Aero India 2021ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2021ಗೆ ರಕ್ಷಣಾ ಸಚಿವರಿಂದ ಸಿಕ್ತು ಚಾಲನೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ ಶೋ-2021’ಗೆ ಚಾಲನೆ ನೀಡಿದ್ದಾರೆ.
ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ ಶೋ-2021’ಗೆ ಚಾಲನೆ ಸಿಕ್ಕಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಸಿದ್ದಾರೆ. ಈ ವೇಳೆ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಉಪಸ್ಥಿತರಿದ್ರು.
ಏರೋ ಇಂಡಿಯಾ 2021 ಚಾಲನೆ ವೇಳೆ ರಾಷ್ಟ್ರಧ್ವಜ, ಭಾರತೀಯ ವಾಯು ಸೇನೆ ಹಾಗೂ ಏರೋ ಇಂಡಿಯಾ 2021 ರ ಧ್ವಜ ಹೊತ್ತ LUH ಹೆಲಿಕಾಪ್ಟರ್ ಗಳು ಮೊದಲು ಪ್ರದರ್ಶನ ನೀಡಿದವು. ಈ ಬಾರಿ ಒಟ್ಟು 63 ವಿಮಾನಗಳಿಂದ ಪ್ರದರ್ಶನ ನಡೆಯಲಿದ್ದು ದಿನಕ್ಕೆ ಎರಡು ಬಾರಿ 42 ವಿಮಾನಗಳು ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ.
ಡಕೋಟಾ, ಸುಖೋಯ್, ರಫೆಲ್, ಎಲ್ಸಿಹೆಚ್, ಎಲ್ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್, ಹೆಲಿಕಾಫ್ಟರ್ಗಳಿಂದ ಪ್ರದರ್ಶನ ನಡೆಯುತ್ತೆ. ಕೊರೊನಾ ಹಿನ್ನೆಲೆಯಲ್ಲಿ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ. ಈ ಭಾರಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದು ಕೇವಲ ಬ್ಯುಸಿನೆಸ್ ವಿಸಿಟರ್ ಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಶೋ ಹಿನ್ನೆಲೆಯಲ್ಲಿ ಹುಣಸಮಾರನಹಳ್ಳಿಯಿಂದ ಯಲಹಂಕವರೆಗೂ ಗೂಡ್ಸ್ ಸೇರಿದಂತೆ ಭಾರಿ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಏರ್ ಶೋ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಎಂಟ್ರಿ ಇರುತ್ತೆ. ಏರ್ ಶೋ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಈ ಹಿಂದೆ ರಸ್ತೆಯ ಇಕ್ಕಲುಗಳಲ್ಲಿ ನಿಂತು ಜನ ಏರ್ ಶೋ ನೋಡುತ್ತಿದ್ದರು ಆದ್ರೆ ಈ ಬಾರಿ ರಸ್ತೆಯಲ್ಲಿ ನಿಂತು ಏರ್ ಶೋ ನೋಡುವವರಿಗೂ ಬ್ರೇಕ್ ಹಾಕಲಾಗಿದೆ.
Aero India 2021 ಏರೋ ಇಂಡಿಯಾ 2021: ಬಾನಂಗಳದಲ್ಲಿಂದು ಲೋಹದ ಹಕ್ಕಿಗಳ ಕಲರವ.. ಇಂದಿನಿಂದ ಮೂರು ದಿನ ಏರ್ ಶೋ
Published On - 10:08 am, Wed, 3 February 21