ಪ್ರವಾಸದ ವೇಳೆ.. ಮದ್ಯ ಸಿಗದಿದ್ದಕ್ಕೆ ಸ್ಯಾನಿಟೈಸರ್ ಕುಡಿದು 10 ಮಂದಿ ಸಾವು, ಎಲ್ಲಿ?
ಆಂಧ್ರ ಪ್ರದೇಶ: ಕುಡಿಯಲು ಮಧ್ಯ ಸಿಗದಿದ್ದಕ್ಕೆ , ಸ್ಯಾನಿಟೈಸರ್ ಕುಡಿದು 10 ಜನ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡುನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಪ್ರವಾಸಿ ತಂಡದವರು ಎನ್ನಲಾಗಿದೆ. ಕುಡಿಯಲು ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದಿದ್ದಾರೆ ಎನ್ನಲಾದ 10 ಜನರಲ್ಲಿ 3 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ 7 ಜನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಘಟನೆಯ ಬಗ್ಗೆ ಪ್ರಕಾಶಂ ಜಿಲ್ಲಾ ಪೊಲೀಸರು ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ […]
ಆಂಧ್ರ ಪ್ರದೇಶ: ಕುಡಿಯಲು ಮಧ್ಯ ಸಿಗದಿದ್ದಕ್ಕೆ , ಸ್ಯಾನಿಟೈಸರ್ ಕುಡಿದು 10 ಜನ ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕುರಿಚೇಡುನಲ್ಲಿ ಈ ಘಟನೆ ಸಂಭವಿಸಿದ್ದು, ಮೃತರೆಲ್ಲರೂ ಪ್ರವಾಸಿ ತಂಡದವರು ಎನ್ನಲಾಗಿದೆ. ಕುಡಿಯಲು ಮದ್ಯ ಸಿಗದೆ ಸ್ಯಾನಿಟೈಸರ್ ಕುಡಿದಿದ್ದಾರೆ ಎನ್ನಲಾದ 10 ಜನರಲ್ಲಿ 3 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಉಳಿದ 7 ಜನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈ ಘಟನೆಯ ಬಗ್ಗೆ ಪ್ರಕಾಶಂ ಜಿಲ್ಲಾ ಪೊಲೀಸರು ಸ್ಯಾನಿಟೈಸರ್ ಕುಡಿದು ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಈ 10 ಜನ ಕಳಪೆ ನಾಟಿ ಸಾರಾಯಿ ಸೇವಿಸಿ ಸಾವನ್ನಪ್ಪಿದಾರೆಂಬುದು ಪೊಲೀಸರ ಅಭಿಪ್ರಾಯವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಪ್ರಕಾಶಂ ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.
Published On - 10:42 am, Fri, 31 July 20