ತನ್ನ ಗರ್ಲ್​​ಫ್ರೆಂಡ್ ಮದುವೆ ನಿಲ್ಲಿಸಲು, ಮುಖ್ಯಮಂತ್ರಿಗೇ ಐಡಿಯಾ ಕೊಟ್ಟ..; ವೈರಲ್​ ಆಯ್ತು ಟ್ವೀಟ್​

|

Updated on: May 23, 2021 | 11:40 PM

ಮೇ 13ರಂದು ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರು ಒಂದು ಟ್ವೀಟ್ ಮಾಡಿದ್ದರು. ಲಾಕ್​ಡೌನ್ ಮಾಡಿದ್ದರಿಂದ ಬಿಹಾರದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಾಗಾಗಿ ಮೇ 25ರವರೆಗೂ ಲಾಕ್​ಡೌನ್ ಮುಂದುವರಿಸಲಾಗುವುದು ಎಂದು ಹೇಳಿದ್ದರು.

ತನ್ನ ಗರ್ಲ್​​ಫ್ರೆಂಡ್ ಮದುವೆ ನಿಲ್ಲಿಸಲು, ಮುಖ್ಯಮಂತ್ರಿಗೇ ಐಡಿಯಾ ಕೊಟ್ಟ..; ವೈರಲ್​ ಆಯ್ತು ಟ್ವೀಟ್​
ಬಿಹಾರದ ಮುಖ್ಯಮಂತ್ರಿ ಮತ್ತು ವೈರಲ್ ಆದ ಟ್ವೀಟ್​
Follow us on

ಕೊವಿಡ್​ 19 ಸೋಂಕಿನ ಪ್ರಸರಣ ಹೆಚ್ಚುತ್ತಿರುವುದರಿಂದ ರಾಜ್ಯದಲ್ಲಿ ಸದ್ಯ ಮದುವೆಗಳನ್ನು ನಿಷೇಧಿಸಿ ಎಂದು ಬಿಹಾರದಲ್ಲಿ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಟ್ವಿಟರ್​ನಲ್ಲಿ ಮನವಿ ಮಾಡಿದ್ದಾನೆ. ಆತನ ಮನವಿಯನ್ನು ಓದಿ ಟ್ವಿಟ್ಟಿಗರು ಸಿಕ್ಕಾಪಟೆ ನಕ್ಕಿದ್ದಾರೆ. ಹಾಗೇ, ಅವನ ಟ್ವೀಟ್ ಸಖತ್​ ವೈರಲ್ ಕೂಡ ಆಗಿದೆ.
ಈ ವ್ಯಕ್ತಿಯ ಹೆಸರು ಪಂಕಜ್​ ಕುಮಾರ್ ಗುಪ್ತಾ. ತನ್ನ ಪ್ರೇಯಸಿಯ ಮದುವೆಯನ್ನು ನಿಲ್ಲಿಸುವ ಉದ್ದೇಶದಿಂದ ಈತ ಹೀಗೆ ಮನವಿ ಮಾಡಿದ್ದಾನೆ. ಅದನ್ನು ನೋಡಿದ ನೆಟ್ಟಿಗರು ಸಿಕ್ಕಾಪಟೆ ನಕ್ಕಿದ್ದಾರೆ.

ಮೇ 13ರಂದು ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರು ಒಂದು ಟ್ವೀಟ್ ಮಾಡಿದ್ದರು. ಲಾಕ್​ಡೌನ್ ಮಾಡಿದ್ದರಿಂದ ಬಿಹಾರದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಾಗಾಗಿ ಮೇ 25ರವರೆಗೂ ಲಾಕ್​ಡೌನ್ ಮುಂದುವರಿಸಲಾಗುವುದು ಎಂದು ಹೇಳಿದ್ದರು. ಅದಕ್ಕೆ ಈ ಪಂಕಜ್​ ಕುಮಾರ್ ಗುಪ್ತಾ ರಿಪ್ಲೈ ಮಾಡಿ, ಸರ್​ ನೀವು ಲಾಕ್​ಡೌನ್ ಮಾಡುವ ಜತೆಗೆ ಈ ಸಂದರ್ಭದಲ್ಲಿ ಮದುವೆ ಮಾಡಬಾರದು ಎಂಬ ಆದೇಶ ಹೊರಡಿಸಿದರೆ ಇನ್ನೂ ಒಳ್ಳೆಯದು. ಯಾಕೆಂದರೆ ನನ್ನ ಪ್ರಿಯತಮೆಯ ಮದುವೆ ಮೇ 19ಕ್ಕೆ ನಡೆಯಲಿದೆ. ಹಾಗೊಮ್ಮೆ ವಿವಾಹ ನಡೆಸದಂತೆ ಆದೇಶಿಸಿದರೆ ಅದೂ ಕೂಡ ಮುಂದೆ ಹೋಗುತ್ತದೆ. ಅಷ್ಟರ ಮಟ್ಟಿಗೆ ನಾನು ನಿಮಗೆ ಕೃತಜ್ಞನಾಗಿರುತ್ತೇನೆ ಎಂದು ಹೇಳಿದ್ದ.

ಮುಖ್ಯಮಂತ್ರಿ ಟ್ವೀಟ್​ಗೆ ಪಂಕಜ್​ ಕುಮಾರ್ ಮಾಡಿದ್ದ ರಿಪ್ಲೈ ನೋಡಿ ಜನರು ತುಂಬ ಖುಷಿಯಾಗಿದ್ದರು. ಆತನ ರಿಪ್ಲೈಗೆ ಹಲವು ತಮಾಷೆಭರಿತ ಕಾಮೆಂಟ್​ಗಳನ್ನೂ ಮಾಡಿದ್ದಾರೆ.

ಇದನ್ನೂ ಓದಿ: ‘ರೆಮ್​ಡಿಸಿವಿರ್ ಹಂಚಿಕೆಯಲ್ಲಿ ಅಕ್ರಮ ತಡೆಯಲು ಕ್ರಮ; ತಂತ್ರಜ್ಞಾನ ಆಧಾರಿತ ವ್ಯವಸ್ಥೆ’