ಮರ್ಯಾದಾ ಹತ್ಯೆ: ಕುಟುಂಬದವರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾದ ಜೋಡಿ, ಮೂರೇ ದಿನಕ್ಕೆ ಬರ್ಬರ ಹತ್ಯೆ
ಕುಟುಂಬಸ್ಥರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾಗಿದ್ದ ಯುವ ಜೋಡಿಯನ್ನು ಮದುವೆಯಾದ ಮೂರೇ ದಿನಗಳಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.
ಕುಟುಂಬಸ್ಥರ ಅಪೇಕ್ಷೆಗೆ ವಿರುದ್ಧವಾಗಿ ವಿವಾಹವಾಗಿದ್ದ ಯುವ ಜೋಡಿಯನ್ನು ಮದುವೆಯಾದ ಮೂರೇ ದಿನಗಳಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿಯಲ್ಲಿ ನಡೆದಿದೆ.
ಗುರುವಾರ ಸಂಜೆ 6.45 ರ ಸುಮಾರಿಗೆ ಐವರು ಅಪರಿಚಿತರು ದಂಪತಿಯ ಮನೆಗೆ ನುಗ್ಗಿ ಅವರನ್ನು ಕೊಲೆ ಮಾಡಿದ್ದಾರೆ. ಮರಿಸೆಲ್ವಂ (24) ಮತ್ತು ಕಾರ್ತಿಗ (20) ಎಂದು ಗುರುತಿಸಲಾದ ದಂಪತಿ ಒಂದೇ ಸಮುದಾಯಕ್ಕೆ ಸೇರಿದವರು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಅವರು ಕಳೆದ ಎರಡು ವರ್ಷಗಳಿಂದ ಸಂಬಂಧದಲ್ಲಿದ್ದರು ಎಂದು ವರದಿಯಾಗಿದೆ. ಆದರೆ, ವಧುವಿನ ಮನೆಯವರು ಇವರಿಬ್ಬರ ಮದುವೆಯನ್ನು ವಿರೋಧಿಸಿದ್ದರು, ಈ ಜೋಡಿ ಕೊಲೆ ಹಿಂದೆ ವಧುವಿನ ಕುಟುಂಬದ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಮತ್ತಷ್ಟು ಓದಿ: ಹಾಸನ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಸೋದರ ಮಾವನನ್ನೇ ಕೊಲೆಗೈದ ಅಳಿಯ
ಸಂಜೆ 6.45 ರ ಸುಮಾರಿಗೆ, ಗ್ಯಾಂಗ್ ದಂಪತಿಯನ್ನು ಅವರ ಬಾಡಿಗೆ ಮನೆಯಲ್ಲಿ ಕೊಲೆ ಮಾಡಿದೆ, ಎನ್‌ಡಿಟಿವಿ ವರದಿ ಪ್ರಕಾರ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ದಂಪತಿ ಅಕ್ಟೋಬರ್ 30 ರಂದು ಊರಿನ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ