ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಲು.. ಎಲ್ಲಿಯವರೆಗೆ ಅವಕಾಶ?

ಡಿಸೆಂಬರ್ ಅಂತ್ಯದ ಒಳಗೆ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಭಾರತೀಯ ಬ್ಯಾಂಕುಗಳ ಸಂಘದ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು 2021 ರ ಮಾರ್ಚ್ ಒಳಗಾಗಿ ಎಲ್ಲಾ ಖಾತೆಗಳು ಆಧಾರ್ ನೊಂದಿಗೆ ಲಿಂಕ್ ಹೊಂದಿದೆಯೆ ಎಂದು ಖಾತ್ರಿಪಡಿಸಿಕೊಳ್ಳಲು ಬ್ಯಾಂಕ್ ಗಳಿಗೆ ತಿಳಿಸಿದರು. ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಹೊಂದದ ಖಾತೆದಾದರು ದೇಶದಲ್ಲಿ ಹಲವರು ಇದ್ದಾರೆ. ಆದರೆ ಅಂಕಿ-ಅಂಶಗಳು ತಿಳಿದಿಲ್ಲ. ಆಧಾರ್ ಲಿಂಕ್ […]

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸಲು.. ಎಲ್ಲಿಯವರೆಗೆ ಅವಕಾಶ?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: Nov 11, 2020 | 5:54 PM

ಡಿಸೆಂಬರ್ ಅಂತ್ಯದ ಒಳಗೆ ಪ್ರತಿಯೊಬ್ಬರೂ ತಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಭಾರತೀಯ ಬ್ಯಾಂಕುಗಳ ಸಂಘದ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು 2021 ರ ಮಾರ್ಚ್ ಒಳಗಾಗಿ ಎಲ್ಲಾ ಖಾತೆಗಳು ಆಧಾರ್ ನೊಂದಿಗೆ ಲಿಂಕ್ ಹೊಂದಿದೆಯೆ ಎಂದು ಖಾತ್ರಿಪಡಿಸಿಕೊಳ್ಳಲು ಬ್ಯಾಂಕ್ ಗಳಿಗೆ ತಿಳಿಸಿದರು.

ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಹೊಂದದ ಖಾತೆದಾದರು ದೇಶದಲ್ಲಿ ಹಲವರು ಇದ್ದಾರೆ. ಆದರೆ ಅಂಕಿ-ಅಂಶಗಳು ತಿಳಿದಿಲ್ಲ. ಆಧಾರ್ ಲಿಂಕ್ ಮಾಡಿಸಲು ಈ ಡಿಸೆಂಬರ್ ವರೆಗೆ ಅವಕಾಶವಿದೆ. ಬರುವ ಮಾರ್ಚ್ 31ರ ಒಳಗೆ ಬ್ಯಾಂಕ್ ಖಾತೆಗೆ ಅಗತ್ಯವಿರುವ ಪಾನ್ (permanant account number) ಕಾರ್ಡ್ ಕೂಡ ಹೊಂದಿರಬೇಕು ಎಂದು ಒತ್ತಿ ಹೇಳಿದರು.

ಡಿಜಿಟಲ್ ಪೇಮೆಂಟ್ ಮತ್ತು ರುಪೇ:
ಬ್ಯಾಂಕ್ ಗಳು ಡಿಜಿಟಲ್ ಪಾವತಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವುದು ಸೂಕ್ತ. ಅದಕ್ಕೆ ಸಂಬಂಧಿತ ಕೆಲಸಗಳ ಬಗ್ಗೆ ಗಮನ ಹರಿಸಿ. ರುಪೇಗಳು ಜಾಗತಿಕವಾಗುತ್ತಿರುವಾಗ ಭಾರತದಲ್ಲಿ ಅನಿವಾರ್ಯವೆಂದು ಯೋಚಿಸುವುದಿಲ್ಲ. ಇದು ಅಭಿವೃದ್ದಿಯ ಹಿನ್ನಡೆಗೆ ಕಾರಣವಾಗುವುದು. ಬ್ಯಾಂಕ್ ಮುಖ್ಯಸ್ಥರರು ನಿಮ್ಮ ಸಾಮರ್ಥ್ಯದಲ್ಲಾಗುವ ಕಾರ್ಯಗಳು ಯಶಸ್ವಿಯಾಗುತ್ತದೆಯೆಂಬ ನಂಬಿಕೆಯಿದೆ ಮತ್ತು ಆ ಯಶಸ್ವಿಯನ್ನು ನೋಡಲು ನಾನು ಉತ್ಸಾಹಿಯಾಗಿದ್ದೇನೆ ಎಂದು ನುಡಿದರು.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us