Watch ದೆಹಲಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಡಿಟಿಸಿ ಬಸ್; ಹತ್ತಿರದ ಎರಡು ಅಂಗಡಿಗಳು ಭಸ್ಮ

| Updated By: ರಶ್ಮಿ ಕಲ್ಲಕಟ್ಟ

Updated on: Apr 07, 2022 | 1:37 PM

ಅಗ್ನಿಶಾಮಕ ದಳದ ಪ್ರಕಾರ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು. ಬುಧವಾರ ಮಧ್ಯಾಹ್ನ ಹೊತ್ತು ಘಟನೆ ನಡೆದಿದೆ.

Watch ದೆಹಲಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಡಿಟಿಸಿ ಬಸ್; ಹತ್ತಿರದ ಎರಡು ಅಂಗಡಿಗಳು ಭಸ್ಮ
ಹೊತ್ತಿ ಉರಿದ ಬಸ್
Follow us on

ದೆಹಲಿ: ದಕ್ಷಿಣ ದಿಲ್ಲಿಯ ಮಹಿಪಾಲ್‌ಪುರ ಪ್ರದೇಶದಲ್ಲಿ ಬುಧವಾರ ದೆಹಲಿ ಸಾರಿಗೆ ಸಂಸ್ಥೆಯ (Delhi Transport Corporation-DTC) ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಘಟನೆಯ ವೇಳೆ ಬಸ್ ಖಾಲಿ ಇದ್ದ ಕಾರಣ ಯಾರಿಗೂ ಗಾಯಗಳಾಗಿಲ್ಲ. ಅಗ್ನಿಶಾಮಕ ದಳದ ಪ್ರಕಾರ ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು. ಮಧ್ಯಾಹ್ನ ಹೊತ್ತು ಘಟನೆ ನಡೆದಿದೆ. ಜೋರಾದ ಗಾಳಿಯ ಹೊಡೆತಕ್ಕೆ ಬೆಂಕಿ ಹರಡಿದ್ದು ಆ ಪ್ರದೇಶದ ಎರಡು ಅಂಗಡಿಗಳು ಸುಟ್ಟು ಕರಕಲಾಗಿವೆ. ಆನಂದ್ ವಿಹಾರ್ ಐಎಸ್‌ಬಿಟಿಯಿಂದ ಮೆಹ್ರೌಲಿಗೆ ಚಲಿಸುವ ಮಾರ್ಗ ಸಂಖ್ಯೆ 534 ರಲ್ಲಿ ಸಂಚರಿಸುವ ಬಸ್‌ನಲ್ಲಿ ಮಧ್ಯಾಹ್ನ 2.20 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ. ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೊದಲ್ಲಿ ಬಸ್‌ನಿಂದ ದೊಡ್ಡ ಪ್ರಮಾಣದ ಹೊಗೆ ಹೊರಹೊಮ್ಮುತ್ತಿರುವುದು  ಕಾಣಬಹುದು.


ಕಳೆದ ತಿಂಗಳು ವಾಯುವ್ಯ ದೆಹಲಿಯ ಕಂಝವಾಲಾ ಪ್ರದೇಶದಲ್ಲಿ ಕ್ಲಸ್ಟರ್ ಬಸ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಡಿಪೋದಿಂದ ಹೊರಬಂದಿದ್ದರಿಂದ ಪ್ರಯಾಣಿಕರು ಇರಲಿಲ್ಲ.

ಇದನ್ನೂ ಓದಿ:  ಭಾರತೀಯ ಸೇನೆಗೆ ಸೇರುವ ತವಕದಿಂದ 350 ಕಿ.ಮೀ ಓಡಿ ದೆಹಲಿ ತಪುಪಿದ ರಾಜಸ್ಥಾನ ಯುವಕ; ಇಲ್ಲಿದೆ ವೈರಲ್ ವಿಡಿಯೋ

 

Published On - 1:36 pm, Thu, 7 April 22