ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಶುಕ್ರವಾರ ಮಧ್ಯಾಹ್ನ 12 ಮತ್ತು 1 ಗಂಟೆಯ ಹೊತ್ತಿಗೆ ಪಶ್ಚಿಮ ಬೊರಿವಲಿಯಲ್ಲಿರುವ ಸಾಯಿಬಾಬಾ ನಗರದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಅಗ್ನಿಶಾಮಕ ದಳ ದೌಡಾಯಿಸಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Maharashtra | A four-storey building collapsed in Saibaba Nagar of Borivali West in Mumbai. Details awaited: Fire Brigade
— ANI (@ANI) August 19, 2022
Four story Geetanjali building located at Saibaba Nagar, Borivali collapsed a while ago, rescue operation is underway. @mid_day @patel_bhupen @MumbaiPolice @MCGM_BMC pic.twitter.com/rtcJL5LsuH
— Sachin Gaad (@GaadSachin) August 19, 2022
ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ, ಗಾಯಗಳಾಗಿರುವ ಬಗ್ಗೆ ವರದಿ ಆಗಿಲ್ಲ. ಶಿಥಿಲಗೊಂಡಿರುವ ಈ ಕಟ್ಟಡ ಬೀಳುವ ಹಂತದಲ್ಲಿದ್ದು ಜನರನ್ನು ಅಲ್ಲಿಂದ ಖಾಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅವಶೇಷಗಳ ಅಡಿಯಲ್ಲಿ ಜನರು ಸಿಲುಕಿದ್ದಾರೆಯೇ ಎಂದು ಅಗ್ನಿಶಾಮಕ ದಳ ಪರಿಶೀಲನೆ ಮಾಡುತ್ತಿದೆ. ಎಂಟು ಅಗ್ನಿಶಾಮಕದಳದ ವಾಹನ, ಎರಡು ರಕ್ಷಣಾ ದಳದ ವ್ಯಾನ್, ಮೂರು ಆಂಬುಲೆನ್ಸ್ ಘಟನಾ ಸ್ಥಳದಲ್ಲಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.
Published On - 1:17 pm, Fri, 19 August 22