Republic Day 2023: ವಿಶ್ವಾದ್ಯಂತ ಭಾರತೀಯ ರಾಯಭಾರ ಕಚೇರಿಗಳು ಗಣರಾಜ್ಯೋತ್ಸವ ಆಚರಿಸಿದ್ದು ಹೀಗೆ
ಭಾರತವು ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ, ಈ ಸಂದರ್ಭದಲ್ಲಿ ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಕೂಡ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿವೆ.
ಭಾರತವು ಇಂದು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ, ಈ ಸಂದರ್ಭದಲ್ಲಿ ವಿದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳು ಕೂಡ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿವೆ. ಪ್ರಪಂಚದಾದ್ಯಂತದ ಭಾರತೀಯ ರಾಯಭಾರ ಕಚೇರಿಗಳು ಭಾರತದ 74 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿವೆ. ಕೆಲವರು ತಮ್ಮ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಮಾರಂಭಗಳನ್ನು ಆಯೋಜಿಸಿವೆ.
ಬರ್ಲಿನ್ನಲ್ಲಿರುವ ರಾಯಭಾರ ಕಚೇರಿಯು ಗುರುವಾರ ಟ್ವೀಟ್ ಮಾಡಿದ್ದು, ಧ್ವಜಾರೋಹಣ ಕಾರ್ಯಕ್ರಮಕ್ಕೆ ಭಾರತೀಯರನ್ನು ಆಹ್ವಾನಿಸಿತ್ತು. ಇನ್ನು ಬರ್ಲಿನ್ನಲ್ಲಿರುವ ರಾಯಭಾರ ಕಚೇರಿಯುವ ಕೂಡ 74ನೇ ಗಣರಾಜ್ಯೋತ್ಸವವನನ್ನು ಆಚರಿಸುತ್ತಿದೆ. ಭಾರತೀಯ ಸಮುದಾಯದ ಎಲ್ಲಾ ಸದಸ್ಯರು ಮತ್ತು ಭಾರತದ ಸ್ನೇಹಿತರನ್ನು ಆತ್ಮೀಯವಾಗಿ ಆಹ್ವಾನಿಸುತ್ತದೆ ಎಂದು ಟ್ವೀಟ್ ಮಾಡಿದೆ.
ಭಾರತದಲ್ಲಿನ US ರಾಯಭಾರ ಕಚೇರಿಯು ಖ್ಯಾತ ಗಾಯಕರು ಭಾರತದ ರಾಷ್ಟ್ರೀಯ ಗೀತೆಯನ್ನು ಹೇಳುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈಜಿಪ್ಟ್‌ನಲ್ಲಿ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಗಣರಾಜ್ಯೋತ್ಸವದ ಪರೇಡ್‌ನ ಮುಖ್ಯ ಅತಿಥಿಯಾಗಿ ಭಾರತಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲೇ ಈಜಿಪ್ಟ್‌ನಲ್ಲಿ ಗಣರಾಜ್ಯೋತ್ಸವ ಆಚರಿಸುವುದಾಗಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Happy 74th Republic Day, India! We are celebrating #RepublicDay with a rendition of ?? national song Vande Mataram! US Officers Raghavan (flute) & Stephanie (guitar) team up with @pavithra_chari, singer featured on a 2023 #GRAMMYs nominated album & a @StateDept @1beatmusic alum! pic.twitter.com/sUUU5tvTST
— U.S. Embassy India (@USAndIndia) January 26, 2023
ಭಾರತದ 74 ನೇ ಗಣರಾಜ್ಯೋತ್ಸವವನ್ನು 26 ಜನವರಿ 2023 ರಂದು 0930 ಗಂಟೆಗೆ ಭಾರತದ ರಾಯಭಾರ ಕಚೇರಿ ಆವರಣದಲ್ಲಿ ಆಚರಿಸಲಾಗುತ್ತದೆ ಎಂದು ಅದು ಟ್ವೀಟ್ ಮಾಡಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ಹೈಕಮಿಷನ್ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತದ ಗಣರಾಜ್ಯೋತ್ಸವವನ್ನು ಆಚರಿಸಲು ಸ್ಥಳೀಯ ಬ್ಯಾಂಡ್‌ನೊಂದಿಗೆ ಸಂಗೀತ ಕಚೇರಿಯನ್ನು ಆಯೋಜಿಸಿದೆ. ಜೊತೆಗೆ ಎರಡು ರಾಷ್ಟ್ರಗಳ ನಡುವಿನ ಉತ್ತಮ ಬಾಂಧವ್ಯವನ್ನು ಸಾರಿತು.
Embassy of India, Baghdad decks up in shades of Tricolor ahead of 74th Republic Day.@MEAIndia @republicday2023 @AmritMahotsav pic.twitter.com/pWYbSjpyHD
— India In Iraq (@EI_Baghdad) January 25, 2023
“#AzadiKaAmritMahotsav ಅಂಗವಾಗಿ, ರಾಯಭಾರ ಕಚೇರಿಯು ಇಂದು ಸಂಗೀತ ಕಛೇರಿ, ಸಂಗೀತ ಸುಕೂನ್ ಅನ್ನು ಆಯೋಜಿಸಿದೆ. ಇರಾಕ್‌ನಲ್ಲಿ, ಭಾರತೀಯ ರಾಯಭಾರ ಕಚೇರಿಯು ತ್ರಿವರ್ಣ ಧ್ವಜವನ್ನು ಹಾರಿಸಿದೆ. ಇಸ್ರೇಲ್‌ನಲ್ಲಿ ರಾಜತಾಂತ್ರಿಕರು ಶುಭಾಶಯಗಳನ್ನು ಸಲ್ಲಿಸಿದರು ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಿದರು.
ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯು ಕೆಲವು ಪ್ರಾದೇಶಿಕ ಭಾಷೆಗಳಲ್ಲಿ ನಮ್ಮ ಆತ್ಮೀಯ ಭಾರತೀಯ ಸ್ನೇಹಿತರಿಗೆ ಶುಭ ಹಾರೈಸುವ ಮೂಲಕ ಭಾರತದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯ ಆಚರಣೆಯಲ್ಲಿ ನಾವು ಕೂಡ ಭಾಗಿಯಾಗುತ್ತಿದ್ದೇವೆ ಎಂದು ಟ್ವೀಟ್ ಮಾಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ