AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಾನ್ ಚಾಲೀಸಾ ಪಾರಾಯಣ ಆರಂಭಿಸಿದ ಟಿಟಿಡಿ; 4 ರಾಜ್ಯಗಳಲ್ಲಿ ರಥೋತ್ಸವ

ಸಮಾಜದ ಕಲ್ಯಾಣಕ್ಕಾಗಿ ಕೈಗೊಂಡಿರುವ ಈ ಹನುಮಾನ್ ಚಾಲೀಸಾ ಪ್ರಚಾರ ರಥಗಳು ಜನವರಿ 2024 ರವರೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಸ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಟಿಟಿಡಿ ರೂ. 1.5 ಕೋಟಿ ಮಂಜೂರು ಮಾಡಲಾಗಿದ್ದು, ಎಲ್ಲಾ ರಥಗಳಲ್ಲಿ ಐದು ಲಕ್ಷ ಹನುಮಾನ್ ಚಾಲೀಸಾ ಪುಸ್ತಕಗಳು ಮತ್ತು ಹ್ಯಾಂಡ್ ಬಿಲ್‌ಗಳಿವೆ.

ಹನುಮಾನ್ ಚಾಲೀಸಾ ಪಾರಾಯಣ ಆರಂಭಿಸಿದ ಟಿಟಿಡಿ; 4 ರಾಜ್ಯಗಳಲ್ಲಿ ರಥೋತ್ಸವ
ಹನುಮಾನ್ ಚಾಲೀಸಾ
ನಯನಾ ಎಸ್​ಪಿ
|

Updated on: Aug 22, 2023 | 3:05 PM

Share

ಪ್ರಸಿದ್ಧ ತಿರುಪತಿ ದೇವಾಲಯ (Tirumala Tirupathi Devasthanams) ಮತ್ತೊಂದು ಅದ್ಧೂರಿ ಕಾರ್ಯಕ್ರಮಕ್ಕೆ ಕೈ ಹಾಕಿದೆ. ರಾಮ ಭಕ್ತ ಹನುಮಂತನನ್ನು ಭಕ್ತಿಯಿಂದ ಪೂಜಿಸಲು ಹನುಮಾನ್ ಚಾಲೀಸಾ (Hanuman Chalisa) ಪಠಿಸಲಾಗುವುದು. ಹನುಮಾನ್ ಚಾಲೀಸಾ ಪಠಣ ಪ್ರಚಾರಕ್ಕಾಗಿ ರಥಗಳು ದಕ್ಷಿಣದ ಕೆಲವು ರಾಜ್ಯಗಳಲ್ಲಿ ಸಂಚರಿಸಲಿವೆ. ಇದು ಎಸ್ ವಿ ವಿಶ್ವವಿದ್ಯಾಲಯದ ಉಪಕ್ರಮವಾಗಿ ಕೈಗೊಳ್ಳಲಾಗಿದೆ. ಟಿಟಿಡಿಯ ಶ್ರೀ ಹನುಮಾನ್ ದೀಕ್ಷಾ ಪೀಠದ ಆಶ್ರಯದಲ್ಲಿ ದಕ್ಷಿಣ ರಾಜ್ಯಗಳ ಪ್ರವಾಸ ಮಾಡುವುದಾಗಿ ಟಿಟಿಡಿ ಅಧಿಕಾರಿ ತಿಳಿಸಿದ್ದಾರೆ. ಸಮಾಜದ ಸ್ವಾಸ್ಥ್ಯದ ಆಶಯದೊಂದಿಗೆ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಈ ಪಾರಾಯಣ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

ಸಮಾಜದ ಕಲ್ಯಾಣಕ್ಕಾಗಿ ಕೈಗೊಂಡಿರುವ ಈ ಹನುಮಾನ್ ಚಾಲೀಸಾ ಪ್ರಚಾರ ರಥಗಳು ಜನವರಿ 2024 ರವರೆಗೆ ಕರ್ನಾಟಕ, ತಮಿಳುನಾಡು, ತೆಲಂಗಾಣ, ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಸ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ಟಿಟಿಡಿ ರೂ. 1.5 ಕೋಟಿ ಮಂಜೂರು ಮಾಡದೆ. ಎಲ್ಲಾ ರಥಗಳಲ್ಲಿ ಐದು ಲಕ್ಷ ಹನುಮಾನ್ ಚಾಲೀಸಾ ಪುಸ್ತಕಗಳು ಮತ್ತು ಹ್ಯಾಂಡ್ ಬಿಲ್‌ಗಳಿವೆ. ನಾಲ್ಕು ರಾಜ್ಯಗಳಲ್ಲಿ ನಡೆಯುವ ರಥಯಾತ್ರೆಯಲ್ಲಿ ಭಕ್ತರಿಗೆ ಹನುಮಾನ್ ಚಾಲೀಸಾ ವಿತರಿಸಲಾಗುವುದು ಎಂದು ಟಿಟಿಡಿ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ಸದಾ ಭಾರ್ಗವಿ ತಿಳಿಸಿದ್ದಾರೆ. ಹನುಮಂತನ ಮಹಿಮೆ, ಶ್ರೀ ಆಂಜನೇಯ ಸ್ವಾಮಿಯ ಜನ್ಮಸ್ಥಳ ಮತ್ತು ಇತರ ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಲು ಟಿಟಿಡಿ ಕೊಡುಗೆ ನೀಡಲಿದೆ ಎಂದು ಅವರು ಹೇಳಿದರು.

ಹನುಮಂತನ ದರ್ಶನದ ನಂತರ ತುಳಸೀದಾಸರು ಬರೆದ ಹನುಮಾನ್ ಚಾಲೀಸವನ್ನು ಸ್ತುತಿಸಿ ಪಠಿಸುತ್ತಾರೆ. ಕೇಸರಿನಂದನನನ್ನು ಪೂಜಿಸಿದರೆ ಸಕಲ ದೇವತೆಗಳನ್ನು ಪೂಜಿಸಿದ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ.

40 ದಿನಗಳ ಕಾಲ ದಿನಕ್ಕೆ 11 ಬಾರಿ ಚಾಲೀಸಾವನ್ನು ಪಠಿಸಿ ಹನುಮಂತನಿಗೆ ಪ್ರತಿದಿನ ಅಭಿಷೇಕ ಮಾಡಿ ಸಿಂಧೂರವನ್ನು ಇಟ್ಟರೆ ಹನುಮಂತ ಭಕ್ತರಿಗೆ ವರವನ್ನು ನೀಡುತ್ತಾನೆ ಮತ್ತು ಅವರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಮತ್ತು ಗ್ರಹದೋಷಗಳನ್ನು ತೊಡೆದುಹಾಕುತ್ತಾನೆ ಎಂದು ನಂಬಲಾಗಿದೆ. ಮದುವೆಯಾಗದವರು ಹನುಮಾನ್ ಚಾಲೀಸಾ ಪಠಿಸುವುದರಿಂದ ವಿವಾಹವಾಗುತ್ತದೆ. ಆಂಜನೇಯನ ಅನುಗ್ರಹದಿಂದ ಉದ್ಯೋಗ, ಆರೋಗ್ಯ, ಗ್ರಹದೋಷ ಮತ್ತು ನೆಮ್ಮದಿ ನಿಮ್ಮದಾಗುತ್ತದೆ.

ಇದನ್ನೂ ಓದಿ: ಕಾರಿನಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ.. ಒಳ್ಳೆಯ ಫಲಿತಾಂಶ ಸಿಗುತ್ತದೆ

ಯಾವುದೇ ಕೋರಿಕೆ ಈಡೇರಲು ಅಥವಾ ಗ್ರಹದೋಷ ಹೋಗಲಾಡಿಸಲು ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮಾನ್ ಚಾಲೀಸವನ್ನು 21 ದಿನಗಳ ಕಾಲ ಪ್ರತಿದಿನ ಪಠಿಸಬೇಕು.

ಮದುವೆಯಾಗಲು ಅಥವಾ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವವರು 40 ದಿನಗಳ ಕಾಲ ಹನುಮಾನ್ ಚಾಲೀಸಾವನ್ನು ಪಠಿಸಬೇಕು ಮತ್ತು ದೇವಾಲಯದಲ್ಲಿ 21 ಪ್ರದಕ್ಷಿಣೆಗಳನ್ನು ಹಾಕಬೇಕು.

ಸುಂದರಕಾಂಡದ ಪಾರಾಯಣವನ್ನು ಓದುವುದರಿಂದ ಕುಟುಂಬದಲ್ಲಿ ಸಂತೋಷ ಮನೆಮಾಡುತ್ತದೆ.

ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೂ ದಿನಕ್ಕೆ 11 ಬಾರಿ ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವುದರಿಂದ ಉತ್ತಮ ಫಲಿತಾಂಶ ನೀಡುತ್ತದೆ.

ಆಧ್ಯಾತ್ಮ ಕುರಿತಾದ ವಿಷಯಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ