AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

iNCOVACC: ಭಾರತ್ ಬಯೋಟೆಕ್‌ ತಯಾರಿಸಿದ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ಬಿಡುಗಡೆ

ಭಾರತದಲ್ಲೇ ತಯಾರಿಸಲಾದ ಭಾರತ್ ಬಯೋಟೆಕ್‌ನ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ( iNCOVACC) ಬಿಡುಗಡೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ

iNCOVACC: ಭಾರತ್ ಬಯೋಟೆಕ್‌ ತಯಾರಿಸಿದ ಮೂಗಿನ ಮೂಲಕ ಹಾಕುವ ಕೋವಿಡ್ ಲಸಿಕೆ ಇನ್ಕೋವ್ಯಾಕ್ ಬಿಡುಗಡೆ
ಕೋವಿಡ್ ಇಂಟ್ರಾನಾಸಲ್ ಲಸಿಕೆ ಬಿಡುಗಡೆ ಮಾಡಿದ ಮನ್ಸುಖ್ ಮಾಂಡವಿಯಾ
TV9 Web
| Edited By: |

Updated on:Jan 26, 2023 | 4:23 PM

Share

ಕೇಂದ್ರ ಆರೋಗ್ಯ ಸಚಿವ ಡಾ ಮನ್ಸುಖ್ ಮಾಂಡವಿಯಾ (Mansukh Mandaviya) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಇಂದು (ಗುರುವಾರ) ವಿಶ್ವದ ಮೊದಲ ಕೋವಿಡ್ ಇಂಟ್ರಾನಾಸಲ್ ಲಸಿಕೆ (ಮೂಗಿನ ಮೂಲಕ ಹಾಕುವ ಲಸಿಕೆ) ಇನ್ಕೋವ್ಯಾಕ್ ( iNCOVACC) ಬಿಡುಗಡೆ ಮಾಡಿದರು. ಭಾರತದ ಭಾರತ್ ಬಯೋಟೆಕ್ (Bharat Biotech) ಅಭಿವೃದ್ಧಿಪಡಿಸಿರುವ ಈ ಲಸಿಕೆ ಪ್ರತಿ ಡೋಸ್‌ಗೆ ₹ 325ಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಇದರ ದರ ₹ 800 ಆಗಿದೆ. ಭಾರತ್ ಬಯೋಟೆಕ್ ಡಿಸೆಂಬರ್ 2022 ರಲ್ಲಿ, ಪ್ರಾಥಮಿಕ 2-ಡೋಸ್ ಶೆಡ್ಯೂಲ್ ಮತ್ತು ಭಿನ್ನಜಾತಿಯ ಬೂಸ್ಟರ್ ಡೋಸ್‌ಗೆ ಅನುಮೋದನೆಯನ್ನು ಪಡೆದುಕೊಂಡಿದೆ. ಅದಕ್ಕೂ ಮೊದಲು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಸಂದರ್ಭಗಳಲ್ಲಿ ಇಂಟ್ರಾನಾಸಲ್ ಲಸಿಕೆಯ ನಿರ್ಬಂಧಿತ ಬಳಕೆಯನ್ನು ಅನುಮೋದಿಸಿತ್ತು.

ಲಸಿಕೆಯ ಎರಡು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ನೀಡಬೇಕು. ಬೂಸ್ಟರ್ ಡೋಸ್ ತೆಗೆದುಕೊಂಡವರಿಗೆ ಮೂಗಿನ ಲಸಿಕೆಯನ್ನು ನೀಡಲಾಗುವುದಿಲ್ಲ ಎಂದು ದೇಶದ ಲಸಿಕೆ ಕಾರ್ಯಪಡೆಯ ಮುಖ್ಯಸ್ಥರು ಕಳೆದ ತಿಂಗಳು ಎನ್​​ಡಿಟಿವಿಗೆ ತಿಳಿಸಿದ್ದಾರೆ.

ಲಸಿಕೆ ತಯಾರಕ ಭಾರತ್ ಬಯೋಟೆಕ್ ಪ್ರಕಾರ, CoWin ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಇಂಟ್ರಾನಾಸಲ್ ಲಸಿಕೆ ಡೋಸ್‌ಗೆ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬಹುದು. iNCOVACC ಅನ್ನು ವಾಷಿಂಗ್ಟನ್ ಯೂನಿವರ್ಸಿಟಿ, ಸೇಂಟ್ ಲೂಯಿಸ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಪೂರ್ವಭಾವಿ ಸುರಕ್ಷತಾ ಮೌಲ್ಯಮಾಪನಕ್ಕೆ ಸಂಬಂಧಿಸಿದ ಉತ್ಪನ್ನ ಅಭಿವೃದ್ಧಿ, ಬೃಹತ್-ಪ್ರಮಾಣದ ಉತ್ಪಾದನಾ ಪ್ರಮಾಣ, ಸೂತ್ರೀಕರಣ ಮತ್ತು ವಿತರಣಾ ಸಾಧನ ಅಭಿವೃದ್ಧಿ, ಮಾನವ ಕ್ಲಿನಿಕಲ್ ಪ್ರಯೋಗಗಳನ್ನು  ಭಾರತ್ ಬಯೋಟೆಕ್ ನಡೆಸಿದೆ.

ಇದನ್ನೂ ಓದಿ: Bengaluru Metro: ಬೆಂಗಳೂರಿನಲ್ಲಿ ಶೀಘ್ರ ಕಾಮನ್ ಮೊಬಿಲಿಟಿ ಕಾರ್ಡ್; ಮೆಟ್ರೋ ನಿಗಮ ಘೋಷಣೆ

ಉತ್ಪನ್ನ ಅಭಿವೃದ್ಧಿ ಮತ್ತು ಕ್ಲಿನಿಕಲ್ ಪ್ರಯೋಗಗಳಿಗೆ ಭಾರತ ಸರ್ಕಾರವು ಜೈವಿಕ ತಂತ್ರಜ್ಞಾನ ಇಲಾಖೆಯ ಕೋವಿಡ್ ಸುರಕ್ಷಾ ಕಾರ್ಯಕ್ರಮದ ಮೂಲಕ ಭಾಗಶಃ ಹಣವನ್ನು ನೀಡಿತು.

Published On - 3:37 pm, Thu, 26 January 23