Krishna Janmashtami 2022: ಕೃಷ್ಣ ಜನ್ಮಾಷ್ಟಮಿಗೆ ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಮತ್ತಿತರ ಗಣ್ಯರಿಂದ ಶುಭಾಶಯ
ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಭೂಮಿಯ ಮೇಲೆ ಜನ್ಮ ತಾಳಿದ ಶುಭ ದಿನ ಇಂದು. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಭ ಕೋರಿದ್ದಾರೆ.
ಜಗದೋದ್ಧಾರಕ ಶ್ರೀ ಕೃಷ್ಣನ ಜನ್ಮದಿನವಿಂದು. ನಿನ್ನೆಯಿಂದ ಎಲ್ಲರೂ ತಮ್ಮ ಮನೆಯಲ್ಲಿರುವ ಮಕ್ಕಳಿಗೆ ಕೃಷ್ಣ-ರಾಧೆಯ ಡ್ರೆಸ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಕೃಷ್ಣನ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷ ಅಷ್ಟಮಿಯಂದು ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು ಎಂದು ಹೇಳಲಾಗುತ್ತದೆ. ಈ ದಿನ ಶ್ರೀಕೃಷ್ಣನ ಬಾಲ ರೂಪವನ್ನು ಪೂಜಿಸಲು ಇದೇ ಕಾರಣ ಎಂಬ ನಂಬಿಕೆಯೂ ಇದೆ. ಕೃಷ್ಣ ಜನ್ಮಾಷ್ಟಮಿಗೆ (Krishna Janmashtami) ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೇರಿದಂತೆ ಅನೇಕ ರಾಜಕೀಯ ನಾಯಕರು ಶುಭಾಶಯ ಕೋರಿದ್ದಾರೆ.
ನಾಡಿನ ಸಮಸ್ತ ಜನತೆಗೆ ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ ಹೃತ್ಪೂರ್ವಕ ಶುಭಾಶಯಗಳು. ಭಕ್ತಿ ಮತ್ತು ಸಂಭ್ರಮದ ಈ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ. ಶ್ರೀ ಕೃಷ್ಣನಿಗೆ ಜಯವಾಗಲಿ! ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
सभी देशवासियों को जन्माष्टमी के पावन-पुनीत अवसर पर हार्दिक शुभकामनाएं। भक्ति और उल्लास का यह उत्सव हर किसी के जीवन में सुख, समृद्धि और सौभाग्य लेकर आए। जय श्रीकृष्ण!
— Narendra Modi (@narendramodi) August 19, 2022
ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಭೂಮಿಯ ಮೇಲೆ ಜನ್ಮ ತಾಳಿದ ಶುಭ ದಿನ ಇಂದು. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಭ ಕೋರಿದ್ದಾರೆ.
ಸಕಲ ಮಾನವ ಸಂಕುಲವನ್ನು ಉದ್ಧರಿಸಲೆಂದು ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಭೂಮಿಯ ಮೇಲೆ ಜನ್ಮ ತಾಳಿದ ಶುಭ ದಿನ ಇಂದು. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು.#KrishnaJanmashtami pic.twitter.com/6oJK1bol0o
— Basavaraj S Bommai (@BSBommai) August 19, 2022
ಯದಾ ಯದಾ ಹಿ ಧರ್ಮಸ್ಯ | ಗ್ಲಾನಿರ್ಭವತಿ ಭಾರತ || ಅಭ್ಯತ್ಥಾನಮಧರ್ಮಸ್ಯ || ತದಾತ್ಮಾನಂ ಸೃಜಾಮ್ಯಹಂ|| ಪರಿತ್ರಾಣಾಯ ಸಾಧೂನಾಂ | ವಿನಾಶಯ ಚ ದುಷ್ಕೃತಾಂ || ಧರ್ಮಸಂಸ್ಥಾಪನಾರ್ಥಾಯ | ಸಂಭವಾಮಿ ಯುಗೇ ಯುಗೇ ||
ನಾಡಿನ ಸಮಸ್ತ ಜನತೆಗೆ ಭಕ್ತವೃಂದಕ್ಕೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭದಿನದ ಶುಭಾಶಯಗಳು ಎಂದು ಬಿಜೆಪಿ ನಾಯಕ ಪ್ರಲ್ಹಾದ್ ಜೋಶಿ ಶುಭಾಶಯ ಕೋರಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು ಎಂದು ಬಿಜೆಪಿ ನಾಯಕ ಡಿವಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಂದು ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಕುಟುಂಬದೊಂದಿಗೆ ಭೇಟಿನೀಡಿ, ವಿಶೇಷ ಪೂಜೆ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. pic.twitter.com/XfT53Envrb
— Sadananda Gowda (@DVSadanandGowda) August 18, 2022
ರಾಜ್ಯದ ಸಮಸ್ತರಿಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಶ್ರೀಕೃಷ್ಣನ ಕೃಪಾಶೀರ್ವಾದ ಎಲ್ಲರಿಗೂ ದೊರೆತು ಶುಭ ಉಂಟಾಗಲಿ. ಪ್ರತಿ ಕುಟುಂಬದ ಕಷ್ಟಗಳು ನಿವಾರಣೆಯಾಗಿ, ಸುಖ, ಸಂತೋಷ, ಸಮೃದ್ಧಿ, ಯಶಸ್ಸು ಲಭ್ಯವಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕೂ ಮಾಡಿದ್ದಾರೆ.
ಇದನ್ನೂ ಓದಿ: Krishna Janmashtami 2022: ಭಾರತದಾದ್ಯಂತ ಜನ್ಮಾಷ್ಟಮಿ ಆಚರಣೆ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ
ಕೃಷ್ಣಂ ವಂದೇ ಜಗದ್ಗುರುಂ.. ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ. ನಾಡಿನ ಸಮಸ್ತ ಜನರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕೃಷ್ಣಂ ವಂದೇ ಜಗದ್ಗುರುಂ..
ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧೆಭಕ್ತಿಯಿಂದ ಆಚರಿಸೋಣ. ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿದ ಜಗದೋದ್ಧಾರಕನನ್ನು ಪೂಜಿಸಿ ಪಾವನರಾಗೋಣ.
ನಾಡಿನ ಸಮಸ್ತ ಜನರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು.#ಶ್ರೀಕೃಷ್ಣ_ಜನ್ಮಾಷ್ಟಮಿ pic.twitter.com/ARutCUrFvS
— H D Kumaraswamy (@hd_kumaraswamy) August 19, 2022
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:37 am, Fri, 19 August 22