₹100 ಕೋಟಿ ನೀಡಿದರೆ ರಾಜ್ಯಪಾಲರ ಹುದ್ದೆ, ರಾಜ್ಯಸಭಾ ಸದಸ್ಯತ್ವದ ಭರವಸೆ; ವಂಚನೆಯ ಜಾಲ ಭೇದಿಸಿದ ಸಿಬಿಐ

| Updated By: ರಶ್ಮಿ ಕಲ್ಲಕಟ್ಟ

Updated on: Jul 25, 2022 | 6:34 PM

ಹಣ ವ್ಯವಹಾರ ಮಾಡುವ ಮುನ್ನ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದ್ದು, ₹100 ಕೋಟಿ ನೀಡಿದರೆ ರಾಜ್ಯಪಾಲರ ಸೀಟು ನೀಡುವುದಾಗಿಯೂ ಆರೋಪಿ ಭರವಸೆ ನೀಡಿದ್ದ ಎನ್ನಲಾಗಿದೆ.

₹100 ಕೋಟಿ ನೀಡಿದರೆ ರಾಜ್ಯಪಾಲರ ಹುದ್ದೆ, ರಾಜ್ಯಸಭಾ ಸದಸ್ಯತ್ವದ ಭರವಸೆ; ವಂಚನೆಯ ಜಾಲ ಭೇದಿಸಿದ ಸಿಬಿಐ
ಸಿಬಿಐ
Follow us on

ದೆಹಲಿ: ₹100 ಕೋಟಿ ನೀಡಿದರೆ ರಾಜ್ಯಸಭಾ ಸೀಟು (Rajya Sabha) ನೀಡುವುದಾಗಿ ಭರವಸೆ ನೀಡಿ ವಂಚಿಸಲು ಯತ್ನಿಸುತ್ತಿದ್ದ ಜಾಲವೊಂದನ್ನು ಸಿಬಿಐ (CBI) ಭೇದಿಸಿದೆ. ಹಣ ವ್ಯವಹಾರ ಮಾಡುವ ಮುನ್ನ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆ ಬಂಧಿಸಿದ್ದು, ₹100 ಕೋಟಿ ನೀಡಿದರೆ ರಾಜ್ಯಪಾಲರ ಸೀಟು ನೀಡುವುದಾಗಿಯೂ ಆರೋಪಿ ಭರವಸೆ ನೀಡಿದ್ದ ಎನ್ನಲಾಗಿದೆ. ಕಳೆದ ಕೆಲವು ವಾರಗಳಿಂದ ಸಿಬಿಐ ಫೋನ್​​​ಗಳನ್ನು ಆಲಿಸಿ ಆರೋಪಿಯನ್ನು ಸೆರೆ ಹಿಡಿದಿದೆ ಎಂದು ಈ ಬಗ್ಗೆ ತಿಳಿದಿರುವ ವ್ಯಕ್ತಿಗಳು ಹೇಳಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಸಿಬಿಐ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದೆ. ಇದರಲ್ಲಿ ಕೆಲವರ ಗುರುತು ಪತ್ತೆಯಾಗಿದೆ. ಮಹಾರಾಷ್ಟ್ರದ ಕರ್ಮಲಕರ್ ಪ್ರೇಮ್ ಕುಮಾರ್ ಬಂದಗರ್, ಕರ್ನಾಟಕದ ರವೀಂದ್ರ ವಿಠಲ ನಾಯಕ್, ದೆಹಲಿಯ ಮಹೇಂದ್ರ ಪಾಲ್ ಅರೋರಾ ಮತ್ತು ಅಭಿಷೇಕ್ ಬೂರಾ ಎಂಬವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ರಾಜ್ಯಸಭಾ ಸದಸ್ಯತ್ವ, ರಾಜ್ಯಪಾಲರ ಹುದ್ದೆ ಅಥವಾ ಸಚಿವಾಲಯ, ಇಲಾಖೆ ಅಥವಾ ಸರ್ಕಾರಿ ಸಂಸ್ಥೆಗಳ ಅಧ್ಯಕ್ಷರ ಹುದ್ದೆ ನೀಡುವುದಾಗಿ ಈ ಗುಂಪು ಭರವಸೆ ನೀಡಿ ವಂಚನೆಗೆ ಯತ್ನ ನಡೆಸಿತ್ತು ಎಂದು  ಮೂಲಗಳು ಹೇಳಿವೆ.

ಅಭಿಷೇಕ್ ಬೂರಾ ಮತ್ತು  ಕರ್ಮಲಾಕರ್ ಪ್ರೇಮಕುಮಾರ್ ಉನ್ನತ ಸರ್ಕಾರಿ ಅಧಿಕಾರಿಗಳ ಜತೆ ಸಂಪರ್ಕ ಸಾಧಿಸಿ, ಈ ನೇಮಕಾತಿ ವಂಚನೆ ಪ್ರಕ್ರಿಯೆಯನಲ್ಲಿ ಪ್ರಧಾನ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.

ಸಿಬಿಐ ಎಫ್ಐಆರ್ ನಲ್ಲಿ ಈ ವಂಚನೆ ಜಾಲ 100 ಕೋಟಿ ರೂಗೆ ರಾಜ್ಯ,ಸಭಾ  ಸೀಟು ನೀಡುವುದಾಗಿ ಭರವಸೆ ನೀಡಿ ಹೇಗೆ ವಂಚಿಸುತ್ತಿತ್ತು ಎಂಬುದನ್ನು ಸ್ಪಷ್ಟವಾಗಿ ಹೇಳಿದೆ.

ಬಂದಗರ್  ಎಂಬಾತ ಹಿರಿಯ ಸಿಬಿಐ ಅಧಿಕಾರಿಯ ಸೋಗಿನಲ್ಲಿರುತ್ತಿದ್ದ. ಯಾವುದೇ ಕೆಲಸ ಬೇಕಾದರೂ ತನ್ನಿ ಅದಕ್ಕಾಗಿ ದೊಡ್ಡ ಮೊತ್ತ ಪಾವತಿ ಮಾಡುವುದಾಗಿ ಮೊಹಮ್ಮದ್ ಐಜಾಸ್ ಖಾನ್ ಸೇರಿದಂತೆ ಇತರ ಆರೋಪಿಗಳಲ್ಲಿ ಹೇಳಿದ್ದ. ಕರ್ಮಲಾಕರ್ ಪ್ರೇಮಕುಮಾರ್ ಬಂದಗರ್, ಮಹೇಂದ್ರ ಪಾಲ್ ಅರೋಪಾ ಮತ್ತಿ ಮೊಹಮ್ಮದ್ ಐಜಾಜ್ ಖಾನ್ ಮತ್ತು ರವೀಂದ್ರ ವಿಠಲ ನಾಯಕ್ ಪದೇ ಪದೇ ಹಿರಿಯ ರಾಜಕಾರಣಿ, ರಾಜಕೀಯ ನಾಯಕರ ಹೆಸರುಗಳನ್ನು  ಕಕ್ಷಿದಾರರ ಮುಂದೆ ಹೇಳುತ್ತಿದ್ದರು. ಕೆಲವು ಕಕ್ಷಿದಾರರು ಇವರನ್ನು ನೇರವಾಗಿ ಸಂಪರ್ಕಿಸಿದರೆ ಇನ್ನು ಕೆಲವರು ಮಧ್ಯವರ್ತಿ ಅಭಿಷೇಕ್ ಬೂರಾ ಮೂಲಕ ಸಂಪರ್ಕಿಸುತ್ತಿದ್ದರು ಎಂದು ಸಿಬಿಐ ಎಫ್ಐಆರ್ ನಲ್ಲಿ ಹೇಳಿದೆ.

ಕರ್ಮಲಾಕರ್ ಹಿರಿಯ ಸಿಬಿಐ ಅಧಿಕಾರಿಯಂತೆ ನಟಿಸಿ ತನ್ನ ಕಕ್ಷಿದಾರರಿಗೆ ಸಹಾಯ ಮಾಡುವುದಕ್ಕಾಗಿ ಪೊಲೀಸ್ ಠಾಣೆಯಲ್ಲಿ ನಿಯೋಜಿಸಿರುವ ಅಧಿಕಾರಿಗಳನ್ನು ಹೆದರಿಸುತ್ತಿದ್ದ ಎಂದು ಎಫ್ಐಆರ್ ನಲ್ಲಿ ಹೇಳಿದೆ.

Published On - 5:35 pm, Mon, 25 July 22