ಓಡಿಹೋದ ಪತ್ನಿ -ಅದೇ ಬೇಸರದಲ್ಲಿ ತಾಯಿಯ ಸಮಾಧಿ ಪಕ್ಕ ಗಂಡನ ಆತ್ಮಹತ್ಯೆ, ಹೆಂಡತಿ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮನವಿ!

|

Updated on: Jul 03, 2023 | 2:25 PM

Shadnagar RR District: ತನ್ನ ಸಾವಿನ ನಂತರವೂ ಪತ್ನಿಯ ಮೇಲೆ ಮಮಕಾರ ಹೊಂದಿದ್ದು, ಪ್ರಕರಣ ದಾಖಲಿಸದಂತೆ ಪೊಲೀಸರನ್ನು ಪತಿರಾಯ ಕೋರಿದ್ದಾನೆ. ತದನಂತರ ಅಳುತ್ತಾ.. ಕ್ರಿಮಿನಾಶಕ ಬೆರೆಸಿದ ಅನ್ನವನ್ನು ತಿಂದು ತಾಯಿಯ ಸಮಾಧಿ ಬಳಿ ಸಾವನ್ನಪ್ಪಿದ್ದಾನೆ.

ಓಡಿಹೋದ ಪತ್ನಿ -ಅದೇ ಬೇಸರದಲ್ಲಿ ತಾಯಿಯ ಸಮಾಧಿ ಪಕ್ಕ ಗಂಡನ ಆತ್ಮಹತ್ಯೆ, ಹೆಂಡತಿ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಮನವಿ!
ಓಡಿಹೋದ ಪತ್ನಿ -ತಾಯಿ ಸಮಾಧಿ ಪಕ್ಕ ಗಂಡನ ಆತ್ಮಹತ್ಯೆ
Follow us on

ಶಾದ್‌ನಗರದಲ್ಲಿ ಹೃದಯವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಪತ್ನಿ (wife) ಕಾಣೆಯಾಗಿದ್ದಕ್ಕೆ ಪತಿ (husband) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವನು ತನ್ನ ತಾಯಿಯ ಸಮಾಧಿಯ ಪಕ್ಕವೇ (mother graveyard) ಆತ್ಮಹತ್ಯೆ ಮಾಡಿಕೊಂಡು, ಮರಣ ಹೊಂದಿದ್ದಾನೆ. ಹೆಂಡತಿ ಹೇಳದೆ ಕೇಳದೆ ಎಲ್ಲೋ ಹೋಗಿಬಿಟ್ಟಳು. ಆ ನೋವು ತಾಳಲಾರದೆ ಆಕೆಯ ಗಂಡ ತನ್ನ ತಾಯಿಯ ಸಮಾಧಿಯ ಬಳಿ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾನೆ. ಹೈದರಾಬಾದ್​ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ (Ranga Reddy District) ಶಾದ್‌ನಗರದಲ್ಲಿ ಈ ಕಣ್ಣೀರ ಘಟನೆ ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುನ್ನ ಬಾಧಿತ ಗಂಡ, ಸೆಲ್ಫಿ ವಿಡಿಯೋ ರೂಪದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ವಿವರ ನೋಡುವುದಾದರೆ.. ಕೊಂಡಣ್ಣಗುಡಂ ರಾಜನ ಹೆಂಡತಿ. 3 ದಿನಗಳ ಹಿಂದೆ ಎಲ್ಲೋ ಹೋಗಿದ್ದಳು. ರಾಜನು ತನಗೆ ಗೊತ್ತಿರುವ ಸ್ಥಳಗಳನ್ನೆಲ್ಲಾ ಹುಡುಕಾಡಿದನು. ಸಂಬಂಧಿಕರು ಮತ್ತು ಸ್ನೇಹಿತರಿಗೂ ಕರೆ ಮಾಡಿ ವಿಚಾರಿಸಿದರು. ಆದರೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ನೋವಿನಿಂದ ಕಂಗಾಲಾಗಿದ್ದಾರೆ. ಇದರಿಂದ ತೀವ್ರ ನೊಂದ ರಾಜು ತನ್ನ ತಾಯಿಯ ಸಮಾಧಿ ಬಳಿ ಸೆಲ್ಫಿ ವಿಡಿಯೋ ತೆಗೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Also Read: ಸೋಜಗ- 15 ವರ್ಷದ ಹಿಂದೆಯೇ ತಮ್ಮ ಸಮಾಧಿ ತಾವೇ ಸಿದ್ದಮಾಡಿಟ್ಟುಕೊಂಡಿದ್ದ ವೃದ್ದ- ಆ ಸಮಾಧಿಯಲ್ಲೇ ಅಂತ್ಯಸಂಸ್ಕಾರ ಮಾಡಿದ ಕುಟುಂಬಸ್ಥರು

ಸೆಲ್ಫಿ ವಿಡಿಯೋದಲ್ಲಿ ನೀನೂ ಇಲ್ಲದೆ, ನಾನು ಇಲ್ಲ ಎನ್ನುವ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು ಗಂಡ ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. ತನ್ನ ಮೇಲೆ ಇಷ್ಟವಿಲ್ಲದಿದ್ದ ಕಾರಣಕ್ಕಾಗಿ, ಹೆಂಡತಿ ತನ್ನನ್ನು ಬಿಟ್ಟು ಹೋದಳು ಎಂದು ಆತ ತನ್ನ ಪತ್ನಿಯ ನಡುವಳಿಕೆ ಬಗ್ಗೆ ವ್ಯಾಖ್ಯಾನಿಸಿದ್ದಾನೆ. ಆಯ್ತು, ಅವಳು ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಗಂಡ ಹಾರೈಸಿದ್ದಾನೆ.

ಪತ್ನಿಯ ಮೇಲೆ ಮಮಕಾರ: ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಪತಿರಾಯ ಮನವಿ

ತನ್ನ ಸಾವಿನ ನಂತರವೂ ಪತ್ನಿಯ ಮೇಲೆ ಮಮಕಾರ ಹೊಂದಿದ್ದು, ಪ್ರಕರಣ ದಾಖಲಿಸದಂತೆ ಪೊಲೀಸರನ್ನು ಪತಿರಾಯ ಕೋರಿದ್ದಾನೆ. ತದನಂತರ ಅಳುತ್ತಾ.. ಕ್ರಿಮಿನಾಶಕ ಬೆರೆಸಿದ ಅನ್ನವನ್ನು ತಿಂದು ತಾಯಿಯ ಸಮಾಧಿ ಬಳಿ ಸಾವನ್ನಪ್ಪಿದ್ದಾನೆ. ಇವರ ವಿಡಿಯೋ ನೋಡಿದ ಜನ ಅಯ್ಯೋ ಪಾಪ ಅನ್ನಿಸ್ತಿದೆ. ಇಷ್ಟೊಂದು ಪ್ರೀತಿಸುವ ಗಂಡನನ್ನು ಬಿಟ್ಟು ಹೋದ ಹೆಂಡತಿಯನ್ನು ಬೈಯುತ್ತಿದ್ದಾರೆ. ಏನೇ ಆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ