ದೆಹಲಿ ಮೇಯರ್ ಚುನಾವಣೆ: ಸುಪ್ರೀಂಕೋರ್ಟ್‌ ಮೊರೆ ಹೋದ ಆಮ್ ಆದ್ಮಿ ಪಕ್ಷ

ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ ಅವ್ಯವಸ್ಥೆಯ ನಡುವೆ ಮೇಯರ್ ಚುನಾವಣೆಯು ಈ ತಿಂಗಳ ಎರಡನೇ ಬಾರಿಗೆ ಸ್ಥಗಿತಗೊಂಡ ಎರಡು ದಿನಗಳ ನಂತರ ಶೆಲ್ಲಿ ಸುಪ್ರೀಂ ಮೊರೆ ಹೋಗಿದ್ದಾರೆ.

ದೆಹಲಿ ಮೇಯರ್ ಚುನಾವಣೆ: ಸುಪ್ರೀಂಕೋರ್ಟ್‌ ಮೊರೆ ಹೋದ ಆಮ್ ಆದ್ಮಿ ಪಕ್ಷ
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 26, 2023 | 7:27 PM

ದೆಹಲಿ: ಆಮ್ ಆದ್ಮಿ ಪಕ್ಷದ (AAP) ದೆಹಲಿ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಅವರು ಗುರುವಾರ ಸುಪ್ರೀಂಕೋರ್ಟ್‌ (Supreme Court) ಮೊರೆ ಹೋಗಿದ್ದು, ಪೌರ ಸಂಸ್ಥೆಯ ಉನ್ನತ ಹುದ್ದೆಗೆ ಚುನಾವಣೆಯನ್ನು “ಸಮಯಕ್ಕೆ ಅನುಗುಣವಾಗಿ” ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಈ ವಿಷಯದ ಬಗ್ಗೆ ಶುಕ್ರವಾರ ವಿಚಾರಣೆ ನಡೆಯುವ ಸಾಧ್ಯತೆ ಇದೆ. 10 ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ ಮತದಾನ ಮಾಡಲು ಅವಕಾಶ ನೀಡದಂತೆ ಕಾನೂನು ಅನುಸರಿಸಬೇಕು ಎಂದು ಪಕ್ಷ ವಾದಿಸಿದೆ. ಹೊಸದಾಗಿ ಚುನಾಯಿತವಾದ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ ಅವ್ಯವಸ್ಥೆಯ ನಡುವೆ ಮೇಯರ್ ಚುನಾವಣೆಯು ಈ ತಿಂಗಳ ಎರಡನೇ ಬಾರಿಗೆ ಸ್ಥಗಿತಗೊಂಡ ಎರಡು ದಿನಗಳ ನಂತರ ಶೆಲ್ಲಿ ಸುಪ್ರೀಂ ಮೊರೆ ಹೋಗಿದ್ದಾರೆ.

ಕಳೆದ ತಿಂಗಳು ನಡೆದ ಎಂಸಿಡಿ ಚುನಾವಣೆಯಲ್ಲಿ ಬಹುಮತ ಗಳಿಸಿದ ಎಎಪಿ, ಸ್ಟ್ಯಾಂಡ್-ಇನ್ ಪ್ರಿಸೈಡಿಂಗ್ ಆಫೀಸರ್, ಬಿಜೆಪಿ ಕೌನ್ಸಿಲರ್ ಅವರ ಪಕ್ಷಪಾತವನ್ನು ಆರೋಪಿಸಿದೆ. ಮೇಯರ್ ಚುನಾವಣೆಯಲ್ಲಿ ಬಿಜೆಪಿ ಕಾನೂನುಬಾಹಿರ ಮಾರ್ಗಗಳನ್ನು ಬಳಸಲು ಬಯಸುತ್ತದೆ ಎಂದು ಎಎಪಿ ಹೇಳಿದೆ. ಇದು ಬಿಜೆಪಿಯ ಕೇಂದ್ರ ಸರ್ಕಾರ ನೇಮಕಗೊಂಡಿರುವ ಲೆಫ್ಟಿನೆಂಟ್ ಗವರ್ನರ್‌ನ ಪಿತೂರಿ ಎಂದು ಆಪ್ ಹೇಳಿದೆ. 15 ವರ್ಷಗಳ ನಂತರ ಎಂಸಿಡಿಯಲ್ಲಿ ಆಯ್ಕೆಯಾಗದ ಬಿಜೆಪಿ, ತನ್ನ ಕೌನ್ಸಿಲರ್‌ಗಳು ತನ್ನ ಅಭ್ಯರ್ಥಿಗೆ ಮತ ಹಾಕದಿರುವುದರಿಂದ ಎಎಪಿ “ಹೆದರಿದೆ” ಎಂದು ಹೇಳಿಕೊಂಡಿದೆ.

ಮಂಗಳವಾರ ಮುಂದೂಡಿದ ನಂತರ ಮೇಯರ್ ಚುನಾವಣೆಯಿಂದ ಎಎಪಿ “ಓಡಿಹೋಗಿದೆ” ಎಂದು ಆರೋಪಿಸಿ ಬಿಜೆಪಿ ಕೌನ್ಸಿಲರ್‌ಗಳು ಪ್ಲಕಾರ್ಡ್‌ಗಳೊಂದಿಗೆ ಪ್ರತಿಭಟನೆ ನಡೆಸಿತ್ತು. ಇತ್ತ ಎಎಪಿ ಬಿಜೆಪಿ ಪಕ್ಷ ಚುನಾವಣೆಯನ್ನು ತಡೆಯಲು ಅವ್ಯವಸ್ಥೆಯನ್ನು ರೂಪಿಸಿದೆ ಎಂದು ಆರೋಪಿಸಿತು. ಮುಂದೂಡಿಕೆಯ ನಂತರವೂ ಎಎಪಿ ಸದಸ್ಯರು ಕುಳಿತಿದ್ದು ಪಕ್ಷವು ಸಂಖ್ಯಾಬಲವನ್ನು ಹೊಂದಿದೆ ಎಂದು ಒತ್ತಿಹೇಳಲು ಎಣಿಕೆ ನಡೆಸಿತು.

ಇದನ್ನೂ ಓದಿ:ನಾಗಾಲ್ಯಾಂಡ್‌ನಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧೆ, ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ: ಎಎಪಿ

ಇದಕ್ಕೂ ಮೊದಲು ಜನವರಿ 6 ರಂದು, ಎಎಪಿ ಮತ್ತು ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಹೊಸ ಸದನದ ಮೊದಲ ಸಭೆಯನ್ನು ಸಹ ಮುಂದೂಡಲಾಯಿತು. ಆ ದಿನ ಎಎಪಿಯ ಪ್ರತಿಭಟನೆಯ ಕೇಂದ್ರಬಿಂದುವಾಗಿ ನಾಮನಿರ್ದೇಶಿತ ಕೌನ್ಸಿಲರ್‌ಗಳಿಗೆ (‘ಅಲ್ಡರ್‌ಮೆನ್’) ಚುನಾಯಿತ ಸದಸ್ಯರ ಮುಂದೆ ಸದಸ್ಯತ್ವ ಪ್ರಮಾಣ ವಚನ ಬೋಧಿಸಲಾಯಿತು.

ಡಿಸೆಂಬರ್‌ನಲ್ಲಿ ನಡೆದ ಎಂಸಿಡಿ ಚುನಾವಣೆಯಲ್ಲಿ ಎಎಪಿ 250 ವಾರ್ಡ್‌ಗಳಲ್ಲಿ 134 ಅನ್ನು ಗೆದ್ದಿದ್ದುಬಿಜೆಪಿ 104 ಸ್ಥಾನಗಳನ್ನು ಗಳಿಸಿತ್ತು.

ಎಎಪಿಯ ಮೇಯರ್ ಅಭ್ಯರ್ಥಿ ಶೆಲ್ಲಿ ಒಬೆರಾಯ್ ಮತ್ತು ಪಕ್ಷದ ನಾಯಕ ಮುಖೇಶ್ ಗೋಯಲ್ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಎರಡು ಪ್ರಮುಖ ಅಂಶಗಳಿವೆ. ಒಂದು, ಹೊಸ ಮೇಯರ್ ನ್ನುಅನ್ನು ಸಮಯೋಚಿತವಾಗಿ ಆಯ್ಕೆ ಮಾಡುವುದು ಆಲ್ಡರ್‌ಮೆನ್‌ಗಳಿಗೆ ಮತ ಚಲಾಯಿಸಲು ಅನುಮತಿ ನಿರಾಕರಿಸುವುದು.

ಎಂಸಿಡಿ ಚುನಾವಣೆಯಲ್ಲಿ ದೆಹಲಿಯ ಜನರು ಎಎಪಿಗೆ ಬಹುಮತ ನೀಡಿದ್ದರು. ಆದರೆ ಬಿಜೆಪಿ ತನ್ನ ಕೊಳಕು ರಾಜಕೀಯದಿಂದ ಈಗ ಆಡಳಿತವನ್ನು ಹೊರಗಿಡಲು ಅವಕಾಶ ನೀಡುತ್ತಿದೆ ಎಂದು ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ