ನಾಗಾಲ್ಯಾಂಡ್‌ನಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧೆ, ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ: ಎಎಪಿ

60 ಸದಸ್ಯರ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ನಾವು ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಚುನಾವಣಾ ಪೂರ್ವ ಮೈತ್ರಿ ಇರುವುದಿಲ್ಲ" ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ

ನಾಗಾಲ್ಯಾಂಡ್‌ನಲ್ಲಿ ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧೆ, ಯಾವುದೇ ಪಕ್ಷದ ಜತೆ ಮೈತ್ರಿ ಇಲ್ಲ: ಎಎಪಿ
ಕೇಜ್ರಿವಾಲ್ ಜತೆ ಆಸು ಕೀಹೋ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 26, 2023 | 1:39 PM

ಕೊಹಿಮಾ: ಮುಂಬರುವ ನಾಗಾಲ್ಯಾಂಡ್ (Nagaland) ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅದರ ಈಶಾನ್ಯ ಉಸ್ತುವಾರಿ ರಾಜೇಶ್ ಶರ್ಮಾ (Rajesh Sharma) ಹೇಳಿದ್ದಾರೆ. ಮಾಜಿ ಶಾಸಕ ಆಸು ಕೀಹೋ ಅವರನ್ನು ಎಎಪಿಯ ನಾಗಾಲ್ಯಾಂಡ್ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. 60 ಸದಸ್ಯರ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ನಾವು ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ.  ಚುನಾವಣಾ ಪೂರ್ವ ಮೈತ್ರಿ ಇರುವುದಿಲ್ಲ” ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಉತ್ತಮ ಆಡಳಿತ, ಪ್ರಾಮಾಣಿಕ ರಾಜಕೀಯ ಮತ್ತು ಭ್ರಷ್ಟಾಚಾರ ನಿರ್ಮೂಲನೆಯೊಂದಿಗೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗಾಗಿ ನಾಗಾಲ್ಯಾಂಡ್ ಜನರು ಮತ ಚಲಾಯಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.

ನಾಗಾಲ್ಯಾಂಡ್‌ನ ರಾಜಕೀಯ ಸನ್ನಿವೇಶದಲ್ಲಿ ಅಗತ್ಯವಾದ ಬದಲಾವಣೆಯನ್ನು ತರಲು ಪಕ್ಷ ಎಲ್ಲ ಹಂತದವರನ್ನು ತಲುಪುತ್ತದೆ ಎಂದು ಶರ್ಮಾ ಭರವಸೆ ವ್ಯಕ್ತಪಡಿಸಿದರು.

ಈಶಾನ್ಯ ರಾಜ್ಯದ ಜನರು ಎಎಪಿ ಸರ್ಕಾರವನ್ನು ಬಯಸುತ್ತಾರೆ.ದೆಹಲಿಯಲ್ಲಿರುವ ನಾಗಾಗಳು, ಓದುತ್ತಿರಲಿ ಅಥವಾ ಕೆಲಸ ಮಾಡುತ್ತಿರಲಿ, ಅಲ್ಲಿನ ಅರವಿಂದ್ ಕೇಜ್ರಿವಾಲ್ ಸರ್ಕಾರದ ಅಡಿಯಲ್ಲಿ ಉತ್ತಮ ಆಡಳಿತ ಮತ್ತು ಭರವಸೆಗಳ ಈಡೇರಿಕೆಗೆ ಸಾಕ್ಷಿಯಾಗಿದ್ದಾರೆ ಎಂದು ಎಂದು ಕೀಹೋ ಹೇಳಿದರು.

ಇದನ್ನೂ ಓದಿ: ಟಿಎಂಸಿ ನಾಯಕ ಸಾಕೇತ್ ಗೋಖಲೆ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ದುಡ್ಡನ್ನು ದುಂದುವೆಚ್ಚ ಮಾಡಿದ್ದಾರೆ: ಇಡಿ

2018ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಿ ವಿಫಲವಾಗಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Thu, 26 January 23

ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
ವಕ್ಫ್ ವಿವಾದದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರಗೆ ಕಾಳಜಿಯಿಲ್ಲ: ಯತ್ನಾಳ್
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
‘ಶ್... ಬಾಯ್ಮುಚ್ಚು‘: ಸುಳ್ಳು ಹೇಳಿದ ಚೈತ್ರಾ ಮೇಲೆ ಕಿಚ್ಚ ಕೆಂಡ
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ಸ್ಟಾರ್ ಪ್ರಚಾರಕ ಅಲ್ಲ, ಹಾಗಾಗೇ ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿಲ್ಲ:ಯತ್ನಾಳ್
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ನಾನ್ಯಾಕೆ ಬೇಡವಾಗಿದ್ದೇನೆಂದು ಕುಮಾರಸ್ವಾಮಿಯೇ ಹೇಳಬೇಕು: ದೇವೇಗೌಡ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ಜಾಗೃತಿ ಅಭಿಯಾನಕ್ಕಾಗಿ ವಿಜಯೇಂದ್ರ 3 ತಂಡಗಳನ್ನು ರಚಿಸಿದ್ದಾರೆ: ಯಡಿಯೂರಪ್ಪ
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ನಂಬಿಕೆಗಳ ಮಹಾ ತರ್ಕ, ಲೆಕ್ಕಚಾರ ಮಾಡಲು ಬಂದ ಸುದೀಪ್
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ವಕ್ಫ್ ಭೂವಿವಾದ; ಬಿಜೆಪಿಯ ಪ್ರಸ್ತಾಪಿತ ಜಾಗೃತಿ ಜಾಥಾಗೆ ಸಮನ್ವಯತೆಯ ಕೊರತೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ರೌಡಿಶೀಟರ್ ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡುವಂತೆ ದೂರಿನಲ್ಲಿ ಕೋರಿಕೆ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ
ದೆಹಲಿಯಲ್ಲಿ ಮಿತಿ ಮೀರಿದ ವಾಯುಮಾಲಿನ್ಯ, ಪರಿಸ್ಥಿತಿ ಗಂಭೀರ