Video: ಶಸ್ತ್ರಚಿಕಿತ್ಸೆ ವೇಳೆ ಪಿಯಾನೋ ಮೂಲಕ ಹನುಮಾನ್ ಚಾಲೀಸಾ ನುಡಿಸಿದ ಯುವಕ

|

Updated on: Nov 03, 2023 | 4:06 PM

ಯುವಕನೊಬ್ಬನಿಗೆ ಮೆದುಳಿನಲ್ಲಿ ಗೆಡ್ಡೆಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ, ಇದೀಗ ಆತನಿಗೆ AIIMS ಆಸ್ಪತ್ರೆಯ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಭೋಪಾಲ್‌ನ AIIMS ಆಸ್ಪತ್ರೆಯ ವೈದ್ಯರು 28 ವರ್ಷದ ಯುವಕನಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆ ತುಂಬಾ ವಿಚಿತ್ರವಾಗಿತ್ತು, ಶಸ್ತ್ರಚಿಕಿತ್ಸೆ ಮಾಡುತ್ತಿರವಾಗಲೇ ಪಿಯಾನೋ ಮೂಲಕ ಹನುಮಾನ್ ಚಾಲೀಸಾ​​ನ್ನು ಯುವಕ ನುಡಿಸಿದ್ದಾನೆ.

ಮನುಷ್ಯನಿಗೆ ಧೈರ್ಯ ಮತ್ತು ಯಾವುದೇ ವಿಷಯದಲ್ಲಿ ಛಲ ಎಂಬುದು ಇರಬೇಕು. ಇದಕ್ಕೆ ಸಾಕ್ಷಿ ಈ ಯುವಕ, ಈ ಯುವಕನಿಗೆ ಮೆದುಳಿನಲ್ಲಿ ಗೆಡ್ಡೆಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ, ಇದೀಗ ಆತನಿಗೆ AIIMS ಆಸ್ಪತ್ರೆಯ ವೈದ್ಯರು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಭೋಪಾಲ್‌ನ AIIMS ಆಸ್ಪತ್ರೆಯ ವೈದ್ಯರು 28 ವರ್ಷದ ಯುವಕನಿಗೆ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಶಸ್ತ್ರಚಿಕಿತ್ಸೆ ತುಂಬಾ ವಿಚಿತ್ರವಾಗಿತ್ತು, ಶಸ್ತ್ರಚಿಕಿತ್ಸೆ ಮಾಡುತ್ತಿರವಾಗಲೇ ಪಿಯಾನೋ ಮೂಲಕ ಹನುಮಾನ್ ಚಾಲೀಸಾ​​ನ್ನು ಯುವಕ ನುಡಿಸಿದ್ದಾನೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್​​​ ಆಗಿದೆ. ಇತನ ಧೈರ್ಯ ಮತ್ತು ಛಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಹಾರದ ಬಕ್ಸಾರ್‌ನ 28 ವರ್ಷದ ಈ ಯುವಕ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಬಗ್ಗೆ ವೈದ್ಯರನ್ನು ಭೇಟಿಯಾದ ಆತನಿಗೆ ಮೆದುಳಿನಲ್ಲಿ ಗೆಡ್ಡೆ ಇದೆ ಎಂದು ತಿಳಿದು ಬಂದಿದೆ. ಚಿಕ್ಕ ವಯಸ್ಸಿನಲ್ಲಿ ಈ ಸಮಸ್ಯೆ ಉಂಟಾಗಿದ್ದು ತಕ್ಷಣದಲ್ಲೇ ಯುವಕನಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಹೇಳಿದರು. ಜತೆಗೆ ಈ ಚಿಕಿತ್ಸೆಯಿಂದ ಆತನ ಮೇಲೆ ಅಡ್ಡ ಪರಿಣಾಮ ಉಂಟಾಗಬಾರದು ಎಂದು ವೈದ್ಯರು ಆತ ಎಚ್ಚರವಿರುವಾಗಲೇ ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಮೆದುಳಿನಲ್ಲಿ ಗೆಡ್ಡೆ ಉಂಟಾಗಿರುವ ಕಾರಣ ಮೆದುಳಿನ ಮೋಟಾರು ಕಾರ್ಟೆಕ್ಸ್‌ನ್ನು ಕೂಡ ಆತ ಎಚ್ಚರ ಇರುವಾಗಲೇ ಪತ್ತೆ ಮಾಡಲಾಗಿದೆ.

ಇದನ್ನೂ ಓದಿ:ಮಹಿಳಾ ಕ್ರೀಡಾಪಟುವಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿ ಮತ್ತೊಮ್ಮೆ ಮಾನವೀಯತೆ ಮೆರೆದ ಶಾಸಕ ಡಾ ರಂಗನಾಥ್

ಈ ಬಗ್ಗೆ ಒಂದು ವಿಡಿಯೋವನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಯುವಕ ಆಪರೇಷನ್ ಥಿಯೇಟರ್ ಮಲಗಿರುವುದನ್ನು ಕಾಣುಬಹುದು, ಜತೆಗೆ ಯುವಕ ಶಸ್ತ್ರಚಿಕಿತ್ಸೆ ಮಾಡುತ್ತಿರುವಾಗ ಪಿಯಾನೋ ಮೂಲಕ ಹನುಮಾನ್ ಚಾಲೀಸಾ​​ನ್ನು ನುಡಿಸಿದ್ದಾನೆ. ಈ ಸಮಯದಲ್ಲಿ ಯುವಕ ಯಾವುದೇ ನೋವು ಅಥವಾ ಒತ್ತಡವನ್ನು ಅನುಭವಿಸಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಇನ್ನು ವೈದ್ಯರು ಕೂಡ ಶಸ್ತ್ರಚಿಕಿತ್ಸೆ ವೇಳೆ ಆತನೊಂದಿಗೆ ಸಕಾರತ್ಮಕವಾಗಿ ಮಾತನಾಡುತ್ತಿದ್ದರು, ಇದರ ಜತೆಗೆ ಆತ ಜತೆಗೆ ಅವರು ಕೂಡ ಹನುಮಾನ್ ಚಾಲೀಸಾಗೆ ತಲೆತೂಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:01 pm, Fri, 3 November 23