ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿ ದೊಡ್ಡ ತಿಮಿಂಗಲೊಂದು ಸಮುದ್ರದೊಳಗಿಂದ ತೇಲಿಕೊಂಡು ಬಂದು ಬೀಚ್‌ನಲ್ಲಿ ಬಿದ್ದಿದೆ.
ಬೃಹತ್ ಬಂಡೆಯಾಕಾರದ ಈ ತಿಮಿಂಗಲು ರಾಮನಾಥಪುರಂ ಜಿಲ್ಲೆಯ ವಳಿನೊಕ್ಕಮ್ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಇದನ್ನು ನೋಡಲು ಈಗ ಜನರು ಮುಗಿಬಿದ್ದಿದ್ದಾರೆ.
ಆದ್ರೆ ಈ ಬಗ್ಗೆ ಮಾತನಾಡಿರುವ ತಮಿಳುನಾಡು ಅರಣ್ಯಾಧಿಕಾರಿ ಈ ಭಾಗದಲ್ಲಿ ಸಾಮಾನ್ಯವಾಗಿ ವೇಲ್ ಶಾರ್ಕ್‌ಗಳು ಅಂದರೆ ತಿಮಿಂಗಲು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಕಳೆದ ಜೂನ್ ತಿಂಗಳಲ್ಲಿ ಇಂಥದ್ದೇ 18 ಅಡಿ ಉದ್ದದ ತಿಮಿಂಗಲು ಸಮುದ್ರೊದಳಗಿಂದ ಬಂದು ಬಿದ್ದಿತ್ತು ಎಂದಿದ್ದಾರೆ.
ಅಷ್ಟೇ ಅಲ್ಲ 1972ರ ವನ್ಯಜೀನಿ ಕಾಯ್ದೆ ಪ್ರಕಾರ ಇಂಥ ತಿಮಿಂಗಲು ಅಥವಾ ಶಾರ್ಕ್‌ಗಳನ್ನು ಹಿಡಿಯುವುದಾಗಲಿ ಅಥವಾ ಕೊಲ್ಲುವುದಾಗಲಿ ಅಪರಾಧ ಎಂದಿದ್ದಾರೆ. ಸಧ್ಯ ಈಗ ಬೀಚ್‌ನಲ್ಲಿ ಬಿದ್ದಿರುವ ತಿಮಿಂಗಲಿನ ಪೋಸ್ಟ್‌ಮಾರ್ಟೆಮ್ ಮಾಡೋವರೆಗೂ ಅದರ ಸಾವಿನ ಕಾರಣ ತಿಳಿಯುವುದಿಲ್ಲ ಎಂದಿದ್ದಾರೆ.
Published On - 4:25 pm, Sun, 30 August 20