AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Republic Day 2023: ರಾಜಸ್ಥಾನಿ ಪೇಟ, ಕೆನೆ ಬಣ್ಣದ ಕುರ್ತಾ ಮತ್ತು ಬಿಳಿ ಶಾಲು, ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಮೋದಿಯ ಹೊಸ ಲುಕ್

74 ನೇ ಗಣರಾಜ್ಯೋತ್ಸವ(Republic Day) ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವೈವಿಧ್ಯತೆಯನ್ನು ಸಂಕೇತಿಸುವ ಬಹುವರ್ಣದ ರಾಜಸ್ಥಾನಿ ಪೇಟವನ್ನು ಧರಿಸಿದ್ದರು.

Republic Day 2023: ರಾಜಸ್ಥಾನಿ ಪೇಟ, ಕೆನೆ ಬಣ್ಣದ ಕುರ್ತಾ ಮತ್ತು ಬಿಳಿ ಶಾಲು, ಗಣರಾಜ್ಯೋತ್ಸವದಲ್ಲಿ ಪ್ರಧಾನಿ ಮೋದಿಯ ಹೊಸ ಲುಕ್
ನರೇಂದ್ರ ಮೋದಿ
ನಯನಾ ರಾಜೀವ್
|

Updated on: Jan 26, 2023 | 11:07 AM

Share

74 ನೇ ಗಣರಾಜ್ಯೋತ್ಸವ(Republic Day) ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ವೈವಿಧ್ಯತೆಯನ್ನು ಸಂಕೇತಿಸುವ ಬಹುವರ್ಣದ ರಾಜಸ್ಥಾನಿ ಪೇಟವನ್ನು ಧರಿಸಿದ್ದರು. ಗಣರಾಜ್ಯೋತ್ಸವ ಪರೇಡ್‌ಗೂ ಮುನ್ನ ಪ್ರಧಾನಿ ನರೇಂದ್ರ  ಮೋದಿ ಅವರು ಯುದ್ಧ ಸ್ಮಾರಕವನ್ನು ತಲುಪಿದಾಗ ಪ್ರಧಾನಿ ಮೋದಿಯವರ ಈ ವರ್ಷದ ಉಡುಗೆಯ ಮೊದಲ ನೋಟವು ಎಲ್ಲರ ಗಮನ ಸೆಳೆಯಿತು.

ಬಿಳಿ ಕುರ್ತಾ ಮತ್ತು ಕಪ್ಪು ಕೋಟ್ ಮತ್ತು ಪ್ಯಾಂಟ್ ಧರಿಸಿರುವ ಪ್ರಧಾನಿ ಮೋದಿ ಬಿಳಿ ಸ್ಟೋಲ್ ಧರಿಸಿದ್ದಾರೆ. ಕಪ್ಪು ಮತ್ತು ಬಿಳಿ ಉಡುಗೆ ಜತೆ ಬಹುವರ್ಣದ ಪೇಟವು ಅವರ ಲುಕ್​ ಅನ್ನು ಹೆಚ್ಚಿಸಿತ್ತು. ಕಳೆದ ವರ್ಷ, ಉತ್ತರಾಖಂಡ್‌ನಿಂದ ಬ್ರಹ್ಮಕಮಲ್ ಕ್ಯಾಪ್ ಧರಿಸಿ ಮಣಿಪುರದಿಂದ ಲಿರಂ ಫೈ ತೊಟ್ಟಿದ್ದರು, ಪ್ರಧಾನಿ ಮೋದಿ ಅವರ ಉಡುಗೆಯು ಉತ್ತರಾಖಂಡ ಮತ್ತು ಮಣಿಪುರದ ವಿಶಿಷ್ಟ ಸ್ಪರ್ಶವನ್ನು ಹೊಂದಿತ್ತು.

ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವದ ಎರಡು ಸಂದರ್ಭಗಳಲ್ಲಿ ಪಿಎಂ ಮೋದಿಯವರ ಉಡುಗೆ ಆಯ್ಕೆಯ ಹೆಚ್ಚಿನ ಕುತೂಹಲ ಮೂಡುತ್ತದೆ. ಪಿಎಂ ಮೋದಿ ಅವರು ನಿರ್ದಿಷ್ಟ ಬುಡಕಟ್ಟು ಅಥವಾ ಪ್ರದೇಶದ ಸಾಂಪ್ರದಾಯಿಕ ಬಟ್ಟೆಗಳನ್ನು ಇತರ ಸಂದರ್ಭಗಳಲ್ಲಿಯೂ ಧರಿಸುತ್ತಾರೆ.

2020ರಲ್ಲಿ ಕೇಸರಿ ಬಂಧೇಜ್ ಕ್ಯಾಪ್ ಧರಿಸಿದ್ದರು 2021 ರಲ್ಲಿ 72 ನೇ ಗಣರಾಜ್ಯೋತ್ಸವದಂದು, ಪ್ರಧಾನಿ ಮೋದಿ ಅವರು ಕೆಂಪು ಟೈಡ್ ಕ್ಯಾಪ್ ಅನ್ನು ಧರಿಸಿದ್ದರು, ಇದು ಜಾಮ್‌ನಗರದ ರಾಜಮನೆತನದಿಂದ ಉಡುಗೊರೆಯಾಗಿತ್ತು. 2020 ರಲ್ಲಿ, ಪ್ರಧಾನಿ ಮೋದಿ ಕೇಸರಿ ಬಂಧೇಜ್ ಕ್ಯಾಪ್ ಧರಿಸಿದ್ದರು. ನರೇಂದ್ರ ಮೋದಿ ಯಾವಾಗಲೂ ವಿಭಿನ್ನವಾದ ಬಟ್ಟೆಗಳನ್ನು ಧರಿಸುತ್ತಾರೆ.

ಸ್ವಾತಂತ್ರ್ಯ ದಿನಾಚರಣೆಯ ಪೇಟದಲ್ಲಿ ತ್ರಿವರ್ಣ ಧ್ವಜದ ನೋಟವಿತ್ತು 2022 ರ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ಪೇಟದಲ್ಲಿ ತ್ರಿವರ್ಣ ಧ್ವಜದ ಒಂದು ನೋಟ ಕಂಡುಬಂದಿತ್ತು. ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಈ ಪೇಟ ಆಕರ್ಷಣೆಯ ಕೇಂದ್ರವಾಗಿತ್ತು.

ಈ ಬಾರಿ ಅವರು ವಿಶೇಷ ಬಹುವರ್ಣದ ರಾಜಸ್ಥಾನಿ ಪೇಟದೊಂದಿಗೆ ಜನರ ಮನ ಗೆದ್ದಿದ್ದಾರೆ. ಇದಕ್ಕೂ ಮುನ್ನ 2022ರ ಗಣರಾಜ್ಯೋತ್ಸವದಂದು ಅವರು ಉತ್ತರಾಖಂಡದ ಬ್ರಹ್ಮಕಮಲ ಟೋಪಿಯನ್ನು ಧರಿಸಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!