Monkeypox: ನೈಜೀರಿಯಾದ ಮಹಿಳೆಗೆ ದೆಹಲಿಯಲ್ಲಿ ಮಂಕಿಪಾಕ್ಸ್‌ ಪತ್ತೆ, ಇದು ದೇಶದಲ್ಲಿ 13ನೇ ಪ್ರಕರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 16, 2022 | 4:34 PM

30 ವರ್ಷದ ನೈಜೀರಿಯಾದ ಮಹಿಳೆ ಮಂಕಿಪಾಕ್ಸ್‌ ಪತ್ತೆಯಾಗಿದ್ದು, ಇದು ನಗರದ ಎಂಟನೇ ಮತ್ತು ದೇಶದ ಹದಿಮೂರನೇ ವೈರಸ್ ಸೋಂಕಿನ ಪ್ರಕರಣವಾಗಿದೆ ಎಂದು ಮೂಲಗಳು ತಿಳಿಸಿವೆ.

Monkeypox: ನೈಜೀರಿಯಾದ ಮಹಿಳೆಗೆ ದೆಹಲಿಯಲ್ಲಿ ಮಂಕಿಪಾಕ್ಸ್‌ ಪತ್ತೆ, ಇದು ದೇಶದಲ್ಲಿ 13ನೇ ಪ್ರಕರಣ
Follow us on

ದೆಹಲಿ: ದೆಹಲಿಯಲ್ಲಿ 30 ವರ್ಷದ ನೈಜೀರಿಯಾದ ಮಹಿಳೆ ಮಂಕಿಪಾಕ್ಸ್‌ ಪತ್ತೆಯಾಗಿದ್ದು, ಇದು ನಗರದ ಎಂಟನೇ ಮತ್ತು ದೇಶದ ಹದಿಮೂರನೇ ವೈರಸ್ ಸೋಂಕಿನ ಪ್ರಕರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯನ್ನು ಲೋಕನಾಯಕ ಜೈ ಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಮಂಕಿಪಾಕ್ಸ್‌ನಿಂದ ಬಳಲುತ್ತಿರುವ ಶಂಕಿತ ಇನ್ನೊಬ್ಬ ವ್ಯಕ್ತಿಯನ್ನು ದೆಹಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದೆ.

ಇಲ್ಲಿಯವರೆಗೆ ದೆಹಲಿಯಲ್ಲಿ ಒಟ್ಟು ಎಂಟು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಇತ್ತೀಚಿನ 30 ವರ್ಷ ವಯಸ್ಸಿನ ನೈಜೀರಿಯಾದ ಮಹಿಳೆಯಾಗಿದ್ದು, ಎಲ್ಎನ್ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆರಂಭಿಕ ಆರು ಪ್ರಕರಣಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.

ಮಂಕಿಪಾಕ್ಸ್ ಒಂದು ವೈರಲ್ ಝೂನೋಟಿಕ್ ಕಾಯಿಲೆಯಾಗಿದ್ದು, ಜ್ವರ, ಚರ್ಮದ ಗಾಯಗಳು, ಲಿಂಫಾಡೆನೋಪತಿ, ತಲೆನೋವು, ಸ್ನಾಯು ನೋವು, ನಿಶ್ಯಕ್ತಿ, ಶೀತ ಬೆವರು, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಸಾಮಾನ್ಯ ಲಕ್ಷಣಗಳನ್ನು ಹೊಂದಿದೆ.