AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ಚಂದ್ರಯಾನ ಮಹಾಕ್ವಿಜ್; 300ಕ್ಕೂ ಹೆಚ್ಚು ಮಂದಿಗೆ ಬಹುಮಾನ; ಮೊದಲು ಬಂದವರಿಗೆ ಲಕ್ಷ ರೂ; ನೀವೂ ಪಾಲ್ಗೊಳ್ಳುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Chandrayaan-3 MahaQuiz: ಭಾರತದ ಮೂರನೇ ಚಂದ್ರಯಾನದ ಯೋಜನೆ ಬಗ್ಗೆ ನಿಮಗೆ ಎಷ್ಟು ಗೊತ್ತು? ನಿಮ್ಮ ಜ್ಞಾನಕ್ಕೆ ಒರೆ ಹಚ್ಚುವ ಅವಕಾಶ ಇದೆ. ಇಸ್ರೋ ನಡೆಸುವ ಕ್ವಿಜ್​ನಲ್ಲಿ ಪಾಲ್ಗೊಂಡು ಬಹುಮಾನ ಕೂಡ ಪಡೆಯಬಹುದು. ಇಸ್ರೋ ಮತ್ತು ಮೈ ಗವ್ ವೆಬ್​ಸೈಟ್ ಸಹಯೋಗದಲ್ಲಿ ಚಂದ್ರಯಾನ ರಸಪ್ರಶ್ನೆ ನಡೆಸಲಾಗುತ್ತಿದೆ. 300ಕ್ಕೂ ಹೆಚ್ಚು ಮಂದಿ ಬಹುಮಾನಗಳನ್ನು ಗೆಲ್ಲಬಹುದಾಗಿದೆ. ಯಾರು ಈ ಕ್ವಿಜ್​ನಲ್ಲಿ ಪಾಲ್ಗೊಳ್ಳಬಹುದು, ಎಷ್ಟೆಷ್ಟು ಮೊತ್ತದ ಬಹುಮಾನಗಳ ಆಫರ್ ಇದೆ ಎನ್ನುವ ವಿವರ ಈ ಸುದ್ದಿಯಲ್ಲಿದೆ.

ಇಸ್ರೋ ಚಂದ್ರಯಾನ ಮಹಾಕ್ವಿಜ್; 300ಕ್ಕೂ ಹೆಚ್ಚು ಮಂದಿಗೆ ಬಹುಮಾನ; ಮೊದಲು ಬಂದವರಿಗೆ ಲಕ್ಷ ರೂ; ನೀವೂ ಪಾಲ್ಗೊಳ್ಳುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಚಂದ್ರಯಾನ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 25, 2023 | 12:53 PM

ಬೆಂಗಳೂರು, ಸೆಪ್ಟೆಂಬರ್ 25: ಇಸ್ರೋ ಕಳುಹಿಸಿದ ಚಂದ್ರಯಾನ-3 ನೌಕೆ ಆಗಸ್ಟ್ 23ರಂದು ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಇಳಿದು ಭಾರತಕ್ಕೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಈ ದೃಶ್ಯವನ್ನು ಕೋಟ್ಯಂತರ ಮಂದಿ ನೋಡಿ ಕಣ್ತುಂಬಿಸಿಕೊಂಡಿರುವುದುಂಟು. ಈ ಸಾಧನೆ ಎಲ್ಲಾ ಭಾರತೀಯರು ಗರ್ವದಿಂದ ಹೇಳಿಕೊಳ್ಳುವಂಥದ್ದು. ಈ ಚಂದ್ರಯಾನದ ಯಶಸ್ಸಿನ ಹಿಂದೆ ಯಾರಿದ್ದಾರೆ? ಈ ಯೋಜನೆಯ ವಿಶೇಷತೆಗಳೇನು ಎಂಬುದೆಲ್ಲಾ ಸಾಕಷ್ಟು ಮಂದಿಗೆ ಕುತೂಹಲ ತರಿಸಿದ ವಿಷಯ. ಈ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮತ್ತು ಆಸಕ್ತಿ ಕೆರಳಿಸಲು ಹಾಗೂ ಜ್ಞಾನ ಪರೀಕ್ಷೆ ಮಾಡಲು ಇಸ್ರೋ ಕ್ವಿಜ್ ಕಾರ್ಯಕ್ರಮ (Chandrayaan-3 MahaQuiz) ನಡೆಸುತ್ತಿದೆ. ಸೆಪ್ಟೆಂಬರ್ 1ರಿಂದಲೇ ಇಸ್ರೋ ಈ ಕ್ವಿಜ್ ನಡೆಸುತ್ತಿದ್ದು, ಇಲ್ಲಿಯವರೆಗೆ 16 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿರುವುದು ವಿಶೇಷ.

ಸರ್ಕಾರದ ಮೈ ಗವ್ ಡಾಟ್ ಇನ್ ವೆಬ್​ಸೈಟ್​ನಲ್ಲಿ (www.mygov.in) ಈ ಕ್ವಿಜ್​ಗಾಗಿ ಮಿನಿ ಪೋರ್ಟಲ್ (isroquiz.mygov.in) ರಚಿಸಲಾಗಿದೆ. ಇಸ್ರೋ ಈ ಪೋರ್ಟಲ್ ಅನ್ನು ನಿರ್ವಹಿಸುತ್ತಿದ್ದು, ಚಂದ್ರಯಾನದ ರಸಪ್ರಶ್ನೆಗಳನ್ನು ರೂಪಿಸಿದೆ. ಈ ಕ್ವಿಜ್​ನಲ್ಲಿ ಯಾವುದಾದರೂ 10 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಒಟ್ಟು 300 ಸೆಕೆಂಡುಗಳ ಕಾಲಾವಕಾಶ ಇರುತ್ತದೆ. 300ಕ್ಕೂ ಹೆಚ್ಚು ಮಂದಿಗೆ ಬಹುಮಾನ ನೀಡಲಾಗುತ್ತದೆ.

ಇದನ್ನೂ ಓದಿ: ರಾಜ್ಯಸಭೆ ಗ್ಯಾಲರಿಯಲ್ಲಿ ಸಾರ್ವಜನಿಕರಿಂದ ಮೋದಿ ಪರ ಘೋಷಣೆ; ಕ್ರಮಕ್ಕೆ ಒತ್ತಾಯಿಸಿ ವಿಪಕ್ಷ ಸದಸ್ಯರಿಂದ ಪತ್ರ

ಮೊದಲು ಬಂದವರಿಗೆ 1 ಲಕ್ಷ ರೂ ಬಹುಮಾನ; ಇಲ್ಲಿದೆ ವಿವರ

ಮೊದಲ ಬಹುಮಾನ: 1 ಲಕ್ಷ ರೂ

ಎರಡನೇ ಬಹುಮಾನ: 75,000 ರೂ

ಮೂರನೇ ಬಹುಮಾನ: 50,000 ರೂ

100 ಮಂದಿಗೆ ಸಮಾಧಾನಕರ ಬಹುಮಾನ: 2,000 ರೂ

200 ಮಂದಿಗೆ ಸಮಾಧಾನಕರ ಬಹುಮಾನ: 1,000 ರೂ

ಇದನ್ನೂ ಓದಿ: ಭಾರತ ಯಶಸ್ವಿಯಾದರೆ ಬೇರೆಯವರಿಗೂ ಯಶಸ್ಸು; ಭಾರತದ ಬಗ್ಗೆ ಜಾಗತಿಕ ದಕ್ಷಿಣ ದೇಶಗಳಿಂದ ಗುಣಗಾನ

ಕ್ವಿಜ್​ನಲ್ಲಿ ಪಾಲ್ಗೊಳ್ಳುವುದು ಹೇಗೆ?

ಭಾರತದ ಯಾವುದೇ ನಾಗರಿಕರು ಈ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಬಹುದು. ಮೈ ಗವ್ ಡಾಟ್ ಇನ್ ವೆಬ್​ಸೈಟ್​ನ ಈ ಲಿಂಕ್​ಗೆ ಭೇಟಿ ನೀಡಿ: isroquiz.mygov.in

ಇಲ್ಲಿ ಲಾಗಿನ್ ಆಗಬೇಕು. ನಿಮ್ಮ ಎಲ್ಲಾ ವಿವರವನ್ನು ಭರ್ತಿ ಮಾಡಿ ಪ್ರೊಫೈಲ್ ಪೂರ್ಣಗೊಳಿಸಬೇಕು.

ಮೊಬೈಲ್ ನಂಬರ್ ಮತ್ತು ಇಮೇಲ್ ಕೇಳಲಾಗುತ್ತದೆ. ಒಬ್ಬ ವ್ಯಕ್ತಿ ಒಂದು ಪ್ರೊಫೈಲ್ ಮಾತ್ರ ರಚಿಸಲು ಸಾಧ್ಯ.

ಒಟಿಪಿ ಎಲ್ಲವನ್ನೂ ಕೊಟ್ಟು ಸಬ್ಮಿಟ್ ಬಟನ್ ಅದುಮಿದ ಕೂಡಲೇ ಕ್ವಿಜ್ ಶುರುವಾಗುತ್ತದೆ.

300 ಸೆಕೆಂಡ್ ಕಾಲಾವಕಾಶದಲ್ಲಿ 10 ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ