Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮಗೂ ಫ್ರಿಡ್ಜ್ ಗತಿ ಬರಬಹುದು’; ಮುಸ್ಲಿಂನನ್ನು ಮದುವೆ ಆಗಿದ್ದಕ್ಕೆ ನಟಿ ಸ್ವರಾ ಭಾಸ್ಕರ್ ವಿರುದ್ಧ ಕಿರಿಕಾಡಿದ ಸಾಧ್ವಿ ಪ್ರಾಚಿ

ಶ್ರದ್ಧಾ ವಾಕರ್ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈಗ ಈ ಪ್ರಕರಣಕ್ಕೂ ಸ್ವರಾ ಭಾಸ್ಕರ್ ಮದುವೆಗೂ ಲಿಂಕ್ ಮಾಡಿದ್ದಾರೆ ಸಾಧ್ವಿ.

‘ನಿಮಗೂ ಫ್ರಿಡ್ಜ್ ಗತಿ ಬರಬಹುದು’; ಮುಸ್ಲಿಂನನ್ನು ಮದುವೆ ಆಗಿದ್ದಕ್ಕೆ ನಟಿ ಸ್ವರಾ ಭಾಸ್ಕರ್ ವಿರುದ್ಧ ಕಿರಿಕಾಡಿದ ಸಾಧ್ವಿ ಪ್ರಾಚಿ
ಸ್ವರಾ ಭಾಸ್ಕರ್​ಗೆ ಸಾಧ್ವಿ ಎಚ್ಚರಿಕೆ
Follow us
ರಾಜೇಶ್ ದುಗ್ಗುಮನೆ
|

Updated on: Feb 22, 2023 | 12:54 PM

ಮದುವೆ ವಿಚಾರ ಹೇಳಿ ನಟಿ ಸ್ವರಾ ಭಾಸ್ಕರ್ (Swara Bhaskar) ಅವರು ಇತ್ತೀಚೆಗೆ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಅವರನ್ನು ಮದುವೆ ಆಗಿರುವುದಾಗಿ ಅವರು ಘೋಷಣೆ ಮಾಡಿದರು. ಹಿಂದೂ ಹುಡುಗಿ ಮುಸ್ಲಿಂನನ್ನು ಮದುವೆ ಆಗಿದ್ದರಿಂದ ಸಹಜವಾಗಿಯೇ ಚರ್ಚೆ ಹುಟ್ಟಿಕೊಂಡಿತ್ತು. ಈಗ ಸ್ವರಾ ಭಾಸ್ಕರ್ ವಿರುದ್ಧ ವಿಶ್ವ ಹಿಂದೂ ಪರಿಷತ್ ನಾಯಕಿ ಸಾಧ್ವಿ ಪ್ರಾಚಿ (Sadhvi Prachi)  ಅವರು ಕಿಡಿಕಾರಿದ್ದಾರೆ. ದೆಹಲಿಯಲ್ಲಿ ಲವರ್​ನ ಕೊಂದು 35 ಪೀಸ್​​ಗಳನ್ನು ಮಾಡಿ ಫ್ರಿಡ್ಜ್​ನಲ್ಲಿ ಇಟ್ಟ ಘಟನೆಯನ್ನು ಸಾಧ್ವಿ ನೆನಪಿಸಿದ್ದಾರೆ. ‘ನಿಮಗೂ ಇದೇ ಗತಿ ಬರಬಹುದು’ ಎಂದು ಸ್ವರಾ ಭಾಸ್ಕರ್​ಗೆ ಎಚ್ಚರಿಸಿದ್ದಾರೆ

ಶ್ರದ್ಧಾ ವಾಕರ್ ಪ್ರಕರಣ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅಫ್ತಾಬ್ ಪೂನಾ​ವಾಲ ತನ್ನ ಲವರ್ ಶ್ರದ್ಧಾ ಅವರ ದೇಹವನ್ನು ಕತ್ತರಿಸಿ 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್​​ನಲ್ಲಿ ಇಟ್ಟಿದ್ದ. ಈ ಪ್ರಕರಣ ಬೆಳಕಿಗೆ ಬಂದ ನಂತರ ಹಲವರಿಗೆ ಆಘಾತ ಆಗಿತ್ತು. ಈಗ ಈ ಪ್ರಕರಣಕ್ಕೂ ಸ್ವರಾ ಭಾಸ್ಕರ್ ಮದುವೆಗೂ ಲಿಂಕ್ ಮಾಡಿದ್ದಾರೆ ಸಾಧ್ವಿ.

‘ಶ್ರದ್ಧಾ ಅವರ ದೇಹವನ್ನು 35 ತುಂಡುಗಳನ್ನಾಗಿ ಮಾಡಿದ ಪ್ರಕರಣದ ಬಗ್ಗೆ ಸ್ವರಾ ಅವರು ಹೆಚ್ಚು ಗಮನವಹಿಸಿಲ್ಲ ಅನಿಸುತ್ತದೆ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಫ್ರಿಡ್ಜ್​ನ ಒಮ್ಮೆ ನೋಡಬೇಕು. ಇದು ಅವರ ವೈಯಕ್ತಿಕ ಆಯ್ಕೆ. ಅದರಿಂದ ನನಗೇನು ಆಗುವುದಿಲ್ಲ. ಆದರೆ, ಶ್ರದ್ಧಾಗೆ ಬಂದ ಗತಿ ಸ್ವರಾಗೂ ಬರಬಹುದು’ ಎಂದಿದ್ದಾರೆ ಸಾಧ್ವಿ.

ಇದನ್ನೂ ಓದಿ
Image
Swara Bhasker: ‘ದಿ ಕಾಶ್ಮೀರ್​ ಫೈಲ್ಸ್​’ ಕೆಟ್ಟ ಸಿನಿಮಾ ಎಂಬ ಹೇಳಿಕೆಗೆ ಸಹಮತ ಸೂಚಿಸಿದ ನಟಿ ಸ್ವರಾ ಭಾಸ್ಕರ್​
Image
Swara Bhaskar: ಸಲ್ಮಾನ್​ ಖಾನ್​ ಬಳಿಕ ನಟಿ ಸ್ವರಾ ಭಾಸ್ಕರ್​ಗೆ ಕೊಲೆ ಬೆದರಿಕೆ; ಸಾವರ್ಕರ್​ ಬಗ್ಗೆ ಮಾತಾಡಿದ್ದಕ್ಕೆ ಆಕ್ರೋಶ
Image
‘ಸಲ್ಮಾನ್​ ಖಾನ್​ಗೆ ತಂಗಿ ಆಗಲು ಯಾರಿಗೂ ಇಷ್ಟವಿಲ್ಲ’; ತೆರೆ ಹಿಂದಿನ ಸತ್ಯ ತೆರೆದಿಟ್ಟ ನಟಿ ಸ್ವರಾ ಭಾಸ್ಕರ್​

‘ಸ್ವರಾ ಅವರು ಈ ಮೊದಲಿನಿಂದಲೂ ಹಿಂದೂ ಧರ್ಮದ ವಿರೋಧಿಯೇ ಆಗಿದ್ದರು. ಬೇರೆ ಧರ್ಮದವರನ್ನು ಅವರು ಮದುವೆ ಆಗುತ್ತಾರೆ ಎಂದು ನನಗೆ ಮೊದಲೇ ಅನಿಸಿತ್ತು. ಅದು ಈಗ ಆಗಿದೆ. ಅವರು ಮುಸ್ಲಿಂನನ್ನು ಮದುವೆ ಆಗಿದ್ದಾರೆ’ ಎಂದು ಸಾಧ್ವಿ ಹೇಳಿದ್ದಾರೆ.

ಇದನ್ನೂ ಓದಿ: Swara Bhaskar: ಸೈಲೆಂಟ್​ ಆಗಿ ಮದುವೆ ಆದ ನಟಿ ಸ್ವರಾ ಭಾಸ್ಕರ್​; ಪತಿ ಫಹಾದ್​ ಅಹ್ಮದ್​ ಜತೆಗಿನ ಫೋಟೋ ವೈರಲ್​

ಫೆ.16ರಂದು ಸ್ವರಾ ಭಾಸ್ಕರ್ ಅವರು ಫಹಾದ್ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡ ವಿಚಾರ ಘೋಷಿಸಿದರು. ಅವರು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ವಿಚಾರದ ಬಗ್ಗೆ ಈಗಲೂ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ‘ಇಸ್ಲಾಂ ಧರ್ಮವನ್ನು ಒಪ್ಪದೆ ಫಹಾದ್​ನ ಮದುವೆ ಆಗಿದ್ದರಿಂದ ಈ ವಿವಾಹ ಮಾನ್ಯ ಅಲ್ಲ ಎಂದು’ ಎಂದು ಮುಸ್ಲಿಂ ಧರ್ಮಗುರುಗಳು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ