BIG NEWS: ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಸೆ.21 ರವರೆಗೆ ಸಿಬಿಐ ವಶಕ್ಕೆ
ಎಸ್‌ಎಸ್‌ಸಿ ಹಗರಣ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಸೆಪ್ಟೆಂಬರ್ 21 ರವರೆಗೆ ಸಿಬಿಐಗೆ ಅಲಿಪೋರ್ ನ್ಯಾಯಾಲಯವು ವಶಕ್ಕೆ ನೀಡಿದೆ.
ಪಶ್ಚಿಮ ಬಂಗಾಳ: ಕೇಂದ್ರೀಯ ತನಿಖಾ ದಳ (CBI) ಶುಕ್ರವಾರ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯ (WBBSE) ಮಾಜಿ ಅಧ್ಯಕ್ಷ ಕಲ್ಯಾಣ್‌ಮೋಯ್ ಗಂಗೂಲಿ (Kalyanmoy Ganguly) ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ (Partha Chatterjee) ಅವರನ್ನು ಶುಕ್ರವಾರ ಅಲಿಪೋರ್ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಸರ್ಕಾರಿ ಶಾಲೆಗಳಲ್ಲಿನ ಗ್ರೂಪ್-ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಗಂಗೂಲಿ ಮತ್ತು ಚಟರ್ಜಿ ಅವರನ್ನು ಸೆಪ್ಟೆಂಬರ್ 21 ರವರೆಗೆ ಅಲಿಪೋರ್ ನ್ಯಾಯಾಲಯವು ಸಿಬಿಐ ಕಸ್ಟಡಿಗೆ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಮೇ 20 ರಂದು ಕಲ್ಯಾಣ್‌ಮೋಯ್ ಗಂಗೂಲಿ ಸೇರಿದಂತೆ ಐವರ ವಿರುದ್ಧ ಪ್ರಕರಣ ದಾಖಲಿಸಿತ್ತು.
#UPDATE | West Bengal | SSC scam case: Alipore Court grants remand of former minister Partha Chatterjee to CBI till September 21. https://t.co/53o72jO0Xp
— ANI (@ANI) September 16, 2022
ಸೆ.21ರವರೆಗೆ ಕಲ್ಯಾಣಮೋಯ್ ಗಂಗೂಲಿ ಸಿಬಿಐ ಕಸ್ಟಡಿಗೆ
ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಕಲ್ಯಾಣ್‌ಮೋಯ್ ಗಂಗೂಲಿ ಅವರನ್ನು ಶುಕ್ರವಾರ ಕೋಲ್ಕತ್ತಾದ ಅಲಿಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗುರುವಾರ ಅವರನ್ನು ಸಿಬಿಐನ ಕೋಲ್ಕತ್ತಾ ಕಚೇರಿಗೆ ಕರೆಸಿಕೊಳ್ಳಲಾಗಿದ್ದು, ಅಲ್ಲಿ ಅವರು ಸಹಕರಿಸಿಲ್ಲ ಇದಾದ ನಂತರ ಅವರನ್ನು ಬಂಧಿಸಲಾಯಿತು.
ಪಶ್ಚಿಮ ಬಂಗಾಳದ ವಿವಿಧ ಶಾಲೆಗಳಲ್ಲಿ ಗ್ರೂಪ್-ಸಿ ಸಿಬ್ಬಂದಿ ಹುದ್ದೆಗಳಿಗೆ ಅನರ್ಹ ಮತ್ತು ಪಟ್ಟಿ ಮಾಡದ ಅಭ್ಯರ್ಥಿಗಳಿಗೆ ಅನಗತ್ಯ ಲಾಭವನ್ನು ನೀಡಿದ್ದಾರೆ ಎಂದು ಇವರ ಮೇಲೆ ಆರೋಪವಿದೆ.
ಪಾರ್ಥ ಚಟರ್ಜಿ ಅವರ ಸಿಬಿಐ ಕಸ್ಟಡಿ ಅವಧಿ ಸೆ.21ರವರೆಗೆ ವಿಸ್ತರಣೆ ಅಲಿಪೋರ್ ನ್ಯಾಯಾಲಯವು ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿಯ ಬಂಧನವನ್ನು ಸೆಪ್ಟೆಂಬರ್ 21 ರವರೆಗೆ ತನಿಖಾ ಸಂಸ್ಥೆಗೆ ನೀಡಿದೆ. ಮಾಜಿ ಸಚಿವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಕಸ್ಟಡಿಗೆ ಕೋರಿ ಸಿಬಿಐ ನ್ಯಾಯಾಲಯದ ಮೊರೆ ಹೋಗಿತ್ತು. ಬೇಡಿಕೆಯ ನಂತರ, ನ್ಯಾಯಾಲಯವು ಚಟರ್ಜಿಯನ್ನು ನ್ಯಾಯಾಲಯದ ಮುಂದೆ ಭೌತಿಕವಾಗಿ ಹಾಜರುಪಡಿಸುವಂತೆ ಜೈಲು ಪ್ರಾಧಿಕಾರಕ್ಕೆ ಆದೇಶಿಸಿತು. ಈ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23 ರಂದು ಬಂಧಿಸಿದ್ದು, ಕೊಲ್ಕತ್ತಾದ ಫ್ಲಾಟ್ ನಿಂದ ಚಿನ್ನಾಭರಣ, ಅಪಾರ ನಗದು ಮತ್ತು ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದೆ.
ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವರನ್ನು ಶುಕ್ರವಾರ ಕೋಲ್ಕತ್ತಾದ ಅಲಿಪುರ ಜಿಲ್ಲಾ ನ್ಯಾಯಾಲಯದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
Published On - 5:30 pm, Fri, 16 September 22