Coimbatore: ಅಲ್ಕೋಹಾಲ್ ಐಸ್ಕ್ರೀಂ ಮಾರುತ್ತಿದ್ದ ಕೆಫೆ ಜಪ್ತಿ; ಪರವಾನಗಿ ರದ್ದು
ಇಲ್ಲಿ ಕೆಲಸ ಮಾಡುವ ಯಾವುದೇ ಕೆಲಸಗಾರರ ಬಳಿಯೂ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವಿಲ್ಲ. ಇಲ್ಲಿನವರು ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ತಲೆಗೆ ಟೊಪ್ಪಿ ಧರಿಸುವುದಿಲ್ಲ. ಕೈಗೆ ಕೈಗವಸು, ಮಾಸ್ಕ್ಗಳನ್ನು ಹಾಕಿಕೊಳ್ಳುವುದಿಲ್ಲ.
ಆಹಾರ ಸ್ವಚ್ಛತೆ ಮತ್ತು ಗುಣಮಟ್ಟ ನಿಯಮಗಳನ್ನು ಪಾಲಿಸದ ಮತ್ತು ಅಕ್ರಮವಾಗಿ ಲಿಕ್ಕರ್ ಬಾಟಲಿಗಳನ್ನು ಇಟ್ಟುಕೊಂಡಿದ್ದ ಕೆಫೆಯೊಂದನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಮುಚ್ಚಿಸಿದ್ದಾರೆ. ಕೊಯಂಬತ್ತೂರಿನ ಅವಿನಾಶಿ ರಸ್ತೆಯಲ್ಲಿರುವ ಲಕ್ಷ್ಮೀ ಮಿಲ್ಸ್ ಪ್ರದೇಶದಲ್ಲಿರುವ ಒಂದು ಕೆಫೆ ಹೀಗೊಂದು ಆರೋಪಕ್ಕೆ ಗುರಿಯಾಗಿದೆ. ಕೆಫೆಯ ಹೆಸರು ರೋಲಿಂಗ್ ಡಫ್.
ಈ ಕೆಫೆಯಲ್ಲಿ ಐಸ್ಕ್ರೀಂಗೆ ಮಧ್ಯ ಮಿಶ್ರಣ ಮಾಡಿ ನೀಡುತ್ತಾರೆ ಎಂದು ಹಲವು ಗ್ರಾಹಕರು ನೀಡಿದ ದೂರಿನ ಮೇರೆಗೆ ಆಹಾರ ಸುರಕ್ಷತಾ ಮತ್ತು ಪರಿಶೀಲನಾ ಅಧಿಕಾರಿಗಳು ಕೆಫೆಗೆ ತೆರಳಿದ್ದರು. ಅಂದಹಾಗೆ ಈ ಕೆಫೆಯಲ್ಲಿ ಸಿಗುವ ಲಿಕ್ಕರ್ ಐಸ್ಕ್ರೀಂ ಸ್ಥಳೀಯ ಯುವಜನರ ಪಾಲಿಗೆ ಅಚ್ಚುಮೆಚ್ಚಿನ ಆಹಾರವಾಗಿಬಿಟ್ಟಿತ್ತು. ಹೀಗೆ ಅಧಿಕಾರಿಗಳು ಭೇಟಿ ಕೊಟ್ಟ ಸಂದರ್ಭದಲ್ಲಿ ಎರಡು ಲಿಕ್ಕರ್ ಬಾಟಲಿಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಇನ್ನು ಕೆಫೆಯಲ್ಲಿ ಆಹಾರ ತಯಾರಿಸುತ್ತಿದ್ದ ಸ್ಥಳವಂತೂ ಪೂರ್ತಿಯಾಗಿ ಸೊಳ್ಳೆ ಮತ್ತು ನೊಣಗಳಿಂದ ತುಂಬಿಹೋಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿ ಕೆಲಸ ಮಾಡುವ ಯಾವುದೇ ಕೆಲಸಗಾರರ ಬಳಿಯೂ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವಿಲ್ಲ. ಇಲ್ಲಿನವರು ಕೆಲಸ ಮಾಡುವ ಸಂದರ್ಭದಲ್ಲಿ ಯಾರೂ ತಲೆಗೆ ಟೊಪ್ಪಿ ಧರಿಸುವುದಿಲ್ಲ. ಕೈಗೆ ಕೈಗವಸು, ಮಾಸ್ಕ್ಗಳನ್ನು ಹಾಕಿಕೊಳ್ಳುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ ಈ ಕೆಫೆಯನ್ನು ಜಪ್ತಿ ಮಾಡಲು ಒಟ್ಟು ಎಂಟು ಕಾರಣಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಕೊಟ್ಟಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್, ಈ ಕೆಫೆಯ ಪರವಾನಗಿ ರದ್ದುಗೊಳಿಸಿ, ಬಾಗಿಲು ಮುಚ್ಚಿ ಸೀಲ್ ಹಾಕಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಮೊಸರು ಮತ್ತು ಹುಣಸೆಹಣ್ಣಿನ ಚಟ್ನಿ ಬೆರೆಸಿ ‘ರಸಗುಲ್ಲಾ ಚಾಟ್’ ನೆಟ್ಟಿಗರ ರಿಯಾಕ್ಷನ್ ಹೇಗಿತ್ತು ನೋಡಿ
Temple Tour: ಮಹಾತಪಸ್ವಿ ಮಾರ್ಕಂಡೇಯ ಶಿವನಲ್ಲಿ ಐಕ್ಯವಾದ ಸಂಗಮ ಕ್ಷೇತ್ರವಿದು; ಒಮ್ಮೆ ಭೇಟಿ ಕೊಡಿ