ಅನಂತಪುರ: ಸೇತುವೆ ಮೇಲೆ ತುಂಬಿ ಹರಿಯುತ್ತಿದ್ದ ಹಳ್ಳದ ನಡುವೆಯೇ ಹುಚ್ಚು ಧೈರ್ಯದಿಂದ ಸಾಗಲು ಹೋದ ಕಾರು ಮತ್ತು ಅದರಲ್ಲಿದ್ದ ಇಬ್ಬರು ಕೊಚ್ಚಿ ಹೊಗಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಹೌದು ಆಂಧ್ರ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆ ಸುರಿಯುತ್ತಿದೆ. ಹೀಗಾಗಿ ನದಿ, ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿವೆ. ಆದ್ರೂ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಕಡಪಾದಿಂದ ಕರ್ನಾಟಕದ ವಿಜಯಪುರಕ್ಕೆ ಕಾರಿನಲ್ಲಿ ಹೊರಟಿದ್ದ ಇಬ್ಬರು, ಹಳ್ಳ ತುಂಬಿ ಹರಿಯುತ್ತಿದ್ದರೂ ಸೇತುವೆ ದಾಟಲು ಮುನ್ನುಗ್ಗಿದ್ದಾರೆ.
ಆದ್ರೆ ಸ್ವಲ್ಪ ದೂರ ಸಾಗಿದ ಮೇಲೆ ಬಲವಾಗಿ ಹರಿಯುತ್ತಿದ್ದ ಹಳ್ಳದ ಸೆಳೆತಕ್ಕೆ ಸಿಲುಕಿ ಕಾರು ಹಾಗೂ ಅದರಲ್ಲಿದ್ದ ಇಬ್ಬರು ಕೊಚ್ಚಿಹೊಗಿದ್ದಾರೆ. ಅದೃಷ್ಟವಶಾತ್ ಸ್ಥಳದಲ್ಲಿದ್ದ ಸ್ಥಳೀಯರು ಸಮಯಪ್ರಜ್ಞೆ ಮತ್ತು ಸಾಹಸದಿದಂದಾಗಿ ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.
#WATCH Andhra Pradesh: A car with 2 passengers inside gets washed away in Anantapur while crossing a rivulet. pic.twitter.com/LTKTLTltYU
— ANI (@ANI) July 30, 2020
Published On - 5:22 pm, Thu, 30 July 20