ಕೊಹಿಮಾ: ಮುಂಬರುವ ನಾಗಾಲ್ಯಾಂಡ್ (Nagaland) ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Aadmi Party) ಸಾಧ್ಯವಾದಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಅದರ ಈಶಾನ್ಯ ಉಸ್ತುವಾರಿ ರಾಜೇಶ್ ಶರ್ಮಾ (Rajesh Sharma) ಹೇಳಿದ್ದಾರೆ. ಮಾಜಿ ಶಾಸಕ ಆಸು ಕೀಹೋ ಅವರನ್ನು ಎಎಪಿಯ ನಾಗಾಲ್ಯಾಂಡ್ ಘಟಕದ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. 60 ಸದಸ್ಯರ ವಿಧಾನಸಭೆಗೆ ಫೆಬ್ರವರಿ 27ರಂದು ಚುನಾವಣೆ ನಡೆಯಲಿದೆ. ನಾವು ಸಾಧ್ಯವಾದಷ್ಟು ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಚುನಾವಣಾ ಪೂರ್ವ ಮೈತ್ರಿ ಇರುವುದಿಲ್ಲ” ಎಂದು ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಉತ್ತಮ ಆಡಳಿತ, ಪ್ರಾಮಾಣಿಕ ರಾಜಕೀಯ ಮತ್ತು ಭ್ರಷ್ಟಾಚಾರ ನಿರ್ಮೂಲನೆಯೊಂದಿಗೆ ರಾಜ್ಯದ ಒಟ್ಟಾರೆ ಅಭಿವೃದ್ಧಿಗಾಗಿ ನಾಗಾಲ್ಯಾಂಡ್ ಜನರು ಮತ ಚಲಾಯಿಸುವ ಸಮಯ ಬಂದಿದೆ ಎಂದು ಅವರು ಹೇಳಿದ್ದಾರೆ.
ನಾಗಾಲ್ಯಾಂಡ್‌ನ ರಾಜಕೀಯ ಸನ್ನಿವೇಶದಲ್ಲಿ ಅಗತ್ಯವಾದ ಬದಲಾವಣೆಯನ್ನು ತರಲು ಪಕ್ಷ ಎಲ್ಲ ಹಂತದವರನ್ನು ತಲುಪುತ್ತದೆ ಎಂದು ಶರ್ಮಾ ಭರವಸೆ ವ್ಯಕ್ತಪಡಿಸಿದರು.
Congratulations Mr. Asu Keyho, for being appointed as state president of AAP Nagaland. I hope under your leadership AAP will reach to grassroots of Nagaland & work for betterment of the state. pic.twitter.com/zFOuSS83on
— Rajesh Sharma ।ৰাজেশ শৰ্মা ।રાજેશ શર્મા ?? (@beingAAPian) January 25, 2023
ಈಶಾನ್ಯ ರಾಜ್ಯದ ಜನರು ಎಎಪಿ ಸರ್ಕಾರವನ್ನು ಬಯಸುತ್ತಾರೆ.ದೆಹಲಿಯಲ್ಲಿರುವ ನಾಗಾಗಳು, ಓದುತ್ತಿರಲಿ ಅಥವಾ ಕೆಲಸ ಮಾಡುತ್ತಿರಲಿ, ಅಲ್ಲಿನ ಅರವಿಂದ್ ಕೇಜ್ರಿವಾಲ್ ಸರ್ಕಾರದ ಅಡಿಯಲ್ಲಿ ಉತ್ತಮ ಆಡಳಿತ ಮತ್ತು ಭರವಸೆಗಳ ಈಡೇರಿಕೆಗೆ ಸಾಕ್ಷಿಯಾಗಿದ್ದಾರೆ ಎಂದು ಎಂದು ಕೀಹೋ ಹೇಳಿದರು.
ಇದನ್ನೂ ಓದಿ: ಟಿಎಂಸಿ ನಾಯಕ ಸಾಕೇತ್ ಗೋಖಲೆ ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ದುಡ್ಡನ್ನು ದುಂದುವೆಚ್ಚ ಮಾಡಿದ್ದಾರೆ: ಇಡಿ
2018ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸಿ ವಿಫಲವಾಗಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Thu, 26 January 23