Aryan Khan: ‘ಡ್ರಗ್ಸ್​, ವೇಶ್ಯಾವಾಟಿಕೆ ಎಂದಿಗೂ ನಾಶ ಆಗಲ್ಲ’; ಆರ್ಯನ್​ ಪರ ಮಾತಾಡಿದ ಸಲ್ಮಾನ್​ ಮಾಜಿ ಪ್ರೇಯಸಿ ಸೋಮಿ ಅಲಿ

Somy Ali: ‘ಸೆಲೆಬ್ರಿಟಿಯ ಮಗ ಎಂಬ ಕಾರಣಕ್ಕೆ ಆರ್ಯನ್​ ಖಾನ್​ ಅವರನ್ನು ಈ ಕೇಸ್​ನಲ್ಲಿ ಎಳೆದು ತರಲಾಗಿದೆ’ ಎಂದು ಸೋಮಿ ಅಲಿ ಹೇಳಿದ್ದಾರೆ. ಅವರ ಈ ಮಾತುಗಳಿಗೆ ಪರ-ವಿರೋಧ ವ್ಯಕ್ತವಾಗುತ್ತಿದೆ.

Aryan Khan: ‘ಡ್ರಗ್ಸ್​, ವೇಶ್ಯಾವಾಟಿಕೆ ಎಂದಿಗೂ ನಾಶ ಆಗಲ್ಲ’; ಆರ್ಯನ್​ ಪರ ಮಾತಾಡಿದ ಸಲ್ಮಾನ್​ ಮಾಜಿ ಪ್ರೇಯಸಿ ಸೋಮಿ ಅಲಿ
ಸೋಮಿ ಅಲಿ, ಆರ್ಯನ್​ ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Oct 22, 2021 | 9:05 AM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಕೇಸ್​ ದಿನದಿಂದ ದಿನಕ್ಕೆ ಜಟಿಲವಾಗುತ್ತಲೇ ಇದೆ. ಅವರಿಗೆ ಜಾಮೀನು ಸಿಗುವುದು ಮರೀಚಿಕೆ ಆಗಿದೆ. ಈ ನಡುವೆ ಅನೇಕ ಸೆಲೆಬ್ರಿಟಿಗಳು ಆರ್ಯನ್​ ಖಾನ್​ ಪರವಾಗಿ ಮಾತನಾಡುತ್ತಿದ್ದಾರೆ. ಫರ್ಹಾ ಖಾನ್​, ಹೃತಿಕ್​ ರೋಷನ್​, ಸಲ್ಮಾನ್​ ಖಾನ್​, ಶೇಖರ್ ಸುಮನ್​, ವಿಶಾಲ್​ ದದ್ಲಾನಿ, ಸ್ವರಾ ಭಾಸ್ಕರ್​ ಮುಂತಾದವರು ಶಾರುಖ್​ ಬೆಂಬಲಕ್ಕೆ ನಿಂತಿದ್ದಾರೆ. ಈಗ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿ ಸೋಮಿ ಅಲಿ ಕೂಡ ಸ್ಟಾರ್​ ಕಿಡ್​ ಆರ್ಯನ್​ ಪರ ಬ್ಯಾಟ್​ ಬೀಸಿದ್ದಾರೆ.

ಪಾಕಿಸ್ತಾನ ಮೂಲದ ನಟಿ ಸೋಮಿ ಅಲಿ ಅವರು ಒಂದು ಕಾಲದಲ್ಲಿ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದರು. ಆಗ ಅವರಿಗೆ ಸಲ್ಮಾನ್​ ಖಾನ್​ ಜೊತೆ ಪ್ರೀತಿ ಚಿಗುರಿತ್ತು. ನಂತರ ಅವರಿಬ್ಬರ ಸಂಬಂಧ ಬ್ರೇಕಪ್​ನಲ್ಲಿ ಅಂತ್ಯವಾಯ್ತು ಎಂಬುದು ಬೇರೆ ವಿಚಾರ. ಈಗ ಸೋಮಿ ಅಲಿ ಅವರು ಶಾರುಖ್​ ಪುತ್ರನ ಬಂಧನದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ಡ್ರಗ್ಸ್​ ಮತ್ತು ವೇಶ್ಯಾವಾಟಿಕೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ವೇಶ್ಯಾವಾಟಿಕೆ ರೀತಿಯೇ ಡ್ರಗ್ಸ್​ ಕೂಡ ಈ ಸಮಾಜದಲ್ಲಿ ನಾಶ ಆಗುವುದಿಲ್ಲ. ಇವೆರಡಕ್ಕೂ ಕಾನೂನಿನ ಸಮ್ಮತಿ ಸಿಗಬೇಕು ಎಂಬ ಮಾತಿಗೆ ನಾನು ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿದ್ದೇನೆ. ಡ್ರಗ್ಸ್​ ಮತ್ತು ವೇಶ್ಯಾವಾಟಿಕೆಯನ್ನು ತಡೆಯಲು ಕಾನೂನಿಗೆ ಸಾಧ್ಯವಾಗಿಲ್ಲ. ಇವೆರಡೂ ತುಂಬ ಸುಲಭವಾಗಿ ಲಭ್ಯ ಆಗುತ್ತಿರುವುದರಿಂದ ಬೇಕಂತಲೇ ನಾನು ಇವುಗಳನ್ನು ಪರಸ್ಪರ ಹೋಲಿಸುತ್ತಿದ್ದೇನೆ’ ಎಂದು ಸೋಮಿ ಅಲಿ ಹೇಳಿದ್ದಾರೆ.

‘ಸೆಲೆಬ್ರಿಟಿಯ ಮಗ ಎಂಬ ಕಾರಣಕ್ಕೆ ಆರ್ಯನ್​ ಖಾನ್​ ಅವರನ್ನು ಈ ಕೇಸ್​ನಲ್ಲಿ ಎಳೆದು ತರಲಾಗಿದೆ’ ಎಂದು ಅವರು ಹೇಳಿದ್ದಾರೆ. ಅವರ ಈ ಮಾತುಗಳಿಗೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಸದ್ಯಕ್ಕಂತೂ ಆರ್ಯನ್​ ಖಾನ್​ಗೆ ಜಾಮೀನು ಸಿಕ್ಕಿಲ್ಲ. ಹಾಗಾಗಿ ಅವರ ಪರ ವಕೀಲರು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರ್ಯನ್​ ಖಾನ್​ ಸೇರಿ 8 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್​ 30ರವರೆಗೆ ವಿಸ್ತರಣೆ ಮಾಡಿ ಎನ್​ಸಿಬಿ ಕೋರ್ಟ್​ ಆದೇಶ ಹೊರಡಿಸಿದೆ. ಇದರಿಂದ ಶಾರುಖ್​ ಮತ್ತು ಗೌರಿ ಖಾನ್​ ಇನ್ನಷ್ಟು ಚಿಂತೆಗೆ ಒಳಗಾಗಿದ್ದಾರೆ.

ಇದನ್ನೂ ಓದಿ:

Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್​ ಖಾನ್​; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್​ ಮಗನ ವರ್ತನೆ

‘ಅದಾನಿ ಬಂದರು ಡ್ರಗ್ಸ್​ ಮತ್ತು ರೈತರ ಕೊಲೆ ಮರೆಮಾಚಲು ಶಾರುಖ್​ ಮಗ ಟಾರ್ಗೆಟ್​’: ವಿಶಾಲ್​ ದದ್ಲಾನಿ

ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ಬಿಪಿಎಲ್ ಕಾರ್ಡುಗಳ ಶುದ್ಧೀಕರಣ ಅಗಲೇಬೇಕಿದೆ ಎಂದ ಪ್ರಲ್ಹಾದ ಜೋಶಿ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ