಗಡ್ ಕೋಟೆಗಳು, ಬಿಹಾರದ ನಳಂದ ವಿಶ್ವವಿದ್ಯಾಲಯದ ಉತ್ಖನನ ಅವಶೇಷಗಳು, ಗುಜರಾತ್ನ ಧೋಲವೀರ ಇತ್ಯಾದಿಗಳು ಸೇರಿವೆ. ಅಕ್ಟೋಬರ್ 21ರ ರಾತ್ರಿ ಈ ಸ್ಮಾರಕಗಳಿಗೆ ದೀಪಾಲಂಕಾರ ಮಾಡಲಾಗಿತ್ತು.
ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನದ ಹಾದಿ ಸುಗಮವಾಗಿರಲಿಲ್ಲ. ಜನವರಿಯಲ್ಲಿ ಒಂದು ಬಾರಿ ಪ್ರಾರಂಭವಾಯಿತಾದರೂ ನಂತರದ ದಿನಗಳಲ್ಲಿ ಕೆಲವು ಅಡೆತಡೆ ಉಂಟಾಗಿ ಲಸಿಕಾ ಅಭಿಯಾನಕ್ಕೆ ಸ್ವಲ್ಪ ಹಿನ್ನಡೆಯಾಯಿತು. ಎರಡನೇ ಅಲೆ ಅತ್ಯಂತ ಮಾರಣಾಂತಿಕವಾಗಿ ಬಾಧಿಸಿತು. ಅದೆಲ್ಲದರ ಮಧ್ಯೆ ಇಂದು ಕೊರೊನಾ ಲಸಿಕೆ ಅಭಿಯಾನ ಒಂದು ಮೈಲಿಗಲ್ಲು ಸ್ಥಾಪಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೇರಿ ಹಲವರು ಸಂತೋಷ ವ್ಯಕ್ತಪಡಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಶ್ಲಾಘಿಸಿದೆ. ಚೀನಾ ಬಿಟ್ಟರೆ ಒಂದು ಶತಕೋಟಿ ಜನರಿಗೆ ಲಸಿಕೆ ನೀಡಿದ ದೇಶ ಭಾರತವೇ ಆಗಿದೆ.
ಇದನ್ನೂ ಓದಿ: Aryan Khan: ‘ಡ್ರಗ್ಸ್, ವೇಶ್ಯಾವಾಟಿಕೆ ಎಂದಿಗೂ ನಾಶ ಆಗಲ್ಲ’; ಆರ್ಯನ್ ಪರ ಮಾತಾಡಿದ ಸಲ್ಮಾನ್ ಮಾಜಿ ಪ್ರೇಯಸಿ ಸೋಮಿ ಅಲಿ
Kane Williamson: ಟಿ20 ವಿಶ್ವಕಪ್ನಲ್ಲಿ ಅಭಿಯಾನ ಆರಂಭಿಸುವ ಮುನ್ನವೇ ನ್ಯೂಜಿಲೆಂಡ್ಗೆ ಬಿಗ್ ಶಾಕ್