Aero India 2021 Live: ಭಾರತದ ಪ್ರಾದೇಶಿಕ ಸಮಗ್ರತೆ, ಜನರ ರಕ್ಷಣೆಗೆ ನಮ್ಮ ಸೇನೆ ಸದಾ ಬದ್ಧ -ರಕ್ಷಣಾ ಸಚಿವ ರಾಜನಾಥ್ ಸಿಂಗ್
Aero India 2021 Live updates ಭಾರತವು ಮೇಡ್ ಇನ್ ಇಂಡಿಯಾದಿಂದ ಮೇಡ್ ಫಾರ್ ದಿ ವರ್ಲ್ಡ್ನತ್ತ ಪ್ರಗತಿಯಲ್ಲಿದೆ. ಹಾಗೇ ಕರ್ನಾಟಕವು ಕೈಗಾರಿಕೆಗಳಿಗೆ ಆಕರ್ಷಕ ತಾಣ. ರಾಜ್ಯವು ಸೂಫಿ ಸಂತರು, ಸಮಾಜ ಸುಧಾರಕ ಬಸವಣ್ಣ, ಆಧುನಿಕ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರಿಂದ ಪ್ರೇರಿತವಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
Aero India 2021 Live: ಬೆಂಗಳೂರು- ಇಲ್ಲಿನ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿ ಏರ್ ಶೋ (Bangalore Air Show 2021) ಉದ್ಘಾಟನೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಬಳಿಕ ಮಾತನಾಡಿ, ಪೂರ್ವ ಲಡಾಖ್ನ ಎಲ್ಎಸಿಯಲ್ಲಿ ಚೀನಾ ಸೇನೆಗೆ ಭಾರತ ಸಮರ್ಥ ಪ್ರತಿಕ್ರಿಯೆ ನೀಡಿದೆ. ಹೀಗಾಗಿ ಅಲ್ಲಿನ ಸಂಘರ್ಷ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದರು.
ಭಾರತವು ಸದಾ ಎಚ್ಚರವಾಗಿರುತ್ತದೆ.. ಹಾಗೇ ನಮ್ಮ ಪ್ರಾದೇಶಿಕತೆಯ ಸಮಗ್ರತೆ, ಜನರ ರಕ್ಷಣೆಗೆ ಯಾವಾಗಲೂ ಬದ್ಧವಾಗಿರುತ್ತದೆ. ಶತ್ರುಗಳಿಂದ ಎದುರಾಗುವ ದುಷ್ಕೃತ್ಯಗಳನ್ನು ಖಂಡಿತ ಹಿಮ್ಮೆಟ್ಟುತ್ತೇವೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.
ಭಾರತವು ಮೇಡ್ ಇನ್ ಇಂಡಿಯಾದಿಂದ ಮೇಡ್ ಫಾರ್ ದಿ ವರ್ಲ್ಡ್ನತ್ತ ಪ್ರಗತಿಯಲ್ಲಿದೆ. ಹಾಗೇ ಕರ್ನಾಟಕವು ಕೈಗಾರಿಕೆಗಳಿಗೆ ಆಕರ್ಷಕ ತಾಣ. ರಾಜ್ಯವು ಸೂಫಿ ಸಂತರು, ಸಮಾಜ ಸುಧಾರಕ ಬಸವಣ್ಣ, ಆಧುನಿಕ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರಿಂದ ಪ್ರೇರಿತವಾಗಿದೆ. ಏರೋ ಇಂಡಿಯಾ ಸೆಮಿನಾರ್ಗಳು ಆಧುನಿಕ ರೂಪದಲ್ಲಿ ನಡೆಯಲಿದ್ದು, ಇದನ್ನು ವಿಶ್ವದಾದ್ಯಂತ ಪ್ರಸಾರ ಮಾಡಲಾಗುವುದು. ಇಲ್ಲಿಗೆ ಹೆಸರಾಂತ ತಜ್ಞರನ್ನು ಆಹ್ವಾನಿಸಲಾಗಿದ್ದು, ಅವರೆಲ್ಲೂ ಆಯಾ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಿದರು.
Aero India 2021: ಆಗಸದಲ್ಲಿ ಆತ್ಮನಿರ್ಭರ ಪರಿಕಲ್ಪನೆ ಮೂಡಿಸಿದ ಏರ್ಕ್ರಾಫ್ಟ್!
Published On - 12:37 pm, Wed, 3 February 21