Shelly Oberoi: ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ದೆಹಲಿಯ ನೂತನ ಮೇಯರ್ 

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 22, 2023 | 5:01 PM

Delhi New Mayor ಬುಧವಾರ  ದೆಹಲಿ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಆಮ್ ಆದ್ಮಿ ಪಕ್ಷದ (ಎಎಪಿ) ಶೆಲ್ಲಿ ಒಬೆರಾಯ್  ಮೇಯರ್ ಆಗಿ ಆಯ್ಕೆಯಾಗಿದ್ದಾರೆ

ನಾಮನಿರ್ದೇಶಿತ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ (Supreme Court) ಆದೇಶಿಸಿದ ಕೆಲವು ದಿನಗಳ ನಂತರ ಬುಧವಾರ  ದೆಹಲಿ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಆಮ್ ಆದ್ಮಿ ಪಕ್ಷದ (AAP) ಶೆಲ್ಲಿ ಒಬೆರಾಯ್ (Shelly Oberoi) ಮೇಯರ್ ಆಗಿ ಆಯ್ಕೆಯಾಗಿದ್ದಾರೆ.  ಜನವರಿ 6, ಜನವರಿ 24 ಮತ್ತು ಫೆಬ್ರವರಿ 6 ರಂದು ಮೂರು ವಿಫಲ ಪ್ರಯತ್ನಗಳ ನಂತರ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಮತದಾನ ಬುಧವಾರ ನಡೆದಿದೆ. ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ250 ವಾರ್ಡ್‌ಗಳ ಪೈಕಿ 134 ವಾರ್ಡ್‌ಗಳನ್ನು ಗಳಿಸುವ ಮೂಲಕ ಎಎಪಿ ಜಯಗಳಿಸಿದ್ದು ಈ ಮೂಲಕ 15 ವರ್ಷಗಳ ಬಿಜೆಪಿಯ ನಾಗರಿಕ ಆಡಳಿತವನ್ನು ಕೊನೆಗೊಳಿಸಿತು.


ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಿವಿಕ್ ಸೆಂಟರ್‌ನಲ್ಲಿ ಮತದಾನ ಪ್ರಕ್ರಿಯೆ ಮುಗಿದ ಕೆಲವೇ ನಿಮಿಷಗಳಲ್ಲಿ ಮೇಯರ್ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಶೆಲ್ಲಿ ಒಬೆರಾಯ್ ಅವರನ್ನು ಅಭಿನಂದಿಸಿದ್ದಾರೆ.

ಗೂಂಡಾಗಳು ಸೋತರು, ಸಾರ್ವಜನಿಕರು ಗೆದ್ದರು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಎಎಪಿ ಅಭ್ಯರ್ಥಿ ಮೇಯರ್ ಆಗಿದಕ್ಕೆ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ಮತ್ತೊಮ್ಮೆ ದೆಹಲಿಯ ಜನತೆಗೆ ಹೃದಯಪೂರ್ವಕ ಕೃತಜ್ಞತೆಗಳು. ಎಎಪಿಯ ಮೊದಲ ಮೇಯರ್  ಒಬೆರಾಯ್ ಶೆಲ್ಲಿ ಅವರಿಗೆ ಅನೇಕ ಅಭಿನಂದನೆಗಳು ”ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಶೆಲ್ಲಿ ಒಬೆರಾಯ್ ಯಾರು?

  1. ಡಿಸೆಂಬರ್ 7 ರಂದು ತಮ್ಮ ವಾರ್ಡ್‌ನಿಂದ MCD ನಾಗರಿಕ ಚುನಾವಣೆಯಲ್ಲಿ ಶೆಲ್ಲಿ ಒಬೆರಾಯ್ ಗೆದ್ದಿದ್ದಾರೆ.
  2. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.
  3. 39 ವರ್ಷ ವಯಸ್ಸಿನ ಒಬೆರಾಯ್ ಕೌನ್ಸಿಲರ್ ಭಾರತೀಯ ವಾಣಿಜ್ಯ ಸಂಘದ (ICA) ಆಜೀವ ಸದಸ್ಯರೂ ಆಗಿದ್ದಾರೆ.
  4. ಶೆಲ್ಲಿ ವಿವಿಧ ಸಮ್ಮೇಳನಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
  5. ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಿಂದ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನೂ ಇವರು ಹೊಂದಿದ್ದಾರೆ.
  6. ‘ಮಿಸ್ ಕಮಲಾ ರಾಣಿ ಪ್ರಶಸ್ತಿ’ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಲ್ಲಿ ಅತ್ಯುನ್ನತ ಗ್ರೇಡ್ ಪಾಯಿಂಟ್ ಸರಾಸರಿಯನ್ನು ಸಾಧಿಸಿದ್ದಕ್ಕಾಗಿ ವಿದ್ಯಾರ್ಥಿವೇತನ ಪಡೆದಾಕೆ.

ಸುಪ್ರೀಂಕೋರ್ಟ್ ನ  ಶುಕ್ರವಾರದ ತೀರ್ಪಿಗೆ ಅನುಗುಣವಾಗಿ ಉಪಮೇಯರ್ ಮತ್ತು ಪ ಸ್ಥಾಯಿ ಸಮಿತಿಯ ಆರು ಸದಸ್ಯರು ಸೇರಿದಂತೆ ಉಳಿದ ಚುನಾವಣೆಗಳಿಗೆ ಒಬೆರಾಯ್ ಈಗ ಅಧ್ಯಕ್ಷತೆ ವಹಿಸಲಿದ್ದಾರೆ. ಮೇಯರ್ ಆಯ್ಕೆಯೊಂದಿಗೆ ವಿಶೇಷಾಧಿಕಾರಿಗಳ ಕಚೇರಿ ಅಧಿಕಾರವೂ ಮುಕ್ತಾಯವಾಗಿದೆ. ವಿಶೇಷ ಅಧಿಕಾರಿ ಅಶ್ವಿನಿ ಕುಮಾರ್ ಅವರು ಮೇ 22, 2022 ಮತ್ತು ಫೆಬ್ರವರಿ 22, 2023 ರ ನಡುವೆ ವಿಚಾರಣಾ ವಿಭಾಗದ ಅಧಿಕಾರವನ್ನು ಹೊಂದಿದ್ದರು.

ಒಬೆರಾಯ್ ಅವರು ಸಾಂವಿಧಾನಿಕ ರೀತಿಯಲ್ಲಿ ಸದನವನ್ನು ನಡೆಸುವುದಾಗಿ ಸದಸ್ಯರಿಗೆ ಭರವಸೆ ನೀಡಿದ್ದು ಅವರಿಂದ ಸಹಕಾರಕ್ಕಾಗಿ ಕರೆ ನೀಡಿದರು.

“ನಾನು ಈ ಸದನವನ್ನು ಸಾಂವಿಧಾನಿಕ ರೀತಿಯಲ್ಲಿ ನಡೆಸುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನೀವೆಲ್ಲರೂ ಸದನದ ಘನತೆಯನ್ನು ಕಾಪಾಡುತ್ತೀರಿ ಮತ್ತು ಅದರ ಸುಗಮ ಕಾರ್ಯನಿರ್ವಹಣೆಗೆ ಸಹಕರಿಸುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ” ಎಂದು ಶೆಲ್ಲಿ ಒಬೆರಾಯ್ ಮೇಯರ್ ಸ್ಥಾನವನ್ನು ಅಲಂಕರಿಸಿದ ನಂತರ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Wed, 22 February 23