AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?

ದೇಶದಲ್ಲಿ ಕೊರೊನಾ 2ನೇ ಅಲೆ ಅಬ್ಬರ ಜೋರಾಗಿದೆ. ಸಾವಿನ ಸಂಖ್ಯೆಯೂ ಮಿತಿಮೀರಿದೆ. ಒಂದು ದಿನದಲ್ಲಿ 4000ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ.

ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: May 23, 2021 | 10:09 PM

Share

ದೆಹಲಿ: ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 3 ಲಕ್ಷವನ್ನು ದಾಟಿದೆ. ಸದ್ಯ ಕೊರೊನಾದಿಂದ ಉಂಟಾದ ಸಾವಿನ ಸಂಖ್ಯೆಯಲ್ಲಿ ಯುನೈಟೆಡ್​ ಸ್ಟೇಟಸ್​ ಮೊದಲ ಸ್ಥಾನದಲ್ಲಿದ್ದು, ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ಇದೀಗ ಭಾರತ ಮೂರನೇ ಸ್ಥಾನಕ್ಕೆ ಏರಿದೆ.

ದೇಶದಲ್ಲಿ ಕೊರೊನಾ 2ನೇ ಅಲೆ ಅಬ್ಬರ ಜೋರಾಗಿದೆ. ಸಾವಿನ ಸಂಖ್ಯೆಯೂ ಮಿತಿಮೀರಿದೆ. ಒಂದು ದಿನದಲ್ಲಿ 4000ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ದಾಖಲಾಗುತ್ತಿವೆ. ಈಗ ಒಟ್ಟು ಸಾವಿನ ಸಂಖ್ಯೆ 3 ಲಕ್ಷ ತಲುಪಿದೆ. ಯುಎಸ್​ನಲ್ಲಿ ಇದುವರೆಗೆ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 5,89,703 ಮತ್ತು ಬ್ರೆಜಿಲ್​​ನಲ್ಲಿ ಇದುವರೆಗೆ 448,208 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾಗಿ ವರದಿಯಾಗಿದೆ. ಇವೆರಡೂ ದೇಶವನ್ನು ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಮಂದಿ ಕೊವಿಡ್​ 19ನಿಂದ ಸಾವನ್ನಪ್ಪಿದ್ದು. ಕಳೆದ ವರ್ಷ ಚೀನಾದಲ್ಲಿ ಕೊರೊನಾ ಸೋಂಕು ಶುರುವಾದಾಗಿನಿಂದ ಇಲ್ಲಿಯವರೆಗೆ ಜಾಗತಿಕವಾಗಿ ಸುಮಾರು 3,456,282 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಭಾರತದಲ್ಲಿ ಕೊರೊನಾ 2ನೇ ಅಲೆ ಉಲ್ಬಣಗೊಂಡ ಬೆನ್ನಲ್ಲೇ ಆಕ್ಸಿಜನ್​, ಔಷಧಿಗಳ ಕೊರತೆ ಎದುರಾಗಿದೆ. ಹಲವು ರಾಜ್ಯಗಳಲ್ಲಿ ಅನೇಕ ಕೊವಿಡ್​ ರೋಗಿಗಳು ಆಕ್ಸಿಜನ್​ ಸಿಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!

ಮೈಸೂರು: ಕೊರೊನಾ ಸ್ಥಿತಿಗತಿ, ಲಸಿಕೆ ನೀಡಿಕೆ ಬಗ್ಗೆ ಫೇಸ್​ಬುಕ್ ಲೈವ್ ಮೂಲಕ ರೋಹಿಣಿ ಸಿಂಧೂರಿ ಮಾಹಿತಿ