Bengaluru Metro: ಬೆಂಗಳೂರಿನಲ್ಲಿ ಶೀಘ್ರ ಕಾಮನ್ ಮೊಬಿಲಿಟಿ ಕಾರ್ಡ್; ಮೆಟ್ರೋ ನಿಗಮ ಘೋಷಣೆ

TV9kannada Web Team

TV9kannada Web Team | Edited By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2023 | 2:34 PM

ಮುಂಬೈ ಮೆಟ್ರೋ ನಿಗಮವು ಕಾಮನ್ ಮೊಬಿಲಿಟಿ ಕಾರ್ಡ್​ಗಳನ್ನು ಈ ತಿಂಗಳ ಆರಂಭದಲ್ಲಿ ಪರಿಚಯಿಸಿತ್ತು. ಆದರೆ ಬೆಂಗಳೂರಿನಲ್ಲಿ ಈವರೆಗೂ ಇಂಥ ಕಾರ್ಡ್​ಗಳನ್ನು ಪರಿಚಯಿಸಲು ಸಾಧ್ಯವಾಗಿಲ್ಲ.

Bengaluru Metro: ಬೆಂಗಳೂರಿನಲ್ಲಿ ಶೀಘ್ರ ಕಾಮನ್ ಮೊಬಿಲಿಟಿ ಕಾರ್ಡ್; ಮೆಟ್ರೋ ನಿಗಮ ಘೋಷಣೆ
ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರದಲ್ಲಿ ಶೀಘ್ರದಲ್ಲಿಯೇ ರಾಷ್ಟ್ರೀಯ ಸಾಮಾನ್ಯ ಸಾರಿಗೆ ಕಾರ್ಡ್ (National Common Mobility Card – NCMC) ಪರಿಚಯಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ನಿಗಮವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರವು ಆರಂಭಿಸಿರುವ ‘ಒಂದು ದೇಶ ಒಂದು ಕಾರ್ಡ್​’ ಯೋಜನೆಯ ಭಾಗವಾಗಿ ಹೊಸ ಕಾರ್ಡ್​ಗಳನ್ನು ಪರಿಚಯಿಸಲಾಗುವುದು ಎಂದು ಮೆಟ್ರೋ ನಿಗಮ (BMRCL) ಹೇಳಿದೆ. ಈ ಸಾರಿಗೆ ಕಾರ್ಡ್​ಗಳನ್ನು ವಿವಿಧ ರಾಜ್ಯಗಳ ಸಾರಿಗೆ ನಿಗಮಗಳಲ್ಲಿ ಹಾಗೂ ಮೆಟ್ರೋ ಮತ್ತಿತರ ಸಾರಿಗೆ ವ್ಯವಸ್ಥೆಗಳಲ್ಲಿ ಈ ಕಾರ್ಡ್​ಗಳನ್ನು ಬಳಸಬಹುದು. ಬೆಂಗಳೂರಿನಲ್ಲಿ 2023ರಿಂದ ಈ ಕಾರ್ಡ್​ಗಳನ್ನು ಜಾರಿಗೊಳಿಸಲಾಗುವುದು ಎಂದು ಬುಧವಾರ ನಿಗಮವು ಹೇಳಿದೆ.

ಕಳೆದ ಡಿಸೆಂಬರ್ 2022ರಲ್ಲಿ ಮೆಟ್ರೋ ರೈಲುಗಳಲ್ಲಿ 1.69 ಕೋಟಿ ಪ್ರಯಾಣಿಕರು ಸಂಚರಿಸಿದ್ದರು. ನಿಗಮವು ₹ 40.30 ಕೋಟಿ ಆದಾಯ ಪಡೆದಿತ್ತು. ಹೊಸ ವರ್ಷಾಚರಣೆಯ ದಿನ (ಡಿ 31-ಜ1) ಅತಿಹೆಚ್ಚು ಪ್ರಯಾಣಿಕರು (6.41 ಲಕ್ಷ) ಮೆಟ್ರೋ ರೈಲುಗಳಲ್ಲಿ ಸಂಚರಿಸಿದ್ದರು.

ತಾಜಾ ಸುದ್ದಿ

ಮುಂಬೈ ಮೆಟ್ರೋದಲ್ಲಿ ಆರಂಭ

ಮುಂಬೈ ಮೆಟ್ರೋ ನಿಗಮವು ಕಾಮನ್ ಮೊಬಿಲಿಟಿ ಕಾರ್ಡ್​ಗಳನ್ನು ಈ ತಿಂಗಳ ಆರಂಭದಲ್ಲಿ ಪರಿಚಯಿಸಿತ್ತು. ಆದರೆ ಬೆಂಗಳೂರಿನಲ್ಲಿ ಈ ಯೋಜನೆ ಆರಂಭವಾಗಲಿದೆ ಎಂಬ ಮಾತುಗಳು ಬಹಳ ಹಿಂದಿನಿಂದ ಕೇಳಿಬರುತ್ತಿತ್ತು. ಈ ಯೋಜನೆ ಆರಂಭವಾದರೆ ಒಂದೇ ಕಾರ್ಡ್ ಅನ್ನು ಬಿಎಂಟಿಸಿ ಬಸ್ ಹಾಗೂ ಮೆಟ್ರೋ ರೈಲಿಗೆ ಬಳಸಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 2019ರಲ್ಲಿ ಈ ಕಾರ್ಡ್​ಗೆ ಚಾಲನೆ ನೀಡಿದ್ದರು. ಯೋಜನೆಯ ಅನುಷ್ಠಾನಕ್ಕೆ ಖಾಸಗಿ ಬ್ಯಾಂಕ್ ಒಂದಕ್ಕೆ ಬೆಂಗಳೂರು ಮೆಟ್ರೋ ನಿಗಮವು ಹೊಣೆಗಾರಿಕೆ ನೀಡಿತ್ತು. ಜೂನ್ 2020ರಂದು ಈ ಯೋಜನೆ ಆರಂಭಕ್ಕೆ ಮೊದಲ ಗಡುವಾಗಿತ್ತು. ಆದರೆ ಗಡುವು ಮುಗಿದು ಎರಡೂವರೆ ವರ್ಷಗಳು ಉರುಳಿದರೂ ಸಾಮಾನ್ಯ ಸಾರಿಗೆ ಕಾರ್ಡ್​ಗಳನ್ನು ಪರಿಚಯಿಸಲು ಸಾಧ್ಯವಾಗಿಲ್ಲ.

ಇದನ್ನೂ ಓದಿ: Lalbagh Flower Show: ಲಾಲ್​ಬಾಗ್​ ಮೆಟ್ರೋ ನಿಲ್ದಾಣದಿಂದ ಕೇವಲ 30 ರೂಗಳಲ್ಲಿ ಎಲ್ಲಿಗೆ ಬೇಕಾದ್ರು ಪ್ರಯಾಣಿಸಬಹುದು

ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada