ಗಲ್ವಾನ್​ ಘರ್ಷಣೆ ಬಳಿಕ.. ಚೀನಾ ಬುಡಕ್ಕೆ ಬೆಂಕಿ ಇಡಲು ಮುಂದಾಗಿತ್ತು ಭಾರತೀಯ ನೌಕಾಪಡೆ

ದೆಹಲಿ: ಗಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ದೇಶಕ್ಕಾಗಿ ಹೋರಾಡಿ ಮಣಿದ ವೀರ ಯೋಧರ ಬಲಿದಾನವನ್ನು ಇಡೀ ದೇಶ ಎಂದೆಂದಿಗೂ ಮರೆಯೋದಿಲ್ಲ. ಗಡಿಯಲ್ಲಿ ತನ್ನ ವಿಸ್ತಾರವಾದದ ನೀತಿಯನ್ನ ಪ್ರದರ್ಶಿಸಲು ಮುಂದಾದ ಚೀನಾಕ್ಕೆ ಸೆಡ್ಡು ಹೊಡೆದ ಭಾರತೀಯ ಸೇನೆಯ ಶೌರ್ಯಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ, ಭಾರತೀಯ ನೌಕಾಪಡೆ ನಡೆಸಿರುವ ರೋಚಕ ಸಂಗತಿ ಸಹ ಬೆಳಕಿಗೆ ಬಂದಿದೆ. ಹೌದು, ಜೂನ್​ 15ರಂದು ಲಡಾಖ್​ನ ಭೂಭಾಗದಲ್ಲಿರುವ ಗಲ್ವಾನ್​ ಕಣಿವೆಯಲ್ಲಿ ಘರ್ಷಣೆ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ನೌಕಾಪಡೆ ತನ್ನ ಅತ್ಯಾಧುನಿಕ ಯುದ್ಧನೌಕೆಯೊಂದನ್ನು […]

ಗಲ್ವಾನ್​ ಘರ್ಷಣೆ ಬಳಿಕ.. ಚೀನಾ ಬುಡಕ್ಕೆ ಬೆಂಕಿ ಇಡಲು ಮುಂದಾಗಿತ್ತು ಭಾರತೀಯ ನೌಕಾಪಡೆ
Indian Navy Recruitment 2021
Follow us
KUSHAL V
|

Updated on: Aug 30, 2020 | 6:52 PM

ದೆಹಲಿ: ಗಲ್ವಾನ್​ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ದೇಶಕ್ಕಾಗಿ ಹೋರಾಡಿ ಮಣಿದ ವೀರ ಯೋಧರ ಬಲಿದಾನವನ್ನು ಇಡೀ ದೇಶ ಎಂದೆಂದಿಗೂ ಮರೆಯೋದಿಲ್ಲ. ಗಡಿಯಲ್ಲಿ ತನ್ನ ವಿಸ್ತಾರವಾದದ ನೀತಿಯನ್ನ ಪ್ರದರ್ಶಿಸಲು ಮುಂದಾದ ಚೀನಾಕ್ಕೆ ಸೆಡ್ಡು ಹೊಡೆದ ಭಾರತೀಯ ಸೇನೆಯ ಶೌರ್ಯಕ್ಕೆ ದೇಶದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ, ಭಾರತೀಯ ನೌಕಾಪಡೆ ನಡೆಸಿರುವ ರೋಚಕ ಸಂಗತಿ ಸಹ ಬೆಳಕಿಗೆ ಬಂದಿದೆ.

ಹೌದು, ಜೂನ್​ 15ರಂದು ಲಡಾಖ್​ನ ಭೂಭಾಗದಲ್ಲಿರುವ ಗಲ್ವಾನ್​ ಕಣಿವೆಯಲ್ಲಿ ಘರ್ಷಣೆ ನಡೆದ ಕೆಲವೇ ಗಂಟೆಗಳಲ್ಲಿ ಭಾರತೀಯ ನೌಕಾಪಡೆ ತನ್ನ ಅತ್ಯಾಧುನಿಕ ಯುದ್ಧನೌಕೆಯೊಂದನ್ನು ಚೀನಾದ ದಕ್ಷಿಣ ಭಾಗಕ್ಕೆ ಅಂಟಿಕೊಂಡಿರುವ ದಕ್ಷಿಣ ಚೀನಾ ಸಮುದ್ರಕ್ಕೆ(ಸೌತ್ ಚೈನಾ ಸೀ) ರವಾನಿಸಿತ್ತು ಎಂದು ಈಗ ಬೆಳಕಿಗೆ ಬಂದಿದೆ. ನಿಯೋಜನೆಗೊಂಡ ಯುದ್ಧನೌಕೆ ಸಮುದ್ರದಲ್ಲಿದ್ದ ಅಮೆರಿಕದ ನೌಕಾಪಡೆಯ ಹಡಗುಗಳೊಂದಿಗೆ ಸಂಪರ್ಕದಲ್ಲಿದ್ದು ಅವುಗಳೊಂದಿಗೆ ಸಮುದ್ರದಲ್ಲಿ ಗಸ್ತು ಸಹ ಹೊಡೆದಿತ್ತು ಎಂದು ತಿಳಿದುಬಂದಿದೆ.

ದಕ್ಷಿಣ ಚೀನಾ ಸಮುದ್ರ ತನ್ನ ದೇಶದ ಅವಿಭಾಜ್ಯ ಅಂಗ ಎಂದು ಅದರ ಮೇಲೆ ಹಕ್ಕು ಸ್ಥಾಪಿಸಲು ಮುಂದಾಗಿರುವ ಚೀನಾಕ್ಕೆ ನೌಕಾಪಡೆಯ ಈ ನಡೆ ತೀರಾ ಕಸಿವಿಸಿ ತಂದೊಡ್ಡಿತ್ತಂತೆ. ಈ ವಿಚಾರವನ್ನ ಉಭಯ ರಾಷ್ಟ್ರಗಳು ನಡೆಸಿದ ಮಾತುಕತೆಯ ವೇಳೆ ಸಹ ಪ್ರಸ್ತಾಪ ಮಾಡಿತ್ತಂತೆ.

ಅಷ್ಟೇ ಅಲ್ಲದೆ, ಭಾರತೀಯ ನೌಕಾಪಡೆಯ ಮತ್ತಷ್ಟು ಹಡಗುಗಳನ್ನು ಅಂಡಮಾನ್​ ಮತ್ತು ನಿಕೋಬಾರ್ ದ್ವೀಪದ ಬಳಿಯಿರುವ ಮಲಕ್ಕಾ ಜಲಸಂಧಿಯಲ್ಲೂ ಸಹ ನಿಯೋಜಿಸಿಲಾಗಿತ್ತು ಎಂದು ತಿಳಿದುಬಂದಿದೆ. ಈ ಮುಖಾಂತರ ನೌಕಾಪಡೆಯು ಹಿಂದೂ ಮಹಾಸಾಗರದಲ್ಲಿ ನಿಯೋಜಿಸಲಾಗಿರುವ ಚೀನಾದ ಯುದ್ಧನೌಕೆಗಳ ಮೇಲೆ ನಿಗಾ ವಹಿಸಲು ಮುಂದಾಗಿತ್ತಂತೆ. ಒಟ್ನಲ್ಲಿ, ಗಲ್ವಾನ್​ ಬಳಿಕ ಚೀನಾ ಮತ್ತೊಂದು ದುಸ್ಸಾಹಸಕ್ಕೆ ಕೈಹಾಕಿದ್ದರೆ ನಮ್ಮ ನೌಕಾಪಡೆ ಸರಿಯಾಗಿ ಮುಟ್ಟಿನೋಡಿಕೊಳ್ಳುವಂಥ ಉತ್ತರ ನೀಡಲು ಸಜ್ಜಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ