ಮಥುರಾ: ಕೃಷ್ಣನು ಜನಿಸಿದ ಕೃಷ್ಣ ಜನ್ಮಭೂಮಿ ಎಂದು ಕರೆಯಲ್ಪಡುವ, ಯಮುನಾ ನದಿಯ ದಡದಲ್ಲಿರುವ ಮಥುರಾ ಉತ್ತರ ಪ್ರದೇಶದ ಜಿಲ್ಲಾ ಕೇಂದ್ರ. ಇದು ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಏಳು ನಗರಗಳಲ್ಲಿ (ಸಪ್ತಾ ಪುರಿ) ಮಥುರಾ ಕೂಡ ಒಂದು. ಕೃಷ್ಣ ಜನ್ಮಾಷ್ಟಮಿಯಂದು ಇಲ್ಲಿ ಅದ್ಧೂರಿಯ ಆಚರಣೆಗಳು ನಡೆಯುತ್ತವೆ. ಹೀಗಾಗಿ ಈ ವಿಶೇಷ ದಿನದಂದು ಇಲ್ಲಿಗೆ ಭೇಟಿ ನೀಡಿ ಕೃಷ್ಣನ ಕೃಪೆಗೆ ಪಾತ್ರರಾಗಿ.