ಆಧಾರ್​ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!

|

Updated on: Feb 02, 2021 | 9:58 PM

ಕೇಂದ್ರ ಸರ್ಕಾರ 1947 ಸಹಾಯವಾಣಿ ಸಂಖ್ಯೆಯೊಂದನ್ನು ಪರಿಚಯಿಸಿದೆ. ಈ ಸಂಖ್ಯೆಗೆ ಮೊಬೈಲ್​ ಅಥವಾ ಲ್ಯಾಂಡ್​ಲೈನ್​ನಿಂದ ಕರೆಮಾಡಬಹುದು. ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಆಧಾರ್​ಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಬಹುದು.

ಆಧಾರ್​ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ!
ಸಾಂದರ್ಭಿಕ ಚಿತ್ರ
Follow us on

ಎಲ್ಲಾ ಸರ್ಕಾರಿ ಕೆಲಸಕ್ಕೆ ಆಧಾರ್​ ಬೇಕೆ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆಧಾರ್​ ಕಾರ್ಡ್​ನಲ್ಲಿ ಕೆಲವು ತಪ್ಪಿನಿಂದಾಗಿ ಅನೇಕರು ಸಮಸ್ಯೆ ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ಎಲ್ಲಿ ಪರಿಹಾರ ಮಾಡಬೇಕು ಎನ್ನುವುದು ಅನೇಕರ ಪ್ರಶ್ನೆ ಆಗಿರುತ್ತದೆ. ಇದೆಲ್ಲದಕ್ಕೂ ಕೇಂದ್ರ ಸರ್ಕಾರ ಈಗ ಪರಿಹಾರ ನೀಡಿದೆ.

ಹೌದು, ಕೇಂದ್ರ ಸರ್ಕಾರ 1947 ಸಹಾಯವಾಣಿ ಸಂಖ್ಯೆಯೊಂದನ್ನು ಪರಿಚಯಿಸಿದೆ. ಈ ಸಂಖ್ಯೆಗೆ ಮೊಬೈಲ್​ ಅಥವಾ ಲ್ಯಾಂಡ್​ಲೈನ್​ನಿಂದ ಕರೆಮಾಡಬಹುದು. ಈ ಸಂಖ್ಯೆಗೆ ಕರೆ ಮಾಡಿ ನಿಮ್ಮ ಆಧಾರ್​ಗೆ ಸಂಬಂಧಿಸಿದ ಮಾಹಿತಿಯನ್ನು ಕೇಳಬಹುದು. ಅಷ್ಟೇ ಅಲ್ಲ, ನಿಮ್ಮ ಹತ್ತಿರದಲ್ಲಿರುವ ಅಧಿಕೃತ ಆಧಾರ್​ ಕೇಂದ್ರದ ಬಗ್ಗೆಯೂ ವಿಚಾರಿಸಬಹುದು.

ಇನ್ನು, ಕೇಂದ್ರ ಸರ್ಕಾರ ಭಾಷೆಯ ಅಡೆತಡೆಯನ್ನು ನಿವಾರಿಸಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳ್​, ಮಲಯಾಳಂ, ಪಂಜಾಬಿ, ಗುಜರಾತಿ, ಮರಾಠಿ, ಓಡಿಶಿ, ಬೆಂಗಾಲಿ, ಅಸ್ಸಾಮಿ ಮತ್ತು ಉರ್ದು ಭಾಷೆಯಲ್ಲಿ ನಿಮಗೆ ಮಾಹಿತಿ ಸಿಗಲಿದೆ.

ಆಧಾರ್​ ಸಿಂಧುತ್ವ ಎತ್ತಿ ಹಿಡಿದ ಸುಪ್ರೀಂಕೋರ್ಟ್​!