ಟಿಎಂಸಿ ನಾಯಕ ಸಾಕೇತ್ ಗೋಖಲೆ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ದುಡ್ಡನ್ನು ದುಂದುವೆಚ್ಚ ಮಾಡಿದ್ದಾರೆ: ಇಡಿ
Saket Gokhale ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯು ರಾಹುಲ್ ಗಾಂಧಿ ಅವರ ಸಹಾಯಕ ಅಲಂಕಾರ್ ಸವಾಯಿ ಅವರನ್ನು ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಿದ್ದಕ್ಕಾಗಿ ಅಲಂಕಾರ್ ಸವಾಯಿ ₹ 23.54 ಲಕ್ಷ ನಗದು ಪಡೆದಿದ್ದಾಗಿ ಸಾಕೇತ್ ಗೋಖಲೆ ವಿಚಾರಣೆ ವೇಳೆ ಹೇಳಿದ್ದರು
ದೆಹಲಿ: ತೃಣಮೂಲ ಕಾಂಗ್ರೆಸ್ (TMC) ವಕ್ತಾರ ಸಾಕೇತ್ ಗೋಖಲೆ (Saket Gokhale) ಸಮಾಜಸೇವೆಗಾಗಿ ಕ್ರೌಡ್‌ಫಂಡಿಂಗ್ ಮೂಲಕ ಸಂಗ್ರಹಿಸಲಾದ ₹ 1.07 ಕೋಟಿಗೂ ಹೆಚ್ಚು ಹಣವನ್ನು ಮೋಜು, ಊಟ ಮತ್ತು ಇತರ ವೈಯಕ್ತಿಕ ಕಾರ್ಯಗಳಿಗೆ ಖರ್ಚು ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಆರೋಪಿಸಿದೆ. ಈ ಹಣದಲ್ಲಿ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರ ಆಪ್ತರ ₹ 23 ಲಕ್ಷಕ್ಕೂ ಹೆಚ್ಚು ನಗದು ಸೇರಿದೆ ಎಂದು ಇಡಿ ಹೇಳಿದೆ.ಹಣ ದುರುಪಯೋಗದ ಬಗ್ಗೆ ತನಿಖೆ ನಡೆಸುತ್ತಿರುವ ಸಂಸ್ಥೆ ಬುಧವಾರ ಗುಜರಾತ್ ನ್ಯಾಯಾಲಯದಲ್ಲಿ ಈ ರೀತಿ ಹೇಳಿದೆ. ಕ್ರೌಡ್‌ಫಂಡಿಂಗ್ ಉಪಕ್ರಮದಲ್ಲಿ ಆಪಾದಿತ ಅಕ್ರಮಗಳಿಗೆ ಸಂಬಂಧಿಸಿದಂತೆ ಡಿಸೆಂಬರ್‌ನಲ್ಲಿ ಮೂರು ದಿನಗಳಲ್ಲಿ ಎರಡು ಬಾರಿ ಅವರನ್ನು ಬಂಧಿಸಿದ ಗುಜರಾತ್ ಪೊಲೀಸರು ಗೋಖಲೆಯನ್ನು ಜೈಲಿನಲ್ಲಿ ಇರಿಸಿದ್ದರು. ವಿಶೇಷ ನ್ಯಾಯಾಲಯ ಅವರನ್ನು ಜನವರಿ 31ರವರೆಗೆ ಇಡಿ ವಶಕ್ಕೆ ನೀಡಿದೆ.
ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯು ರಾಹುಲ್ ಗಾಂಧಿ ಅವರ ಸಹಾಯಕ ಅಲಂಕಾರ್ ಸವಾಯಿ ಅವರನ್ನು ಕರೆಸಿದೆ ಎಂದು ಮೂಲಗಳು ತಿಳಿಸಿವೆ. ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಿದ್ದಕ್ಕಾಗಿ ಅಲಂಕಾರ್ ಸವಾಯಿ ₹ 23.54 ಲಕ್ಷ ನಗದು ಪಡೆದಿದ್ದಾಗಿ ಸಾಕೇತ್ ಗೋಖಲೆ ವಿಚಾರಣೆ ವೇಳೆ ಹೇಳಿದ್ದರು. 2019-2022 ರ ನಡುವೆ, ಅವರು ಕ್ರೌಡ್‌ಫಂಡಿಂಗ್ ಮೂಲಕ ₹ 1.07 ಕೋಟಿ ಸಂಗ್ರಹಿಸಿದ್ದಾರೆ, ಅದನ್ನು ಅವರು ವೈಯಕ್ತಿಕ ವೆಚ್ಚಗಳಿಗಾಗಿ ಖರ್ಚು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಅವರು ಭಾರತ್ ಜೋಡೋ ಯಾತ್ರೆಯಲ್ಲಿರುವ ಕಾರಣ ಅಲಂಕಾರ್ ಸವಾಯಿ ಏಜೆನ್ಸಿಯ ಮುಂದೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ್ದಾರೆ.
ಮಾಜಿ ಬ್ಯಾಂಕರ್, ರಾಹುಲ್ ಗಾಂಧಿಯವರ ನಿಕಟ ಸಹಾಯಕ ಮತ್ತು ಅವರ ಸಂಶೋಧನಾ ತಂಡದ ಮುಖ್ಯಸ್ಥರಾಗಿದ್ದಾರೆ ಸವಾಯಿ. ಅಲಂಕಾರ್ ಸವಾಯಿ ಅವರಿಗೆ ನಗದು ರೂಪದಲ್ಲಿ ಏಕೆ ಪಾವತಿಸಿದ್ದಾರೆ ಎಂದು ಕೇಳಿದಾಗ “ಈ ಪ್ರಶ್ನೆಗೆ ಅಲಂಕಾರ್ ಸವಾಯಿ ಮಾತ್ರ ಉತ್ತರಿಸಬಹುದು” ಗೋಖಲೆ ಹೇಳಿರುವುದಾಗಿ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಗೋಖಲೆ ಅವರು ಜೈಂಟ್‌ಟ್ರೀಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿಯ ಮೂಲಕ ದೂರುದಾರರಿಂದ ಮತ್ತು ಇತರ ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸುವ ಮೂಲಕ ‘OurDemocracy.in’ ಎಂಬ ಸಂಸ್ಥೆಯ ಹೆಸರಿನಲ್ಲಿ ನಕಲಿ ಎಲೆಕ್ಟ್ರಾನಿಕ್ ದಾಖಲೆಯನ್ನು ಸಿದ್ಧಪಡಿಸಿದ್ದಾರೆ ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ಹಣವನ್ನು “ಊಹಾತ್ಮಕ ಷೇರು ವ್ಯಾಪಾರ, ಮೋಜು ಮತ್ತು ಊಟ ಮತ್ತು ಇತರ ವೈಯಕ್ತಿಕ ವೆಚ್ಚಗಳ ಮೇಲೆ ದುಂದುವೆಚ್ಚ ಮಾಡಲಾಗಿದೆ” ಎಂದು ಇಡಿ ಹೇಳಿದೆ.
ಅವರು ಹಣವನ್ನು ವೈಯಕ್ತಿಕ ವೆಚ್ಚಗಳಿಗೆ ಬಳಸಿದ್ದಾರೆ ಎಂದು ನಿರಾಕರಿಸಿದ ಶ ಗೋಖಲೆ ಅವರು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದೇನೆ, ಆದ್ದರಿಂದ ಅವರು ಹೆಚ್ಚುವರಿ ಹಣವನ್ನು ಸಂಗ್ರಹಿಸಬೇಕಾಗಿಲ್ಲ ಎಂದಿದ್ದಾರೆ. ಗೋಖಲೆ ಅವರು “ಸಹಕಾರ ನೀಡುತ್ತಿಲ್ಲ” ಎಂದು ಸಂಸ್ಥೆ ನ್ಯಾಯಾಲಯಕ್ಕೆ ತಿಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ