Munivenkatappa: ತಮಟೆ ವಾದಕ ಮುನಿವೆಂಕಟಪ್ಪಗೆ ಪದ್ಮಶ್ರೀ ಘೋಷಣೆ: ರಾಜ್ಯ ಸರ್ಕಾರದಿಂದ ಬಿ.ಡಿ.ಎ ನಿವೇಶನ ರದ್ದು!
Padma shri: ದೇಶದ ಅತ್ಯನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪಡೆದ ತಮಟೆ ಕಲಾವಿದ ಮುನಿವೆಂಕಟಪ್ಪ ಅವರ ಬಿ.ಡಿ.ಎನ ಜೆ-ಕ್ಯಾಟಗರಿ ನಿವೇಶನವನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.
ಚಿಕ್ಕಬಳ್ಳಾಪುರ: ದೇಶದ ಅತ್ಯನ್ನತ ನಾಗರಿಕ ಪ್ರಶಸ್ತಿಗಳಿಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು (Padma Shri ) ಕೇಂದ್ರ ಸರ್ಕಾರ ರಾಜ್ಯದ ಬಡ ದಲಿತ ಖ್ಯಾತ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ (Munivenkatappa) ಘೋಷಣೆ ಮಾಡಿದೆ. ಆದರೆ ರಾಜ್ಯ ಸರ್ಕಾರದ ಬಿ.ಡಿ.ಎ, ಮುನಿವೆಂಕಟಪ್ಪಗೆ ಮಂಜೂರಾಗಿದ್ದ ಜೆ-ಕ್ಯಾಟಗರಿ ನಿವೇಶನವನ್ನು ರದ್ದು ಮಾಡಿದೆ.
ಮುನಿವೆಂಕಟಪ್ಪಗೆ ಬಿ.ಡಿ.ಎ ನಿವೇಶನ ಮಂಜೂರಾಗಿತ್ತು
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿ ಗ್ರಾಮದ ನಿವಾಸಿ ಮುನಿವೆಂಕಟಪ್ಪಗೆ ರಾಜ್ಯ ಸರ್ಕಾರ 26/2/2016ರಲ್ಲಿ ಕೆಂಪೇಗೌಡ ಬಡಾವಣೆಯ ಬಿ4 ಬ್ಲಾಕ್ನ ಎ ಸೇಕ್ಟರ್ನಲ್ಲಿ 6 ಇನ್ ಟು 9 ಮೀಟರ್ನ (ಇ.ಡ್ಲೂ.ಎಸ್) ಜೆ-ಕ್ಯಾಟಗರಿಯ ನಿವೇಶನ ಸಂಖ್ಯೆ 70ನ್ನು ಮಂಜೂರು ಮಾಡಿತ್ತು. ಹಕ್ಕು ಪತ್ರನ್ನೂ ಕೊಡಲಾಗಿತ್ತು.
ಇದನ್ನೂ ಓದಿ: ಪ್ರಖ್ಯಾತ ತಮಟೆ ವಾದ್ಯ ಕಲಾವಿದ ಬಡ ಮುನಿವೆಂಕಟಪ್ಪಗೆ ಪದ್ಮಶ್ರೀ ಪ್ರಶಸ್ತಿ; ಇಲ್ಲಿದೆ ಯಶೋಗಾಥೆ
ಮುನಿವೆಂಕಟಪ್ಪಗೆ ಮಂಜೂರಾಗಿದ್ದ ಬಿ.ಡಿ.ಎ ನಿವೇಶನ ರದ್ದು
26/2/2016ರಲ್ಲಿ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ ಜೆ.ಕ್ಯಾಟಗರಿಯ ನಿವೇಶನ ಮಂಜೂರಾಗಿತ್ತು. ನಿವೇಶನ ಮಂಜೂರಾದ ಅವಧಿಯಿಂದ ಮೂರು ವರ್ಷಗಳ ಅವಧಿಯಲ್ಲಿ ಆ ನಿವೇಶನದ ಮೌಲ್ಯ 5 ಲಕ್ಷ ರೂಪಾಯಿಯನ್ನು ಬಿಡಿ.ಎಗೆ ಸಂದಾಯ ಮಾಡಿ ನಿವೇಶನವನ್ನು ನೊಂದಣಿ ಮಾಡಿಕೊಳ್ಳಬೇಕಿತ್ತು. ಆದರೆ ಬಡಪಾಯಿ ಕಲಾವಿದ ಮುನಿವೆಂಕಟಪ್ಪ ಬಳಿ ಅಷ್ಟೊಂದು ಹಣ ಇರಲಿಲ್ಲ. ಇದರಿಂದ ನಿಗದಿತ ಅವಧಿಯಲ್ಲಿ ಮುನಿವೆಂಕಟಪ್ಪ ಹಣ ಸಂದಾಯ ಮಾಡದೆ ತಡವಾಗಿ ಬ್ಯಾಂಕ್ನಲ್ಲಿ ನಿವೇಶನದ ಮೌಲ್ಯದ ಹಣವನ್ನು ಸಂದಾಯ ಮಾಡಿದ್ದರು. ಇದರಿಂದ ಬಿಡಿಎ ನಿಯಮಾವಳಿ 1984ರ ನಿಯಮ 13(1)ರ ಪ್ರಕಾರ ಬಿ.ಡಿ.ಎ ಉಪಕಾರ್ಯದರ್ಶಿ 3 ರವರು 16/2/2019ರಂದು ಮುನಿವೆಂಕಟಪ್ಪನವರಿಗೆ ನೊಟೀಸ್ ಜಾರಿ ಮಾಡಿದರು. ನಂತರ 25/12/2019ಕ್ಕೆ ಅವಧಿ ಮುಕ್ತಾಯವಾಗಿದೆ ಎಂದು ಬಿ.ಡಿ.ಎ ಆಯುಕ್ತರ ಆದೇಶದ ಮೇರೆಗೆ ಬಿ.ಡಿ.ಎ ಕಾರ್ಯದರ್ಶಿ 3 ರವರು ಮುನಿವೆಂಕಟಪ್ಪನವರಿಗೆ ಮಂಜೂರಾಗಿದ್ದ ಬಿಡಿಎ ಜೆ-ಕ್ಯಾಟಗರಿಯ ನಿವೇಶನವನ್ನು 05/01/2023ರಂದು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅಂತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಆಗಿರುವ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಟಿವಿ9 ಬಳಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
ವರದಿ-ಭೀಮಪ್ಪ ಪಾಟೀಲ ಟಿವಿ9 ಚಿಕ್ಕಬಳ್ಳಾಫುರ
Published On - 7:31 am, Thu, 26 January 23