ಪ್ರೀತಿಸಿದ ಹುಡುಗಿಯ ಜತೆಗೆ ಜಗಳ, ಮನನೊಂದು ಶಾಸಕರ ಫ್ಲಾಟ್​​​​ನಿಂದ​ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

|

Updated on: Sep 25, 2023 | 1:35 PM

Uttar Pradesh: ಉತ್ತರ ಪ್ರದೇಶ ಲಕ್ನೋದಲ್ಲಿ 24 ವರ್ಷದ ಯುವಕ ಬಿಜೆಪಿ ಶಾಸಕರೊಬ್ಬರ ಅಧಿಕೃತ ನಿವಾಸದ ಮೇಲಿನಿಂದ ಜಿಗಿದು , ಇಂದು (ಸೆ.25) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್​​ ಅಧಿಕಾರಿಗಳು ಹೇಳಿದ್ದಾರೆ. ಈ ಯುವಕನನ್ನು ಶ್ರೇಷ್ಠಾ ತಿವಾರಿ ಎಂದು ಗುರುತಿಸಲಾಗಿದ್ದ, ಲಕ್ನೋದ ಬಕ್ಷಿ ಕಾ ತಲಾಬ್‌ನ ಬಿಜೆಪಿ ಶಾಸಕ ಯೋಗೇಶ್ ಶುಕ್ಲಾ ಅವರ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ

ಪ್ರೀತಿಸಿದ ಹುಡುಗಿಯ ಜತೆಗೆ ಜಗಳ, ಮನನೊಂದು ಶಾಸಕರ ಫ್ಲಾಟ್​​​​ನಿಂದ​ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ
ಸಾಂದರ್ಭಿಕ ಚಿತ್ರ
Follow us on

ಲಕ್ನೋ, ಸೆ.25: ಉತ್ತರ ಪ್ರದೇಶ (Uttar Pradesh) ಲಕ್ನೋದಲ್ಲಿ 24 ವರ್ಷದ ಯುವಕ ಬಿಜೆಪಿ ಶಾಸಕರೊಬ್ಬರ ಅಧಿಕೃತ ನಿವಾಸದ ಮೇಲಿನಿಂದ ಜಿಗಿದು , ಇಂದು (ಸೆ.25) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್​​ ಅಧಿಕಾರಿಗಳು ಹೇಳಿದ್ದಾರೆ. ಈ ಯುವಕನನ್ನು ಶ್ರೇಷ್ಠಾ ತಿವಾರಿ ಎಂದು ಗುರುತಿಸಲಾಗಿದ್ದ, ಲಕ್ನೋದ ಬಕ್ಷಿ ಕಾ ತಲಾಬ್‌ನ ಬಿಜೆಪಿ ಶಾಸಕ ಯೋಗೇಶ್ ಶುಕ್ಲಾ ಅವರ ಮಾಧ್ಯಮ ಸಲಹೆಗಾರರಾಗಿ ಶ್ರೇಷ್ಠಾ ತಿವಾರಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೇಷ್ಠಾ ತಿವಾರಿ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದು, ಆಕೆಯ ಜತೆಗೆ ಜಗಳವಾಡಿ ಮನನೊಂದು ಆತ್ಮಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಈ ಯುವಕ ಆತ್ಮಹತ್ಯೆ ಮಾಡಿಕೊಳ್ಳವ ಮುನ್ನ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಯುವತಿಗೆ ವಿಡಿಯೋ ಕಾಲ್​ ಮಾಡಿದ್ದಾನೆ. ಮೂಲಗಳ ಪ್ರಕಾರ ಯುವತಿಯು ಈ ವಿಡಿಯೋ ಕಾಲ್​​​ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಂಡಿದ್ದಾಳೆ ಎಂದು ಹೇಳಲಾಗಿದೆ.

ಇಬ್ಬರು ನಾಲ್ಕು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದು, ಇಂದು ಬೆಳಿಗ್ಗೆ ಯುವತಿಯ ಜತೆಗೆ ಶ್ರೇಷ್ಠಾ ತಿವಾರಿ ಜಗಳವಾಡಿದ್ದಾನೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ವಿಷಯ ತಿಳಿಯುತ್ತಿದ್ದಂತೆ ಯುವತಿ ಶ್ರೇಷ್ಠಾ ತಿವಾರಿ ಆತ್ಮಹತ್ಯೆ ಮಾಡಿಕೊಂಡು ಸ್ಥಳಕ್ಕೆ ಧಾವಿಸಿದ್ದಾಳೆ. ಪೊಲೀಸರ ವರದಿ ಪ್ರಕಾರ ಇಲ್ಲಿಯವರೆಗೆ ಯುವಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು? ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಜತೆಗೆ ಇದಕ್ಕೆ ಯಾವುದೇ ಪುರಾವೆಗಳು ಇಲ್ಲ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಶ್ರೇಷ್ಠಾ ತಿವಾರಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಸ್ನೇಹಿತನಿಗೆ ಫೋನ್ ಮಾಡಿ ಹೇಳಲಾಗಿದೆ. ಜತೆಗೆ ಯುವತಿಯೇ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಇದೀಗ ಪೊಲೀಸರು ಹೆಚ್ಚಿನ ತನಿಖೆಗಾಗಿ ಆಕೆಯ ಫೋನ್​​ನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಸ್​ ಪಲ್ಟಿ, 5 ಮಂದಿ ಸಾವು, 15 ಜನರಿಗೆ ಗಾಯ

ಈ ಘಟನೆ ನಡೆಯುವಾಗ ಫ್ಲಾಟ್​​​​ನಲ್ಲಿ ಶಾಸಕ ಯೋಗೇಶ್ ಶುಕ್ಲಾ ಒಬ್ಬರೇ ಇದ್ದರು ಎಂದು ಪೊಲೀಸರು ಹೇಳಿದ್ದಾರೆ. ಇನ್ನು ಶ್ರೇಷ್ಠಾ ತಿವಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಾಗ, ಆತನ ಪ್ರೇಯಸಿ ಪೊಲೀಸರಿಗೆ ಫೋನ್ ಎಲ್ಲವನ್ನು ವಿವರಿಸಿದ್ದಾಳೆ. ತಕ್ಷಣ ಪೊಲೀಸರು ಮತ್ತು ಆಕೆ ಸ್ಥಳಕ್ಕೆ ಧಾವಿಸಿದಾಗ ಶಾಸಕ ಫ್ಲಾಟ್​​​​​ನ ಬಾಗಿಲು ಹಾಕಲಾಗಿತ್ತು. ಪೊಲೀಸರು ಬಾಗಿಲು ಹೊಡೆದು ಒಳಗೆ ನೋಡಿದಾಗ ಶ್ರೇಷ್ಠಾ ತಿವಾರಿ ಶವವಾಗಿ ಪತ್ತೆಯಾಗಿದ್ದಾನೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ