ಚಂಡೀಗಢ: ಶುಕ್ರವಾರ ಚಂಡೀಗಢದ ಕಾರ್ಮೆಲ್ ಕೋವೆಂಟ್ ಶಾಲೆಯಲ್ಲಿ ಮರ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ ಶಾಲೆಯು ಸೆಕ್ಟರ್ 9 ಪ್ರದೇಶದಲ್ಲಿದೆ. ಊಟದ ವೇಳೆ ಈ ಅವಘಡ ಸಂಭವಿಸಿದೆ. ಈ ದೊಡ್ಡ ಮರದ ಬಳಿ ಹಲವು ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ಮರ ಮಕ್ಕಳ ಮೇಲೆ ಬಿದ್ದಿದೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯಿಂದ ಒಂದು ಮಗು ಸಾವನ್ನಪ್ಪಿದೆ. 19 ಮಕ್ಕಳು ಮತ್ತು 1 ಸಿಬ್ಬಂದಿ ಸೇರಿದಂತೆ 20 ಮಂದಿಗೆ ಗಾಯವಾಗಿರುವ ವರದಿಯಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ನಾವು ತನಿಖೆಗೆ ಆದೇಶಿಸಿದ್ದೇವೆ ಎಂದು ಗೃಹ ಕಾರ್ಯದರ್ಶಿ ನಿತಿನ್ ಯಾದವ್ NDTV ಗೆ ತಿಳಿಸಿದ್ದಾರೆ.
A very heart-wrenching incident of a tree falling at Carmel Covent School Chandigarh. My condolences to the bereaved families and I pray for a speedy recovery of the injured. pic.twitter.com/kXJMu6idTY
— Kirron Kher (@KirronKherBJP) July 8, 2022
ಚಂಡೀಗಢದ ಸಂಸತ್ ಸದಸ್ಯದರಾದ ನಟ ಕಿರಣ್ ಖೇರ್ ಘಟನೆಯ ಬಗ್ಗೆ ಇಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದರು ಮತ್ತು ಸಾವನ್ನಪ್ಪಿದ ವಿದ್ಯಾರ್ಥಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
Published On - 4:34 pm, Fri, 8 July 22