ಭೋಪಾಲ್: ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾಗಳ (Cheetah) ಮೇಲೆ ಬೇಟೆಗಾರ ಕಣ್ಣು ಬಿದ್ದಿದೆ. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದ (ಕೆಎನ್‌ಪಿ) ಕೋರ್ ಏರಿಯಾದಲ್ಲಿ ವ್ಯಕ್ತಿಯೊಬ್ಬನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ಚೀತಾಗಳನ್ನು ಬೇಟೆಯಾಡಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗಿದೆ. ಆಲಂ ಮೊಂಗಿಯಾ ಎಂಬ ವ್ಯಕ್ತಿಯಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಈ ಬೇಟೆಗಾರರು ಇಲ್ಲಿನ ನದಿ ಪ್ರದೇಶಗಳಲ್ಲಿ ಬಂದೂಕುಗಳನ್ನು ಹೂತಿಟ್ಟಿದ್ದರೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಪಿ.ಕೆ.ವರ್ಮಾ ತಿಳಿಸಿದ್ದಾರೆ.
40ರ ಹರೆಯದ ಈ ಮೋಂಗಿಯಾ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಭಾರತದಲ್ಲಿ ನಾಶವಾಗಿರುವ ಚೀತಾಗಳನ್ನು ಮತ್ತೆ ಪುನರುಜ್ಜೀವನಗೊಳಿಸಲು ಸಂರಕ್ಷಿತ ಅರಣ್ಯದಲ್ಲಿ ಇವುಗಳನ್ನು ಬಿಡಲಾಗಿದೆ. ಆದರೆ ಚೀತಾಗಳು ಬೇಟೆಗಾರ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗಿದೆ. ಈಗಾಗಲೇ ನಾಲ್ಕನೇ ಬೇಟೆಗಾರ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಧಿಕಾರಿಯ ಪ್ರಕಾರ, ಮೊಂಗಿಯಾ ಎಂಬ ವ್ಯಕ್ತಿಯನ್ನು ಏಪ್ರಿಲ್ 16 ರಂದು ಕೆಎನ್‌ಪಿಯ ಪ್ರಮುಖ ಪ್ರದೇಶದಲ್ಲಿ ಬಂಧಿಸಲಾಯಿತು ಆದರೆ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದಾರೆ, ಅವರನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಚೀತಾ ಬಿಡುಗಡೆ ಮಾಡಿದ ದಿನದಿಂದ ಬಂಧಿತರಾದ ಎಲ್ಲಾ ನಾಲ್ವರು ಕಳ್ಳ ಬೇಟೆಗಾರರು ಮಾಂಸಾಹಾರಿಗಳನ್ನು ಭೇಟೆಯಾಡುತ್ತಿಲ್ಲ. ಅವರು ಬುಷ್‌ಮೀಟ್‌ಗಾಗಿ ಸಸ್ಯಾಹಾರಿಗಳನ್ನು ಬೇಟೆಯಾಡುತ್ತಿದ್ದಾರೆ ಎಂದು ವರ್ಮಾ ಹೇಳಿದರು. ಮೊಂಗಿಯಾ ಈ ಹಿಂದೆಯೂ ಪ್ರಾಣಿಗಳನ್ನು ಬೇಟೆಯಾಡಿದ್ದಾರೆ ಎಂದು ವರ್ಮಾ ಹೇಳಿದ್ದಾರೆ.
ಇದನ್ನೂ ಓದಿ:Cheetah: ದಕ್ಷಿಣ ಆಫ್ರಿಕಾದಿಂದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತಂದಿದ್ದ ಮತ್ತೊಂದು ಚೀತಾ ಸಾವು
ಈ ಬಗ್ಗೆ ಮೊಂಗಿಯಾ ಬೇಟೆಗಾರನನ್ನು ತನಿಖೆ ಮಾಡಿದ್ದೇವೆ. ಆದರೆ ಈ ವಿಚಾರವಾಗಿ ಆತನ ಜತೆಗೆ ಯಾವುದೇ ದೊಡ್ಡ ಗ್ಯಾಂಗ್ ಇಲ್ಲ ಎಂದು ಎಂದು ಡಿಎಫ್‌ಒ ಹೇಳಿದರು. ಡಿಸೆಂಬರ್ 2022ರಲ್ಲಿ, ಮಧ್ಯಪ್ರದೇಶದ ಪನ್ನಾ ಟೈಗರ್ ರಿಸರ್ವ್ ಬಳಿ ಕ್ಲಚ್-ವೈರ್ ಬಲೆಯಲ್ಲಿ ಮರಕ್ಕೆ ನೇತಾಡುತ್ತಿರುವ ಚೀತಾದ ಮೃತದೇಹ ಪತ್ತೆಯಾಗಿದೆ, ಪ್ರಾಣಿಗಳ ಸಾವಿನಲ್ಲಿ ಕಳ್ಳ ಬೇಟೆಗಾರರ ಪಾತ್ರವಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ 17 ರಂದು ನಮೀಬಿಯಾದಿಂದ ತರಲಾದ ಎಂಟು ಚಿರತೆಗಳ ಮೊದಲ ಬ್ಯಾಚ್ ಅನ್ನು ಅಲ್ಲಿನ ಕ್ವಾರಂಟೈನ್ ಆವರಣಗಳಿಗೆ ಪ್ರಧಾನ ಮಂತ್ರಿ ಬಿಡುಗಡೆ ಮಾಡಿದಾಗಿನಿಂದ ಕುನೋ ಉದ್ಯಾನವನವು ಗಮನ ಸೆಳೆಯುತ್ತಿದೆ. ಅವುಗಳಲ್ಲಿ ಒಂದು ಹೆಣ್ಣು ಚಿರತೆ ನಂತರ ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತು. ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳ ಎರಡನೇ ಭಾಗವನ್ನು ಬಿಡುಗಡೆ ಮಾಡಲಾಯಿತು. ಅವುಗಳಲ್ಲಿ ಒಂದು ಗಂಡು ಚಿರತೆ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಾವನ್ನಪ್ಪಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Sat, 29 April 23