‘ರೆಮ್​ಡಿಸಿವಿರ್ ಹಂಚಿಕೆಯಲ್ಲಿ ಅಕ್ರಮ ತಡೆಯಲು ಕ್ರಮ; ತಂತ್ರಜ್ಞಾನ ಆಧಾರಿತ ವ್ಯವಸ್ಥೆ’

ಪಾರದರ್ಶಕ ವ್ಯವಸ್ಥೆಯಿಂದ ರೆಮ್​ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

‘ರೆಮ್​ಡಿಸಿವಿರ್ ಹಂಚಿಕೆಯಲ್ಲಿ ಅಕ್ರಮ ತಡೆಯಲು ಕ್ರಮ; ತಂತ್ರಜ್ಞಾನ ಆಧಾರಿತ ವ್ಯವಸ್ಥೆ’
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 21, 2021 | 9:59 AM

ಬೆಂಗಳೂರು: ರೆಮ್‌ಡಿಸಿವಿರ್ ಹಂಚಿಕೆಯಲ್ಲಿ ಪಾರದರ್ಶಕತೆಗೆ ವ್ಯವಸ್ಥೆ ಮಾಡಲಾಗಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ ರೂಪಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಇಂದು (ಮೇ 23) ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಸೋಂಕಿತರ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಔಷಧ ಹಂಚಿಕೆ ಮಾಡಲಾಗುತ್ತದೆಯೋ, ಆ ಆಸ್ಪತ್ರೆಗೆ ಔಷಧ ಹಂಚಿಕೆಯ ಬಗ್ಗೆ ಸಂದೇಶ ಕಳಿಸಲಾಗುತ್ತದೆ. ಜನರು ಈ ಲಿಂಕ್ ಮೂಲಕ ತಮಗೆ ಹಂಚಿಕೆಯಾಗಿರುವ ಔಷಧದ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಡಾ.ಸುಧಾಕರ್ ತಿಳಿಸಿದ್ದಾರೆ.

ಒಂದುವೇಳೆ ಸೋಂಕಿತರ ಎಸ್​ಆರ್​ಎಫ್ ಐಡಿಗೆ ಔಷಧ ಹಂಚಿಕೆಯಾಗಿ, ಆಸ್ಪತ್ರೆ ಅದನ್ನು ಆ ವ್ಯಕ್ತಿ ಚಿಕಿತ್ಸೆಗೆ ಒದಗಿಸದಿದ್ದಲ್ಲಿ ವರದಿ ಮಾಡಬೇಕು. ಇದೇ ಲಿಂಕ್ ಮೂಲಕ ಸರ್ಕಾರಕ್ಕೆ ವರದಿ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಡಾ.ಸುಧಾಕರ್ ಹೇಳಿದ್ದಾರೆ. ಈ ಪಾರದರ್ಶಕ ವ್ಯವಸ್ಥೆಯಿಂದ ರೆಮ್​ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕೋಣ ಎಂದು ಅವರು ತಿಳಿಸಿದ್ದಾರೆ.

ರೆಮ್​ಡಿಸಿವಿರ್ ಅಕ್ರಮ ಮಾರಾಟ; ಈವರೆಗಿನ ಪ್ರಕರಣಗಳ ವಿವರ ನಗರದಲ್ಲಿ ಅಕ್ರಮವಾಗಿ ರೆಮ್‌ಡಿಸಿವಿರ್‌ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈವರೆಗೂ ಸಿಸಿಬಿ ಪೊಲೀಸರಿಂದ 57 ಆರೋಪಿಗಳನ್ನು ಬಂಧಿಸಲಾಗಿದೆ. 24 ಕೇಸ್ ದಾಖಲಿಸಿ 121 ರೆಮ್‌ಡಿಸಿವಿರ್‌ ಇಂಜೆಕ್ಷನ್ ಜಪ್ತಿ ಮಾಡಲಾಗಿದೆ. ಸಿಸಿಬಿ ಕಾರ್ಯಾಚರಣೆಯ ಬಗ್ಗೆ ವಿಭಾಗವಾರು ಮಾಹಿತಿ ಲಭ್ಯವಾಗಿದೆ.

ವಿಶೇಷ ವಿಚಾರಣಾ ದಳದ ವಿಭಾಗದಲ್ಲಿ 4 ಕೇಸ್ ದಾಖಲಾಗಿದ್ದು, 8 ಜನ ಸೆರೆಯಾಗಿದ್ದಾರೆ. $5 ಲಕ್ಷ 30 ಸಾವಿರ ಮೌಲ್ಯದ 22 ರೆಮ್‌ಡಿಸಿವಿರ್‌ ವಶಕ್ಕೆ ಪಡೆಯಲಾಗಿದೆ. ಆರ್ಥಿಕ ಅಪರಾಧ ದಳ ವಿಭಾಗದಲ್ಲಿ 3 ಕೇಸ್‌ ದಾಖಲಾಗಿದೆ. 6 ಜನ ಸೆರೆಯಾಗಿದ್ದಾರೆ. $8 ಲಕ್ಷ 30 ಸಾವಿರ ಮೌಲ್ಯದ 14 ರೆಮ್‌ಡಿಸಿವಿರ್‌ ವಶಕ್ಕೆ ಪಡೆಯಲಾಗಿದೆ. ಮಾದಕ ದ್ರವ್ಯ ನಿಗ್ರಹ ದಳದಲ್ಲಿ 2 ಕೇಸ್ ದಾಖಲಾಗಿದೆ. ಮೂವರ ಬಂಧನವಾಗಿದೆ. $1 ಲಕ್ಷ 40 ಸಾವಿರ ಮೌಲ್ಯದ 7 ರೆಮ್‌ಡಿಸಿವಿರ್‌ ವಶಕ್ಕೆ ಪಡೆಯಲಾಗಿದೆ. ಪಶ್ಚಿಮ ವಿಭಾಗದ ಸಂಘಟಿತ ಅಪರಾಧ ದಳದಲ್ಲಿ 6 ಕೇಸ್‌ ದಾಖಲಾಗಿದೆ. 15 ಆರೋಪಿಗಳ ಬಂಧನ ಮಾಡಲಾಗಿದ್ದು, $5 ಲಕ್ಷ 40 ಸಾವಿರ ಮೌಲ್ಯದ 27 ರೆಮ್‌ಡಿಸಿವಿರ್‌ ವಶಕ್ಕೆ ಪಡೆಯಲಾಗಿದೆ.

ಪೂರ್ವ ವಿಭಾಗದ ಸಂಘಟಿತ ಅಪರಾಧ ದಳದಲ್ಲಿ 2 ಪ್ರಕರಣ ದಾಖಲಾಗಿದೆ. ಎರಡು ಕೇಸ್‌ ದಾಖಲಿಸಿಕೊಂಡು 8 ಆರೋಪಿಗಳ ಬಂಧನವಾಗಿದೆ. 18 ಸಾವಿರ ರೂಪಾಯಿ ಮೌಲ್ಯದ 18 ರೆಮ್‌ಡಿಸಿವಿರ್‌ ಜಪ್ತಿ ಮಾಡಲಾಗಿದೆ. ಮಹಿಳಾ ಸಂರಕ್ಷಣಾ ದಳದಲ್ಲಿ 7 ಕೇಸ್ ದಾಖಲಾಗಿದ್ದು, 17 ಜನರ ಬಂಧನವಾಗಿದೆ. $1 ಲಕ್ಷ 17 ಸಾವಿರ ಮೌಲ್ಯದ 33 ರೆಮ್‌ಡಿಸಿವಿರ್‌ ವಶಕ್ಕೆ ಪಡೆಯಲಾಗಿದೆ. ರೆಮ್​ಡಿಸಿವಿರ್ ಔಷಧವನ್ನು ಕಾಳ ಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಅಕ್ರಮವಾಗಿ ಮಾರುತ್ತಿದ್ದರು ಎಂದು ತಿಳಿದುಬಂದಿದೆ. ಈ ದಂಧೆಯ ಪ್ರಮುಖ ಆರೋಪಿಗಳಿಗಾಗಿ ಸಿಸಿಬಿಯಿಂದ ಶೋಧಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: Covid-19: ಕೊರೊನಾ ಸೋಂಕು ಗಂಭೀರ ಹಂತಕ್ಕೆ ಹೋಗದಂತೆ ತಡೆಯಲು ಈ ಸೂಚನೆಗಳನ್ನು ಪಾಲಿಸಿ

PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!

Published On - 10:41 pm, Sun, 23 May 21

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ